SRH vs RR IPL 2023: ವಾರಾಂತ್ಯಕ್ಕೆ ಡಬಲ್ ಮನರಂಜನೆ; ಹೈದರಾಬಾದ್‌ಗೆ ರಾಯಲ್ ಸವಾಲು, ಆಡುವ ಬಳಗ ಹೀಗಿರಲಿದೆ
ಕನ್ನಡ ಸುದ್ದಿ  /  ಕ್ರೀಡೆ  /  Srh Vs Rr Ipl 2023: ವಾರಾಂತ್ಯಕ್ಕೆ ಡಬಲ್ ಮನರಂಜನೆ; ಹೈದರಾಬಾದ್‌ಗೆ ರಾಯಲ್ ಸವಾಲು, ಆಡುವ ಬಳಗ ಹೀಗಿರಲಿದೆ

SRH vs RR IPL 2023: ವಾರಾಂತ್ಯಕ್ಕೆ ಡಬಲ್ ಮನರಂಜನೆ; ಹೈದರಾಬಾದ್‌ಗೆ ರಾಯಲ್ ಸವಾಲು, ಆಡುವ ಬಳಗ ಹೀಗಿರಲಿದೆ

ಈವರೆಗಿನ ಮುಖಾಮುಖಿಯ ಪ್ರಕಾರ, ಉಭಯ ತಂಡಗಳು ಕೂಡಾ ಬಲಿಷ್ಠವಾಗಿವೆ. ಎರಡು ತಂಡಗಳು ಈವರೆಗೆ ಒಟ್ಟು 16 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ಕೂಡಾ ತಲಾ 8 ಬಾರಿ ಗೆದ್ದರೆ, 8 ಬಾರಿ ಸೋಲನ್ನಪ್ಪಿವೆ.

ರಾಜಸ್ತಾನ್‌ ರಾಯಲ್ಸ್‌ ತಂಡ
ರಾಜಸ್ತಾನ್‌ ರಾಯಲ್ಸ್‌ ತಂಡ (PTI)

ಐಪಿಎಲ್‌ 2023ರ ಆವೃತ್ತಿಯ ಮೊದಲ ಭಾನುವಾರದ ಡಬಲ್‌ ಹೆಡರ್‌ ಪಂದ್ಯಗಳು ಇಂದು ನಡೆಯುತ್ತಿವೆ. ವೀಕೆಂಡ್‌ ಮನರಂಜನೆಗಾಗಿ ಎರಡೆರಡು ಪಂದ್ಯಗಳನ್ನು ನಿಗದಿಪಡಿಸಲಾಗಿದ್ದು, ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಕಣಕ್ಕಿಳಿಯುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕಣಕ್ಕಿಳಿಯುತ್ತಿದೆ.

ಭಾನುವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಕಣಕ್ಕಿಳಿಯುತ್ತಿದೆ. ಕಳೆದ ಋತುವಿನ ಬಳಿಕ ಎಸ್‌ಆರ್‌ಹೆಚ್ ಫ್ರಾಂಚೈಸಿಯು ನಾಯಕ ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಹೀಗಾಗಿ ತಂಡವು ನಾಯಕತ್ವದಲ್ಲಿ ಬದಲಾವಣೆ ಮಡಿದೆ. ಐಡೆನ್ ಮಾರ್ಕ್ರಾಮ್ ಅವರಿಗೆ ತಂಡದ ಜವಾಬ್ದಾರಿ ನೀಡಿದೆ. ಆದರೆ, ಮಾರ್ಕ್ರಾಮ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಭುವನೇಶ್ವರ್ ಕುಮಾರ್ ರಾಯಲ್ಸ್ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ಋತುವಿನಲ್ಲಿ ಒಂಬತ್ತು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ರಾಯಲ್ಸ್, ಫೈನಲ್‌ಗೆ ಲಗ್ಗೆ ಹಾಕಿತ್ತು. ನಾಯಕ ಸಂಜು ಸ್ಯಾಮ್ಸನ್ ಮತ್ತು ಆರಂಭಿಕ ಆಟಗಾರ ಜೋಸ್‌ ಬಟ್ಲರ್‌ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ್ದರು. ಹರಾಜಿನಲ್ಲಿ ತಂಡಕ್ಕೆ ಜೇಸನ್ ಹೋಲ್ಡರ್, ಆಡಮ್ ಝಂಪಾ ಮತ್ತು ಜೋ ರೂಟ್ ಕೂಡಾ ಸೇರಿಕೊಂಡಿದ್ದಾರೆ.

ಇಂದಿನ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಐಪಿಎಲ್‌ನ ಚೊಚ್ಚಲ ಋತುವನ್ನು ಗೆದ್ದ ನಂತರ ರಾಯಲ್ಸ್ ಇನ್ನೂ ತಮ್ಮ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಕಳೆದ ಋತುವಿನಲ್ಲಿ ರನ್ನರ್-ಅಪ್ ಆಗಿ ಅಭಿಯಾನ ಮುಗಿಸಿದ್ದ ತಂಡ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿತ್ತು.

ಯಾವ ತಂಡ ಬಲಿಷ್ಠ?

ಈವರೆಗಿನ ಮುಖಾಮುಖಿಯ ಪ್ರಕಾರ, ಉಭಯ ತಂಡಗಳು ಕೂಡಾ ಬಲಿಷ್ಠವಾಗಿವೆ. ಎರಡು ತಂಡಗಳು ಈವರೆಗೆ ಒಟ್ಟು 16 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ಕೂಡಾ ತಲಾ 8 ಬಾರಿ ಗೆದ್ದರೆ, 8 ಬಾರಿ ಸೋಲನ್ನಪ್ಪಿವೆ.

ಪಂದ್ಯದ ವಿವರ

ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಭಾನುವಾರ (ಏಪ್ರಿಲ್ 2) ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗುತ್ತದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ 3 HD. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತ ಲೈವ್‌ ಸ್ಟ್ರೀಮಿಂಗ್‌ ಲಭ್ಯವಿರುತ್ತದೆ.

ರಾಜಸ್ತಾನ್‌ ರಾಯಲ್ಸ್ ಸಂಭಾವ್ಯ ಆಡುವ ಬಳಗ

ಆರಂಭಿಕರು: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್.

ಮಧ್ಯಮ ಕ್ರಮಾಂಕ: ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿ.ಕೀ), ಶಿಮ್ರಾನ್ ಹೆಟ್ಮೆಯರ್.

ಆಲ್ ರೌಂಡರ್ಸ್: ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್.

ಬೌಲರ್‌ಗಳು: ಯಜುವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್.

ಹೈದರಾಬಾದ್‌ ಸಂಭಾವ್ಯ ಆಡುವ ಬಳಗ:

ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಉಪೇಂದ್ರ ಯಾದವ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ (ನಾಯಕ), ಟಿ ನಟರಾಜನ್, ಉಮ್ರಾನ್ ಮಲಿಕ್, ಆದಿಲ್ ರಶೀದ್, ಕಾರ್ತಿಕ್ ತ್ಯಾಗಿ.

ರಾಜಸ್ಥಾನ ರಾಯಲ್ಸ್ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ಯಜುವೇಂದ್ರ ಚಾಹಲ್, ಸಂದೀಪ್ ಶರ್ಮಾ, ಕುನಾಲ್ ಸಿಂಗ್ ರಾಥೋರ್, ಅಬ್ದುಲ್ ಬಸಿತ್, ಡೊನಾವ್ ಫೆರೇರಾ, ಧ್ರುವ್ ಜುರೆಲ್, ಕುಲದೀಪ್ ಸೇನ್, ಕುಲದೀಪ್ ಯಾದವ್, ಕೆಎಂ ಆಸಿಫ್, ಕೆಸಿ ಕಾರಿಯಪ್ಪ, ಆಕಾಶ್ ವಸಿಷ್ಟ್, ನವದೀಪ್ ಸೈನಿ, ಮುರುಗನ್ ಅಶ್ವಿನ್, ಆಡಮ್ ಝಂಪಾ, ಜೇಸನ್ ಹೋಲ್ಡರ್, ಜೋ ರೂಟ್

ಸನ್‌ರೈಸರ್ಸ್ ಹೈದರಾಬಾದ್ ತಂಡ

ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಗ್ಲೆನ್ ಫಿಲಿಪ್ಸ್(ವಿಕೆಟ್‌ ಕೀಪರ್), ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್(ನಾಯಕ), ಆದಿಲ್ ರಶೀದ್, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್, ಟಿ ನಟರಾಜನ್, ಸಮರ್ಥ ವ್ಯಾಸ್, ಅನ್ಮೋಲ್‌ಪ್ರೀತ್ ಸಿಂಗ್, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ನಿತೀಶ್ ರೆಡ್ಡಿ, ವಿವ್ರಾಂತ್ ಶರ್ಮಾ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.