MI vs UPW: ಮುಂಬೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಯುಪಿ.. ಹರ್ಮನ್ ಪಡೆಗೆ ಮೊದಲ ಸೋಲು!
MIW VS UPW: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಪ್ಲೇ ಆಫ್ಗೆ ಅರ್ಹತೆ ಪಡೆದಿರುವ ಮುಂಬೈ, ಯುಪಿ ವಾರಿಯರ್ಸ್ ವಿರುದ್ಧದ ರೋಚಕ ಹಣಾಹಣಿಯಲ್ಲಿ 5 ವಿಕೆಟ್ಗಳ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್, ಪ್ಲೇ ಆಫ್ಗೆ ಮತ್ತಷ್ಟು ಸನಿಹಕ್ಕೆ ಬಂದು ನಿಂತಿದೆ.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸತತ ಐದು ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಮುಂಬೈ ಇಂಡಿಯನ್ಸ್, ಕೊನೆಗೂ ಪಲ್ಟಿ ಹೊಡೆದಿದೆ. ಯುಪಿ ವಾರಿಯರ್ಸ್ ವಿರುದ್ಧ 6ನೇ ಗೆಲುವಿಗೆ ಪಣ ತೊಟ್ಟ ಹರ್ಮನ್ ಪಡೆ, ಟೂರ್ನಿಯಲ್ಲಿ ಮೊದಲು ಕಂಡಿದೆ. ಈಗಾಗಲೇ ಪ್ಲೇ ಆಫ್ಗೆ ಅರ್ಹತೆ ಪಡೆದಿರುವ ಮುಂಬೈ, ರೋಚಕ ಹಣಾಹಣಿಯಲ್ಲಿ 5 ವಿಕೆಟ್ಗಳ ಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್, ಪ್ಲೇ ಆಫ್ಗೆ ಮತ್ತಷ್ಟು ಹತ್ತಿರವಾಗಿದೆ.
ಟ್ರೆಂಡಿಂಗ್ ಸುದ್ದಿ
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೈಫಲ್ಯದ ಕಾರಣ 20 ಓವರ್ಗಳಲ್ಲಿ 127 ರನ್ಗಳಿಗೆ ಸರ್ವಪತನ ಕಂಡಿತು. ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುಪಿ, ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ಈ ಸುಲಭ ಗುರಿ ಬೆನ್ನಟ್ಟಿದ ಯುಪಿ, ಗೆಲುವಿಗಾಗಿ ಹರಸಾಹಸ ಪಟ್ಟಿತು. ಕೊನೆಯ ಓವರ್ವರೆಗೂ ಕೊಂಡೊಯಿತು. ಅಂತಿಮ ಓವರ್ನಲ್ಲಿ ಇನ್ನೂ 3 ಓವರ್ಗಳನ್ನೂ ಬಾಕಿ ಉಳಿಸಿ, ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್, ಮತ್ತೊಂದು ಬಿಗ್ ಸ್ಕೋರ್ ಕಲೆ ಹಾಕುವ ನಿರೀಕ್ಷೆಯಲ್ಲಿ ಕಣಕ್ಕಿಳಿಯಿತು. ಆರಂಭದಿಂದಲೇ ಹೊಡಿ ಬಡಿ ಆಟಕ್ಕೆ ಕೈ ಹಾಕುತ್ತಿದ್ದ ಮುಂಬೈ ಆಟಗಾರ್ತಿಯರು, ಯುಪಿ ಬೌಲರ್ಗಳ ಮುಂದೆ ಪರದಾಟ ನಡೆಸಿದರು. ನಿಧಾನಗತಿ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ, 15 ಎಸೆತಗಳಲ್ಲಿ 7 ರನ್ಗಳಿಸಿ ನಿರ್ಗಮಿಸಿದರು.
ಯಾಸ್ತಿಕಾ ಜೊತೆಗೆ ಹೀಲಿ ಮ್ಯಾಥ್ಯೂಸ್ ಸಹ ನಿಧಾನವಾಗಿ ಬ್ಯಾಟಿಂಗ್ ನಡೆಸಿದರು. ಬಳಿಕ ಸಿಕ್ಸರ್ಗಳ ಸುರಿಮಳೆಗೈದರು. ಇದರ ನಡುವೆಯೂ ಪವರ್ಪ್ಲೇನಲ್ಲಿ ಬಿಗ್ಸ್ಕೋರ್ ಹಾಕುವಲ್ಲಿ ಮುಂಬೈ ವಿಫಲವಾಯಿತು. ಕೆಲ ಹೊತ್ತು ಅಬ್ಬರಿಸಿದ ಹೀಲಿ, 35 ರನ್ಗೆ ವಿಕೆಟ್ ಒಪ್ಪಿಸಿದರು. ನಟಾಲಿ ಸೀವರ್ (5), ಹರ್ಮನ್ ಪ್ರೀತ್ ಕೌರ್ (25), ಅಮೆಲಿಯಾ ಕೇರ್ (3), ಅಮಂಜೋತ್ ಕೌರ್ (5) ಯಾರೂ ಮುಂಬೈಗೆ ನೆರವಾಗಲಿಲ್ಲ.
ಆದರೆ ಕೊನೆಯಲ್ಲಿ ವಿಕೆಟ್ ಪತನದ ನಡುವೆಯೂ ಇಸ್ಸಿ ವಾಂಗ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 19 ಎಸೆತಗಳಲ್ಲಿ 32 ರನ್ ಚಚ್ಚಿದರು. ಅಂತಿಮವಾಗಿ ಮುಂಬೈ 20 ಓವರ್ಗಳಲ್ಲಿ 127 ರನ್ಗೆ ಸರ್ವಪತನ ಕಂಡಿತು. ಸೋಫಿ ಎಕ್ಲೆಸ್ಟನ್ 3 ವಿಕೆಟ್, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರೆ, ಅಂಜಲಿ ಸರ್ವಾಣಿ ಒಂದು ವಿಕೆಟ್ ಪಡೆದು ಮಿಂಚಿದರು.
ಸಾಧಾರಣ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಕೂಡ ಪರದಾಟ ನಡೆಸಿತು. ದೇವಿಕಾ ವೈದ್ಯ (1), ನಾಯಕಿ ಅಲೀಸಾ ಹೀಲಿ (8), ಕಿರಣ್ ನವಗಿರೆ (12) ಜೀವದಾನ ಸಿಕ್ಕರೂ ಲಾಭ ಪಡೆಯದೇ ಬೇಗನೇ ಔಟಾಗಿ ತಂಡಕ್ಕೆ ಆಘಾತ ನೀಡಿದರು. ಬಳಿಕ ಜೊತೆಯಾದ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ತಂಡಕ್ಕೆ ಜೀವ ತುಂಬಿದರು. 4ನೇ ವಿಕೆಟ್ಗೆ ಅಮೂಲ್ಯ 44 ರನ್ಗಳ ಕಾಣಿಕೆ ನೀಡಿದರು. ಪಂದ್ಯದ ಗೆಲುವನ್ನೂ ಹತ್ತಿರಕ್ಕೆ ತಂದರು.
ಆದರೆ ಮೆಕ್‌ಗ್ರಾತ್ 38 ರನ್ ಮತ್ತು ಗ್ರೇಸ್ ಹ್ಯಾರಿಸ್ 39 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಈ ಇಬ್ಬರೂ ಔಟಾದ ಬಳಿಕ ತಂಡದ ಗೆಲುವು ಸನಿಹಕ್ಕೆ ಬಂದು ನಿಂತಿತ್ತು. ಇದರ ನಡುವೆಯೂ ದೀಪ್ತಿ ಶರ್ಮಾ ಮತ್ತು ಸೋಫಿ ಎಕ್ಲೆಸ್ಟನ್ ರನ್ ಗಳಿಸಲು ಪರದಾಟ ನಡೆಸಿ ತಂಡದ ಹಾರ್ಟ್ಬೀಟ್ ಹೆಚ್ಚಿಸಿದರು. ಅಂತಿಮ ಓವರ್ನಲ್ಲಿ ಗೆಲುವಿಗೆ 5 ರನ್ಗಳ ಅಗತ್ಯ ಇದ್ದಾಗ, ಸೋಫಿ ಎಕ್ಲೆಸ್ಟನ್ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ 5 ವಿಕೆಟ್ ರೋಚಕ ಜಯ ಸಾಧಿಸಿತು.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಯುಪಿ ವಾರಿಯರ್ಜ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.