ಬಾಲಿವುಡ್​​ ನಟಿಯನ್ನು ಅಪ್ಪಿಕೊಂಡಿದ್ದು ಶುಭ್ಮನ್ ಗಿಲ್; ಆದರೆ ಟ್ರೋಲ್ ಆಗ್ತಿರೋದು ರಿಯಾನ್ ಪರಾಗ್, ಯಾಕೆ?-team india batter shubman gill hugs ananya panday but fans trolling other cricketer riyan parag know why prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಬಾಲಿವುಡ್​​ ನಟಿಯನ್ನು ಅಪ್ಪಿಕೊಂಡಿದ್ದು ಶುಭ್ಮನ್ ಗಿಲ್; ಆದರೆ ಟ್ರೋಲ್ ಆಗ್ತಿರೋದು ರಿಯಾನ್ ಪರಾಗ್, ಯಾಕೆ?

ಬಾಲಿವುಡ್​​ ನಟಿಯನ್ನು ಅಪ್ಪಿಕೊಂಡಿದ್ದು ಶುಭ್ಮನ್ ಗಿಲ್; ಆದರೆ ಟ್ರೋಲ್ ಆಗ್ತಿರೋದು ರಿಯಾನ್ ಪರಾಗ್, ಯಾಕೆ?

Shubman Gill-Ananya Panday: ಟೀಮ್ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡ್ಯ ಅವರು ಜಾಹೀರಾತು ಶೂಟಿಂಗ್ ವೇಳೆ ಅಪ್ಪಿಕೊಂಡ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನಿಟ್ಟುಕೊಂಡು ಕ್ರಿಕೆಟ್ ಫ್ಯಾನ್ಸ್ ರಿಯಾನ್ ಪರಾಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕಾರಣ ಏನಿರಬಹುದು?

ಬಾಲಿವುಡ್​​ ನಟಿಯನ್ನು ಅಪ್ಪಿಕೊಂಡಿದ್ದು ಶುಭ್ಮನ್ ಗಿಲ್; ಆದರೆ ಟ್ರೋಲ್ ಆಗ್ತಿರೋದು ರಿಯಾನ್ ಪರಾಗ್
ಬಾಲಿವುಡ್​​ ನಟಿಯನ್ನು ಅಪ್ಪಿಕೊಂಡಿದ್ದು ಶುಭ್ಮನ್ ಗಿಲ್; ಆದರೆ ಟ್ರೋಲ್ ಆಗ್ತಿರೋದು ರಿಯಾನ್ ಪರಾಗ್

Shubman Gill-Ananya Panday: ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಒಟ್ಟಾಗಿ ಇತ್ತೀಚೆಗೆ ಜಾಹೀರಾತುವೊಂದರಲ್ಲಿ ನಟಿಸಿದ್ದಾರೆ. ಈ ವೇಳೆ ಪರಸ್ಪರ ಇಬ್ಬರೂ ಅಪ್ಪಿಕೊಂಡ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು. ಆದರೆ, ಇವರಿಬ್ಬರು ಹಗ್ ಮಾಡಿಕೊಂಡರೆ, ಕ್ರಿಕೆಟ್ ಅಭಿಮಾನಿಗಳು ಭಾರತದ ಮತ್ತೊಬ್ಬ ಕ್ರಿಕೆಟಿಗ ರಿಯಾನ್ ಪರಾಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರ ಹಿಂದೆ ಬಲವಾದ ಕಾರಣವೇ ಅಡಗಿದೆ.

ಗಿಲ್, ಅನನ್ಯ ಜಾಹೀರಾತು ಶೂಟಿಂಗ್

ಶುಭ್ಮನ್ ಗಿಲ್ ಮತ್ತು ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಸೇರಿ ಬೀಟ್ಸ್ ಇಯರ್‌ಫೋನ್‌ ಜಾಹೀರಾತಿನಲ್ಲಿ ನಟಿಸಿರು. ಈ ಸಂದರ್ಭದಲ್ಲಿ ತೆರೆಮರೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜಾಹೀರಾತಿನಲ್ಲಿ ನಟಿಸುವುದಕ್ಕೂ ಮುನ್ನ ಅನನ್ಯಾ ಮತ್ತು ಗಿಲ್​ರನ್ನು ಕ್ಯಾಶುಯಲ್ ಆಗಿ ತಬ್ಬಿಕೊಳ್ಳುವುದನ್ನು ಈ ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ಬಾಲಿವುಡ್ ನಟಿಯರು-ಕ್ರಿಕೆಟಿಗರು ಜಾಹೀರಾತಿನಲ್ಲಿ ನಟಿಸುವುದು ಹೊಸದೇನಲ್ಲ.

ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಶುಭ್ಮನ್ ಮತ್ತು ಅನನ್ಯಾ ಡೇಟಿಂಗ್ ನಡೆಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್​​ಗಳೂ ಎದ್ದಿವೆ. ಅವೆಲ್ಲವೂ ಸುಳ್ಳು. ಇದು ಕೇವಲ ಜಾಹೀರಾತಿನ ಭಾಗ ಎಂದು ಕೆಲವರು ಸ್ಪಷ್ಟನೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ಗಿಲ್, ಅನನ್ಯಾ ಹಗ್ ವಿಡಿಯೋ ಇಟ್ಟುಕೊಂಡು ಭಾರತ ತಂಡದ ಮತ್ತೊಬ್ಬ ಕ್ರಿಕೆಟಿಗ ಪರಾಗ್ ಟ್ರೋಲ್ ಮಾಡಿ ರುಬ್ಬುತ್ತಿದ್ದಾರೆ. ಸದ್ಯ ಕ್ರಿಕೆಟ್​ ಸರ್ಕಲ್​​ನಲ್ಲಿ ಇದರ ಸದ್ದೇ ಹೆಚ್ಚಾಗಿದೆ.

ರಿಯಾನ್ ಪರಾಗ್ ಫುಲ್ ಟ್ರೋಲ್

ಗಿಲ್-ಅನನ್ಯಾ ವಿಡಿಯೋ ಮತ್ತು ಫೋಟೋಗಳನ್ನು ಟ್ರೋಲ್ ಮಾಡುತ್ತಾ ರಿಯಾನ್ ಪರಾಗ್ ಅವರನ್ನು ಅಭಿಮಾನಿಗಳು ರೇಗಿಸುತ್ತಿದ್ದಾರೆ. ರಿಯಾನ್ ಪರಾಗ್ ಅಳುತ್ತಿರುವಂತೆ ಫೋಟೋ ಎಡಿಟ್ ಮಾಡಿ ಫೋಟೋಗಳನ್ನು ಹರಿಯಬಿಟ್ಟಿದ್ದಾರೆ. ಇದಕ್ಕೆ ಕಾರಣ ಏನೆಂದರೆ.. ಈ ಹಿಂದೆ ಪರಾಗ್ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋಗಳನ್ನು ಗೂಗಲ್​​ ಸರ್ಚ್​​ನಲ್ಲಿ ಹುಡುಕಿದ್ದ ಸರ್ಚ್​ ವೈರಲ್ ಆಗಿತ್ತು.

ಗೂಗಲ್​​​ ಸರ್ಚ್​​ನಲ್ಲಿ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಅವರ ಹಾಟ್ ವಿಡಿಯೋಗಳಿಗಾಗಿ ಸರ್ಚ್​ ಮಾಡಿದ್ದನ್ನೇ ಗುರಿಯಾಗಿಸಿ ಇದೀಗ ಪರಾಗ್​ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಗಿಲ್-ಅನನ್ಯ ತಬ್ಬಿಕೊಂಡರೆ, ಪಕ್ಕದಲ್ಲಿ ರಿಯಾನ್ ಅಳುವಂತೆ ಎಡಿಟ್ ಮಾಡಲಾಗಿದೆ. ಸರ್ಚ್​ ಹಿಸ್ಟರಿಯಲ್ಲಿ ಪರಾಗ್ ಬಾಲಿವುಡ್ ನಟಿಯರ ಹಾಟ್ ವಿಡಿಯೋಗಳಿಗಾಗಿ ಹುಡುಕಾಡಿದ್ದು ಕಂಡುಬಂದಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ದುಲೀಪ್ ಟ್ರೋಫಿ ಆಡುತ್ತಿದ್ದಾರೆ ಪರಾಗ್

ಶುಭ್ಮನ್ ಗಿಲ್ ಅವರು ದುಲೀಪ್ ಟ್ರೋಫಿಯ ಭಾಗವಾಗಿ ಭಾರತ ಎ ತಂಡದಲ್ಲಿ ಕಣಕ್ಕಿಳಿದಿದ್ದರು. ಆದರೆ ಬಾಂಗ್ಲಾದೇಶ ವಿರುದ್ಧ ಇದೇ ತಿಂಗಳ 19ರಂದು ಮೊದಲ ಟೆಸ್ಟ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಅವರು ಬಾಂಗ್ಲಾದೇಶ ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಈ ಸ್ಥಾನದಲ್ಲಿ ಇದುವರೆಗೆ 9 ಇನ್ನಿಂಗ್ಸ್ ಆಡಿರುವ ಗಿಲ್ ಎರಡು ಶತಕ ಹಾಗೂ ಎರಡು ಅರ್ಧಶತಕಗಳೊಂದಿಗೆ 452 ರನ್ ಗಳಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರೋಹಿತ್ ಮತ್ತು ಯಶಸ್ವಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಗಿಲ್ ಮೂರನೇ ಸ್ಥಾನದಲ್ಲಿ ಮತ್ತು ವಿರಾಟ್ ನಾಲ್ಕನೇ ಸ್ಥಾನಕ್ಕೆ ಬ್ಯಾಟಿಂಗ್ ಮಾಡಲಿದ್ದಾರೆ. ರಿಯಾನ್ ಪರಾಗ್ ವಿಷಯಕ್ಕೆ ಬರುವುದಾದರೆ, ಅವರು ಇತ್ತೀಚೆಗೆ ಜಿಂಬಾಬ್ವೆ ಸರಣಿಯಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿರುವುದು ತಿಳಿದಿದೆ. ಬಳಿಕ ಶ್ರೀಲಂಕಾ ಪ್ರವಾಸಕ್ಕೂ ಆಯ್ಕೆಯಾಗಿದ್ದರು. ಈ ಸರಣಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಇತ್ತೀಚೆಗೆ ದುಲೀಪ್ ಟ್ರೋಫಿಯ ಅಂಗವಾಗಿ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವಿನ ಪಂದ್ಯದಲ್ಲಿ ಆಡಿದ್ದರು.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.