ಕನ್ನಡ ಸುದ್ದಿ  /  Sports  /  Team India Should Play With Hardik Pandya Shane Watson Explains Why Team Need Him In Wtc Final

WTC ಫೈನಲ್​​ ಗೆಲ್ಲಬೇಕೆಂದ್ರೆ ಹಾರ್ದಿಕ್​ರನ್ನು ಆಡಿಸಿ, ತಂಡಕ್ಕೆ ಆತನ ಅಗತ್ಯ ಇದೆ: ಶೇನ್​ ವ್ಯಾಟ್ಸನ್​​

ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯರನ್ನು (Hardik Pandya) ಟೆಸ್ಟ್​ ಕ್ರಿಕೆಟ್​ಗೆ ಮರಳಿ ಕರೆತರುವ ಯೋಜನೆಯಲ್ಲಿದ್ದೇವೆ ಎಂದು ಕಳೆದ ವಾರವಷ್ಟೇ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರೊಬ್ಬರು ಹಾರ್ದಿಕ್​ ಪರ ಬ್ಯಾಟ್ ಬೀಸಿದ್ದಾರೆ.

ಹಾರ್ದಿಕ್​ ಪಾಂಡ್ಯ
ಹಾರ್ದಿಕ್​ ಪಾಂಡ್ಯ

ಬಾರ್ಡರ್​​ - ಗವಾಸ್ಕರ್​​ ಟ್ರೋಫಿ (Border - Gavaskar Trophy) ಗೆದ್ದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ತಂಡದ ಕೃಪಾಕಟಾಕ್ಷದಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ (ICC World Test ChampionShip Final) ಪ್ರವೇಶ ನೀಡಿದೆ. ಸದ್ಯ ಮಾರ್ಚ್​ 17ರಿಂದ ಶುರುವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಿದ್ಧವಾಗುತ್ತಿದೆ. ಆದರೆ, ಇದಕ್ಕೂ ಮೊದಲೇ ಹಾರ್ದಿಕ್ ಪಾಂಡ್ಯ​ ಅವರನ್ನು ಟೆಸ್ಟ್ ಕ್ರಿಕೆಟ್​ಗೆ ಆಯ್ಕೆ ಮಾಡುವಂತೆ ಕೂಗು ಕೇಳಿಬಂದಿದೆ.

ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ (All Rounder Hardik Pandya) ಅವರನ್ನು ಟೆಸ್ಟ್​ ಕ್ರಿಕೆಟ್​ಗೆ ಮರಳಿ ಕರೆತರುವ ಯೋಜನೆಯಲ್ಲಿದ್ದೇವೆ ಎಂದು ಕಳೆದ ವಾರವಷ್ಟೇ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರೊಬ್ಬರು ಹಾರ್ದಿಕ್​ ಪರ ಬ್ಯಾಟ್ ಬೀಸಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಮಾಡುವಂತೆ ಬಿಸಿಸಿಐಗೆ ಸೂಚಿಸಿದ್ದಾರೆ.

2020ರ ಡಿಸೆಂಬರ್​​​ನಲ್ಲಿ T20 ಮತ್ತು ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 'ಮ್ಯಾನ್ ಆಫ್ ದಿ ಸೀರೀಸ್' ಗೆದ್ದ ಹಾರ್ದಿಕ್ ಪಾಂಡ್ಯ, ಟೆಸ್ಟ್​ ಕ್ರಿಕೆಟ್​ನಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಈಗ ಆ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಟಿ20, ಏಕದಿನ ಕ್ರಿಕೆಟ್​​ಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಆದರೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್​ ವ್ಯಾಟ್ಸನ್ (Shane Watson) ಮಾತನಾಡಿದ್ದು, ಹಾರ್ದಿಕ್ ಫಿಟ್ ಆಗಿದ್ದರೆ ಅವರನ್ನು ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಕರೆ ತರಬೇಕು. ಅವರ ಕೌಶಲ್ಯಗಳು ತಂಡಕ್ಕೆ ಹೆಚ್ಚು ಅಗತ್ಯವಿದೆ. ಟೆಸ್ಟ್‌ನಲ್ಲಿ ಲಾಂಗ್ ಸ್ಪೆಲ್ ಆಡದಿದ್ದರೂ ತಂಡದಲ್ಲಿ ಉಳಿಯಲು ಅವರ ಬ್ಯಾಟಿಂಗ್ ಕೌಶಲ್ಯ ಸಾಕು ಎಂದು ಹೇಳಿದ್ದಾರೆ.

ಅವರು ಹೊಸ ಚೆಂಡನ್ನು ಅದ್ಭುತವಾಗಿ ಸ್ವಿಂಗ್ ಮಾಡುತ್ತಾರೆ. ಇಂಗ್ಲೆಂಡ್ ಪಿಚ್‌ನಲ್ಲಿ ಸ್ವಿಂಗ್ ಬೌಲಿಂಗ್ ಬಹಳ ಮುಖ್ಯ. ತಂಡದ ಯಶಸ್ಸಿನಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಗೆಲ್ಲಬೇಕಾದರೆ ಹಾರ್ದಿಕ್ ಪಾಂಡ್ಯ ಅವರಂತಹ ವಿಶೇಷ ಪ್ರತಿಭೆ ಹೊಂದಿರುವ ಆಟಗಾರರನ್ನು ಆಡಿಸಬೇಕು' ಎಂದು ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಪ್ರತಿಕ್ರಿಯಿಸಿದ್ದಾರೆ.

ಇಂಜುರಿ ಬಳಿಕ ಟೆಸ್ಟ್​​​ ತಂಡಕ್ಕೆ ದೂರ.!

2018ರಲ್ಲಿ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್​​​​ ಪಾಂಡ್ಯ, ಸಂಪೂರ್ಣ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದು, 2020ರಲ್ಲಿ. ಗಾಯದ ನಂತರ ಟೀಮ್​ ಇಂಡಿಯಾ ಸೇರಿಕೊಂಡ ಹಾರ್ದಿಕ್ ಫೀಲ್ಡಿಂಗ್​​​, ಬ್ಯಾಟಿಂಗ್​​​ನಲ್ಲಿ ಕೊಡುಗೆ ನೀಡುತ್ತಿದ್ದರು. ಆದರೆ ಬೌಲಿಂಗ್​​ನಿಂದ ಹಿಂದೆ ಸರಿದರು. IPL​ನಲ್ಲೂ ಇದೇ ಪುನರಾವರ್ತನೆಯಾಯಿತು. ಆ ಬಳಿಕ ಟೆಸ್ಟ್​ ತಂಡದಿಂದ ಅವರನ್ನು ಕೈಬಿಡಲಾಯಿತು. ರೆಡ್​​ ಬಾಲ್ ಕ್ರಿಕೆಟ್​​​ಗೆ (ಟೆಸ್ಟ್) ಮರಳುತ್ತೀರಾ ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರಿಸಿದ್ದ ಪಾಂಡ್ಯ, ಆ ಯೋಚನೆ ಇಲ್ಲ ಎಂದಿದ್ದರು. ಆದರೆ ಅವಕಾಶ ಸಿಕ್ಕರೆ ಟೆಸ್ಟ್ ತಂಡಕ್ಕೆ ಮರಳುವೆ ಎಂದು ಕಳೆದ ವರ್ಷ ಈ ಬಗ್ಗೆ ಹೇಳಿದ್ದರು.

2017ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯ ಬಾರಿಗೆ 2018 ರಲ್ಲಿ ಟೆಸ್ಟ್ ಆಡಿದರು. ಅವರು ಈ ಸ್ವರೂಪದಲ್ಲಿ 532 ರನ್ ಗಳಿಸಿದ್ದು, ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಬೌಲರ್ ಆಗಿ 17 ವಿಕೆಟ್ ಕೂಡ ಪಡೆದಿದ್ದಾರೆ.

​ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾದ ONE OF THE FINEST ಆಲ್​ರೌಂಡರ್​​​.! 4D ಪ್ಲೇಯರ್​​ ಅಂತಾನೇ ಖ್ಯಾತಿ ಪಡೆದಿದ್ದಾರೆ. ಬ್ಯಾಟಿಂಗ್​​, ಬೌಲಿಂಗ್​​​, ಫೀಲ್ಡಿಂಗ್​​​ ಜೊತೆಗೆ ನಾಯಕನಾಗಿಯೂ ಖತನಾರ್ಕ್​ ಪ್ರದರ್ಶನ ನೀಡುತ್ತಿದ್ದಾರೆ. ಮೆನ್​ ಇನ್​ ಬ್ಲೂ ಪಡೆಯ ಬಿಗ್​ ​ಗೇಮ್​​​ ಚೇಂಜರ್​, ಮ್ಯಾಚ್​ ವಿನ್ನರ್ ಎನಿಸಿರುವ ಹಾರ್ದಿಕ್​, ಮತ್ತೆ ವೈಟ್​ ಜೆರ್ಸಿ ತೊಡುತ್ತಾರಾ ಇಲ್ವೋ ಅನ್ನೋದನ್ನು ಕಾದುನೋಡಬೇಕು.