ಕನ್ನಡ ಸುದ್ದಿ  /  Sports  /  Squads For T20 World Cup 2022

T20 World Cup 2022: ಸೂಪರ್‌ 12 ಹಂತದಲ್ಲಿ ಆಡುವ ತಂಡಗಳು ಯಾವುವು? ಆಟಗಾರರ ಪಟ್ಟಿ ನೋಡ ಬನ್ನಿ

ಸೂಪರ್‌ 12 ಹಂತದ ಪಂದ್ಯಗಳನ್ನು ಕೂಡಾ ಗ್ರೂಪ್‌ ಎ ಹಾಗೂ ಗ್ರೂಪ್‌ ಬಿ ಎಂದು ವರ್ಗೀಕರಿಸಲಾಗಿದೆ. ಎರಡೂ ಗುಂಪಿನಲ್ಲೂ ತಲಾ ಆರು ತಂಡಗಳು ಇರಲಿವೆ. ಈಗಾಗಲೇ ತಲಾ ನಾಲ್ಕು ತಂಡಗಳು ಎರಡೂ ಗುಂಪಿನಲ್ಲೂ ಸ್ಥಾನ ಪಡೆದಿವೆ. ಉಳಿದ ತಲಾ ಎರಡು ಸ್ಥಾನಗಳನ್ನು ಮೇಲೆ ಹೇಳಲಾದ ಪಂದ್ಯಗಳಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಆಕ್ರಮಿಸಿಕೊಳ್ಳಲಿವೆ. ಆಗ ಸೂಪರ್‌ 12 ಹಂತದ ಪಂದ್ಯಗಳನ್ನು ಆಡುವ ತಂಡಗಳ ಪಟ್ಟಿ ಸಿದ್ಧಗೊಳ್ಳಲಿವೆ.

ಟಿ20 ವಿಶ್ವಕಪ್‌
ಟಿ20 ವಿಶ್ವಕಪ್‌ (Twitter)

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್‌ 16ರಿಂದ ಗ್ರೂಪ್‌ ಹಂತದ ಪಂದ್ಯಗಳು ಆರಂಭಗೊಳ್ಳಲಿದ್ದು, ಅಕ್ಟೋಬರ್‌ 22ರಿಂದ ಸೂಪರ್‌ 12 ಹಂತದ ಪಂದ್ಯಗಳು ನಡೆಯಲಿವೆ. ಈಗಾಗಲೇ ಎಲ್ಲಾ ದೇಶಗಳು ತನ್ನ ದೇಶದ ಬಲಿಷ್ಠ ತಂಡವನ್ನು ವಿಶ್ವಕಪ್‌ಗೆ ಪ್ರಕಟಿಸಿವೆ.

ಸೂಪರ್‌ 12 ಹಂತದಲ್ಲಿ ವಿಶ್ವದ ಬಲಿಷ್ಠ ಎಂಟು ತಂಡಗಳು ನೇರವಾಗಿ ಸ್ಪರ್ಧಿಸಲಿವೆ. ಇನ್ನುಳಿದ ನಾಲ್ಕು ತಂಡಗಳ ಆಯ್ಕೆಗೆ ಗ್ರೂಪ್‌ ಹಂತದ ಪಂದ್ಯಗಳು ನಡೆಯಲಿವೆ. ಗ್ರೂಪ್‌ ಹಂತದ ಪಂದ್ಯದಲ್ಲಿ ಒಟ್ಟು ಎಂಟು ರಾಷ್ಟ್ರಗಳು ಸ್ಪರ್ಧಿಸಲಿದ್ದು, ಇದರಲ್ಲಿ ಅಗ್ರ ನಾಲ್ಕು ತಂಡಗಳು ಮಾತ್ರ ಸೂಪರ್‌ 12 ಹಂತಕ್ಕೆ ಸ್ಪರ್ಧಿಸಲಿವೆ. ಉಳಿದ ನಾಲ್ಕು ತಂಡಗಳು ಟೂರ್ನಿಯಿಂದ ನಿರ್ಗಮಿಸಲಿವೆ. ಗ್ರೂಪ್‌ ಹಂತದ ಪಂದ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗ್ರೂಪ್‌ ಎನಲ್ಲಿ ನಮೀಬಿಯಾ, ನೆದರ್ಲ್ಯಾಂಡ್ಸ್‌, ಶ್ರೀಲಂಕಾ ಹಾಗೂ ಯುಎಇ ತಂಡಗಳಿವೆ. ಗ್ರೂಪ್‌ ಬಿಯಲ್ಲಿ ಐರ್ಲೆಂಡ್‌, ಸ್ಕಾಟ್‌ಲ್ಯಾಂಡ್‌, ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ತಂಡಗಳು ಸ್ಪರ್ಧಿಸಲಿವೆ.

ಸೂಪರ್‌ 12 ಹಂತದ ಪಂದ್ಯಗಳನ್ನು ಕೂಡಾ ಗ್ರೂಪ್‌ ಎ ಹಾಗೂ ಗ್ರೂಪ್‌ ಬಿ ಎಂದು ವರ್ಗೀಕರಿಸಲಾಗಿದೆ. ಎರಡೂ ಗುಂಪಿನಲ್ಲೂ ತಲಾ ಆರು ತಂಡಗಳು ಇರಲಿವೆ. ಈಗಾಗಲೇ ತಲಾ ನಾಲ್ಕು ತಂಡಗಳು ಎರಡೂ ಗುಂಪಿನಲ್ಲೂ ಸ್ಥಾನ ಪಡೆದಿವೆ. ಉಳಿದ ತಲಾ ಎರಡು ಸ್ಥಾನಗಳನ್ನು ಮೇಲೆ ಹೇಳಲಾದ ಪಂದ್ಯಗಳಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಆಕ್ರಮಿಸಿಕೊಳ್ಳಲಿವೆ. ಆಗ ಸೂಪರ್‌ 12 ಹಂತದ ಪಂದ್ಯಗಳನ್ನು ಆಡುವ ತಂಡಗಳ ಪಟ್ಟಿ ಸಿದ್ಧಗೊಳ್ಳಲಿವೆ.

ಸೂಪರ್‌ 12 ಹಂತದ ಎ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ನ್ಯೂಜಿಲ್ಯಾಂಡ್‌ ತಂಡಗಳು ಸ್ಥಾನ ಪಡೆದಿವೆ. ಅದೇ ರೀತಿ ಬಿ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳಿವೆ.

ತಂಡಗಳಲ್ಲಿ ಯಾರ್ಯಾರಿದ್ದಾರೆ?

ಇಲ್ಲಿ ಸೂಪರ್‌ 12 ಹಂತಕ್ಕೆ ಈಗಾಗಲೇ ಪ್ರವೇಶ ಪಡೆದಿರುವ 12 ರಾಷ್ಟ್ರಗಳ ಆಟಗಾರರನ್ನು ನೋಡೋಣ

ಗ್ರೂಪ್‌ ಎ

ಅಫ್ಘಾನಿಸ್ತಾನ

ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ಜೈ, ದರ್ವಿಶ್ ರಸೂಲಿ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಮುಜೀಬ್ ಉರ್ ರಹಮದ್, ನವೀನ್ ಉಲ್ ಹಕ್, ಖೈಸ್ ಅಹ್ಮದ್, ರಶೀದ್ ಖಾನ್, ಸಲೀಂ ಸಫಿ

ಆಸ್ಟ್ರೇಲಿಯಾ

ಆರನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ.

ಇಂಗ್ಲೆಂಡ್

ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್.

ನ್ಯೂಜಿಲೆಂಡ್

ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಲಾಚ್ಲಾನ್ ಫರ್ಗುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್‌ವೆಲ್, ಟ್ರೆಂಟ್ ಬೌಲ್ಟ್ , ಫಿನ್‌ ಅಲೆನ್‌

ಗ್ರೂಪ್‌ ಬಿ

ಭಾರತ

ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಬಾಂಗ್ಲಾದೇಶ

ಶಕೀಬ್ ಅಲ್ ಹಸನ್, ಸಬ್ಬಿರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮೊಸಾಡೆಕ್ ಹೊಸೈನ್, ಲಿಟ್ಟನ್ ದಾಸ್,ಯಾಸಿರ್ ಅಲಿ, ನೂರುಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಸೈಫುದ್ದೀನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಹಸನ್ ಮಹಮೂದ್, ನಜ್ಮುಲ್ ಹೊಸೈನ್, ನಸುಮ್ ಅಹ್ಮದ್

ಪಾಕಿಸ್ತಾನ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಮಸೂದ್.

ದಕ್ಷಿಣ ಆಫ್ರಿಕಾ

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲ್ಲಿ ಟ್ರಿಸ್ಟಾನ್‌ಜೌಸಿ, ತಬ್ರಾಸೌಸಿ, ಟಾಬ್ರಾಸೌಸಿ ಸ್ಟಬ್ಸ್.

ವಿಭಾಗ