ಕನ್ನಡ ಸುದ್ದಿ  /  Sports  /  Up Warriorz Vs Mumbai Indians Wpl 2023 Live Streaming

Women's Premier League: ಅಗ್ರಸ್ಥಾನಿ ಮುಂಬೈಗೆ ಯುಪಿ ಸವಾಲು; ಅಜೇಯವಾಗಿ ಪ್ಲೇಆಫ್ ಎಂಟ್ರಿಗೆ ಕೌರ್ ಪಡೆ ಪ್ಲಾನ್‌

ಈ ಪಂದ್ಯ ಮತ್ತು ಡಬ್ಲ್ಯೂಪಿಎಲ್‌ನ ಎಲ್ಲಾ ಪಂದ್ಯಗಳು Sports18 Networkನಲ್ಲಿ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡ ಸಿನಿಮಾದಲ್ಲಿ ಕನ್ನಡ ಕಾಮೆಂಟರಿಯೊಂದಿಗೆ ಪಂದ್ಯ ಪ್ರಸಾರವಾಗಲಿದೆ.

ಯುಪಿ ವಾರಿಯರ್ಸ್
ಯುಪಿ ವಾರಿಯರ್ಸ್ (Twitter)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌(Women's Premier League)ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಯುಪಿ ವಾರಿಯರ್ಸ್‌ (UP Warriorz) ತಂಡವನ್ನು ಎದುರಿಸಲಿದೆ. ಪ್ರಸ್ತುತ ಐದು ತಂಡಗಳ ನಡುವಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್, ಯುಪಿ ವಿರುದ್ಧವೂ ಗೆದ್ದು ಅಗ್ರಸ್ಥಾನದಲ್ಲೇ ಮುಂದುವರೆಯಲು ಎದುರು ನೋಡುತ್ತಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವು, ಇದುವರೆಗೆ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಅಜೇಯವಾಗಿ ಮುನ್ನಡೆಯುತ್ತಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಗೆದ್ದಿದ್ದ ಯುಪಿ ವಾರಿಯರ್ಸ್‌ ತಂಡವು, ತನ್ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತಿತ್ತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಮುನ್ನುಗ್ಗುತ್ತಿದೆ. ಇಂದು ಅಂಕಪಟ್ಟಿಯ ಅಗ್ರಸ್ಥಾನಿಯನ್ನು ಕೂಡಾ ಸೋಲಿಸಿ ಪ್ಲೇಆಫ್‌ ಹಂತಕ್ಕೇರುವ ಕನಸು ಕಾಣುತ್ತಿದೆ.

ಯುಪಿ ವಾರಿಯರ್ಜ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಯುಪಿ ವಾರಿಯರ್ಜ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು ಪಂದ್ಯವು ಮಾರ್ಚ್ 11ರ ಭಾನುವಾರದಂದು ನಡೆಯಲಿದೆ. ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಯುಪಿ ವಾರಿಯರ್ಜ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ಪಂದ್ಯವು ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಟಾಸ್ ಪ್ರಕ್ರಿಯೆ ಸಂಜೆ 07:00ಕ್ಕೆ ನಡೆಯಲಿದೆ.

ಪಂದ್ಯವನ್ನು ಟಿವಿಯಲ್ಲಿ ಯಾವ ವಾಹಿನಿಯಲ್ಲಿ ವೀಕ್ಷಿಸಬಹುದು?

ಈ ಪಂದ್ಯ ಮತ್ತು ಡಬ್ಲ್ಯೂಪಿಎಲ್‌ನ ಎಲ್ಲಾ ಪಂದ್ಯಗಳು Sports18 Networkನಲ್ಲಿ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡ ಸಿನಿಮಾದಲ್ಲಿ ಕನ್ನಡ ಕಾಮೆಂಟರಿಯೊಂದಿಗೆ ಪಂದ್ಯ ಪ್ರಸಾರವಾಗಲಿದೆ.

ಮೊಬೈಲ್‌ನಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನಾನು ಎಲ್ಲಿ ವೀಕ್ಷಿಸಬಹುದು?

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ.

ಸಂಭಾವ್ಯ ಆಡುವ ಬಳಗ

ಯುಪಿ ವಾರಿಯರ್ಸ್‌ : ಅಲಿಸ್ಸಾ ಹೀಲಿ (c & wk), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಮುಂಬೈ ಇಂಡಿಯನ್ಸ್‌ : ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (WK), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ವಿಮೆನ್ಸ್‌ ಪ್ರೀಮಿಯರ್ ಲೀಗ್ (WPL)ನ ನಿನ್ನೆಯ(ಶನಿವಾರ) ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ ಸಾಧಿಸಿದೆ. ಗುಜರಾತ್‌ ನೀಡಿದ ಅಲ್ಪ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ್ದ ಮೆಗ್‌ ಲ್ಯಾನಿಂಗ್‌ ಪಡೆ ಭರ್ಜರಿ ಹತ್ತು ವಿಕೆಟ್‌ಗಳಿಂದ ಗೆದ್ದು ಬೀಗಿತು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌, ಮರಿಜಾನ್ನೆ ಕಾಪ್ ಮಾರಕ ದಾಳಿಗೆ ತತ್ತರಿಸಿ ಕೇವಲ 105 ರನ್‌ ಪೇರಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ಆರಂಭಿಸಿದ ಡೆಲ್ಲಿ, ಶಫಾಲಿ ವರ್ಮಾ ಸ್ಫೋಟಕ ಅರ್ಧಶತಕದ ಎರವಿನಿಂದ ಕೇವಲ 7.1 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 107 ರನ್‌ ಗಳಿಸಿ ಗುರಿ ಮುಟ್ಟಿತು.

ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಶಫಾಲಿ ವರ್ಮಾ, ಕೇವಲ 28 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸ್ಫೋಟಕ ಸಿಕ್ಸರ್‌ ಸಹಿತ 76 ರನ್‌ ಗಳಿಸಿದರು. 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಮತ್ತಷ್ಟು ಸ್ಫೋಟಕವಾಗಿ ಬ್ಯಾಟ್‌ ಬೀಸಿ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು.