ಕನ್ನಡ ಸುದ್ದಿ  /  Sports  /  T20 World Cup 2022 Dangerous Players Are Absent In This T20 World Cup

T20 World Cup 2022: ಈ ಸಲದ ಟಿ20 ವಿಶ್ವಕಪ್‌ನಲ್ಲಿ ಅಪಾಯಕಾರಿ ಆಟಗಾರರ ಗೈರು!; ಭಾರತ ಸೇರಿ ಯಾವ ದೇಶದಿಂದ ಯಾರ್ಯಾರು?

ಇನ್ನೇನು T20 ವಿಶ್ವಕಪ್ 2022ಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 16ರಿಂದ ಒಂದು ತಿಂಗಳ ಕಾಲ ನಡೆಯಲಿದ್ದು, ವಿಪರ್ಯಾಸ ಏನೆಂದರೆ ವಿಶ್ವದ 5 ಅತ್ಯುತ್ತಮ ಮತ್ತು ಅಪಾಯಕಾರಿ ಆಟಗಾರರು ಈ ಸಲದ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

ಈ ಸಲದ ಟಿ20 ವಿಶ್ವಕಪ್‌ನಲ್ಲಿ ಅಪಾಯಕಾರಿ ಆಟಗಾರರ ಗೈರು!; ಭಾರತ ಸೇರಿ ಯಾವ ದೇಶದಿಂದ ಯಾರ್ಯಾರು?
ಈ ಸಲದ ಟಿ20 ವಿಶ್ವಕಪ್‌ನಲ್ಲಿ ಅಪಾಯಕಾರಿ ಆಟಗಾರರ ಗೈರು!; ಭಾರತ ಸೇರಿ ಯಾವ ದೇಶದಿಂದ ಯಾರ್ಯಾರು?

ಇನ್ನೇನು T20 ವಿಶ್ವಕಪ್ 2022ಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 16ರಿಂದ ಒಂದು ತಿಂಗಳ ಕಾಲ ನಡೆಯಲಿದ್ದು, ಈ ಬಾರಿಯ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದೆ. ವಿಪರ್ಯಾಸ ಏನೆಂದರೆ ವಿಶ್ವದ 5 ಅತ್ಯುತ್ತಮ ಮತ್ತು ಅಪಾಯಕಾರಿ ಆಟಗಾರರು ಈ ಸಲದ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಅದೇ ರೀತಿ ಜೋಫ್ರಾ ಆರ್ಚರ್ ಮತ್ತು ಜಾನಿ ಬೈರ್‌ಸ್ಟೋವ್ ಇಂಗ್ಲೆಂಡ್ ಪರ ಆಡುವುದಿಲ್ಲ. ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.

ಬುಮ್ರಾ, ಜಡೇಜಾ ಔಟ್..‌

ಟೀಂ ಇಂಡಿಯಾದ ಟಿ20 ಸ್ಪೆಷಲಿಸ್ಟ್‌ಗಳಾದ ಜಸ್ಪ್ರೀತ್‌ ಬುಮ್ರಾ ಮತ್ತು ರವೀಂದ್ರ ಜಡೇಜಾ ಈ ಸಲದ ಟಿ20 ವಿಶ್ವಕಪ್‌ನ ಭಾಗವಾಗುತ್ತಿಲ್ಲ. ವೇಗದ ಬೌಲರ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇತ್ತೀಚೆಗಷ್ಟೇ ಫಿಟ್ ಆಗಿದ್ದ ಅವರು ಮೈದಾನಕ್ಕೆ ಮರಳಿದ್ದರು. ಬುಮ್ರಾ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆ ಬಳಿಕ ಬೆನ್ನು ನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇತ್ತ ರವೀಂದ್ರ ಜಡೇಜಾ ಈಗಾಗಲೇ ಮೊಣಕಾಲಿನ ನೋವಿನ ಸಮಸ್ಯೆಯಿಂದ ರೆಸ್ಟ್‌ನಲ್ಲಿದ್ದಾರೆ. ಜಡೇಜಾ 2022ರ ಆಗಸ್ಟ್‌ನಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ ಪರ ಕೊನೆಯ ಪಂದ್ಯ ಆಡಿದ್ದರು. ಇದೀಗ ಈ ಇಬ್ಬರ ಅನುಪಸ್ಥಿತಿಯಲ್ಲಿಯೇ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಲಿದೆ.

ಭಾರತ ಆಡುವ 11ರ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್‌ ಸಿರಾಜ್

ಪಾಕ್‌ ವೇಗಿ ಶಾಹಿನ್‌ ಆಫ್ರಿದಿ ತಂಡದಲ್ಲಿಲ್ಲ.

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಜುಲೈ 2022ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಶಾಹೀನ್ ಕೊನೆಯ ಪಂದ್ಯ ಆಡಿದ್ದರು. ಅದಾದ ಮೇಲೆ ಈವರೆಗೂ ಅವರು ಮೈದಾನಕ್ಕೆ ಇಳಿದಿಲ್ಲ.

ಪಾಕಿಸ್ತಾನ ಆಡುವ 11ರ ಬಳಗ: ಬಾಬರ್ ಅಜಮ್ (ಸಿ), ಶಾದಾಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾನ್ ಮಸೂದ್, ಉಸ್ಮಾನ್ ಮಸೂದ್ . ಸ್ಟ್ಯಾಂಡ್‌ಬೈ ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್, ಶಾನವಾಜ್ ದಹಾನಿ.

ಇಂಗ್ಲೆಂಡ್‌ ತಂಡದಲ್ಲಿಲ್ಲ ಇಬ್ಬರು ಸ್ಟಾರ್‌ ಆಟಗಾರರು..

ಇಂಗ್ಲೆಂಡ್ ತಂಡದ ವಿಚಾರವಾಗಿ ನೋಡುವುದಾದರೆ, ಜಾನಿ ಬೈರ್‌ಸ್ಟೋ ಮತ್ತು ಜೋಫ್ರಾ ಆರ್ಚರ್ ಗಾಯದ ಸಮಸ್ಯೆಯಿಂದ ತಂಡದಿಂದ ಔಟ್ ಆಗಿದ್ದಾರೆ.

ಇಂಗ್ಲೆಂಡ್‌ ಆಡುವ 11ರ ಬಳಗ:‌ ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕುರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.