Urvashi Rautela: 'ಪಂದ್ಯ ನೋಡೋಕೆ ಬಂದಿದ್ರಾ ಇಲ್ಲ, ರಿಷಬ್‌ ಪಂತ್‌ ನೋಡಲು ಬಂದಿದ್ರಾ?'; ಊರ್ವಶಿ ರೌಟೇಲಾಗೆ ನೆಟ್ಟಿಗರ ಬಗೆಬಗೆ ಪ್ರಶ್ನೆ..
ಕನ್ನಡ ಸುದ್ದಿ  /  ಕ್ರೀಡೆ  /  Urvashi Rautela: 'ಪಂದ್ಯ ನೋಡೋಕೆ ಬಂದಿದ್ರಾ ಇಲ್ಲ, ರಿಷಬ್‌ ಪಂತ್‌ ನೋಡಲು ಬಂದಿದ್ರಾ?'; ಊರ್ವಶಿ ರೌಟೇಲಾಗೆ ನೆಟ್ಟಿಗರ ಬಗೆಬಗೆ ಪ್ರಶ್ನೆ..

Urvashi Rautela: 'ಪಂದ್ಯ ನೋಡೋಕೆ ಬಂದಿದ್ರಾ ಇಲ್ಲ, ರಿಷಬ್‌ ಪಂತ್‌ ನೋಡಲು ಬಂದಿದ್ರಾ?'; ಊರ್ವಶಿ ರೌಟೇಲಾಗೆ ನೆಟ್ಟಿಗರ ಬಗೆಬಗೆ ಪ್ರಶ್ನೆ..

ಇಂಡೋ- ಪಾಕ್‌ ಪಂದ್ಯ ವೀಕ್ಷಣೆಗೆ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಸಹ ಆಗಮಿಸಿದ್ದು ವಿಶೇಷವಾಗಿತ್ತು. "ನಾನು ಯಾವತ್ತೂ ಕ್ರಿಕೆಟ್‌ ನೋಡುವುದಿಲ್ಲ.." ಎಂದು ಇತ್ತೀಚೆಗಷ್ಟೇ ಟೀಮ್‌ ಇಂಡಿಯಾ ಸ್ಫೋಟಕ ಬ್ಯಾಟರ್‌ ರಿಷಬ್‌ ಪಂತ್‌ ಜತೆಗಿನ ಕಿರಿಕ್‌ ವಿಚಾರದಲ್ಲಿ ಹೇಳಿಕೊಂಡಿದ್ದ ಅವರು, ಇದೀಗ ವಿವಿಐಪಿ ಗ್ಯಾಲರಿಯಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರತ್ಯಕ್ಷರಾಗಿ ಮತ್ತೆ ಹಳೇ ಸುದ್ದಿಯನ್ನು ಮುನ್ನೆಲೆಗೆ ತಂದಿದ್ದಾರೆ.

<p>'ಪಂದ್ಯ ನೋಡೋಕೆ ಬಂದಿದ್ರಾ ಇಲ್ಲ, ರಿಷಬ್‌ ಪಂತ್‌ ನೋಡಲು ಬಂದಿದ್ರಾ?'; ಊರ್ವಶಿ ರೌಟೇಲಾಗೆ ನೆಟ್ಟಿಗರ ಬಗೆಬಗೆ ಪ್ರಶ್ನೆ..</p>
'ಪಂದ್ಯ ನೋಡೋಕೆ ಬಂದಿದ್ರಾ ಇಲ್ಲ, ರಿಷಬ್‌ ಪಂತ್‌ ನೋಡಲು ಬಂದಿದ್ರಾ?'; ಊರ್ವಶಿ ರೌಟೇಲಾಗೆ ನೆಟ್ಟಿಗರ ಬಗೆಬಗೆ ಪ್ರಶ್ನೆ.. (Twitter)

ದುಬೈ: ಈ ಸಲದ ಏಷ್ಯಾ ಕಪ್‌ ದುಬೈನಲ್ಲಿ ನಡೆಯುತ್ತಿದೆ. ಕ್ರಿಕೆಟ್‌ ಪ್ರೇಮಿಗಳ ಕಣ್ಣೂ ಸಹ ಅರಬ್‌ ರಾಷ್ಟ್ರದ ಮೇಲಿದೆ. ಅದರಲ್ಲೂ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿಗಳಾದ ಇಂಡೋ- ಪಾಕ್‌ ಕದನ ಮತ್ತಷ್ಟು ರೋಚಕವಾಗಿತ್ತು. ಕೋಟ್ಯಂತರ ಕ್ರೀಡಾಭಿಮಾನಿಗಳು ಈ ಹೈ ವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಂಡರೆ, ಕ್ರೀಡಾಂಗಣವೂ ಸಾವಿರಾರು ಮಂದಿಯಿಂದ ಭರ್ತಿಯಾಗಿತ್ತು. ಈ ನಡುವೆಯೇ ಬಾಲಿವುಡ್‌ ಸೇರಿ ಸಿನಿಮಾ ಮಂದಿಯೂ ಸಹ ಈ ಮಹತ್ವದ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು.

ಹೀಗಿರುವಾಗಲೇ ಇದೇ ಪಂದ್ಯ ವೀಕ್ಷಣೆಗೆ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಸಹ ಆಗಮಿಸಿದ್ದು ವಿಶೇಷವಾಗಿತ್ತು. "ನಾನು ಯಾವತ್ತೂ ಕ್ರಿಕೆಟ್‌ ನೋಡುವುದಿಲ್ಲ.." ಎಂದು ಇತ್ತೀಚೆಗಷ್ಟೇ ಟೀಮ್‌ ಇಂಡಿಯಾ ಸ್ಫೋಟಕ ಬ್ಯಾಟರ್‌ ರಿಷಬ್‌ ಪಂತ್‌ ಜತೆಗಿನ ಕಿರಿಕ್‌ ವಿಚಾರದಲ್ಲಿ ಹೇಳಿಕೊಂಡಿದ್ದ ಅವರು, ಇದೀಗ ವಿವಿಐಪಿ ಗ್ಯಾಲರಿಯಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರತ್ಯಕ್ಷರಾಗಿ ಮತ್ತೆ ಹಳೇ ಸುದ್ದಿಯನ್ನು ಮುನ್ನೆಲೆಗೆ ತಂದಿದ್ದಾರೆ.

ಹೀಗೆ ಪಂದ್ಯ ವೀಕ್ಷಣೆಯ ಫೋಟೋ ಕ್ಲಿಪ್ಪಿಂಗ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಊರ್ವಶಿಗೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಬಗೆಬಗೆ ರೀತಿಯಲ್ಲಿ ಮೀಮ್‌ಗಳನ್ನು ಮಾಡಿದ್ದಾರೆ. ಊರ್ವಶಿ ಮತ್ತು ರಿಷಬ್‌ ಪಂತ್‌ ಇಬ್ಬರ ಫೋಟೋಗಳನ್ನು ಶೇರ್‌ ಮಾಡಿ, "ಕ್ರಿಕೆಟ್‌ ನೋಡಲ್ಲ ಎಂದವರು, ಇಲ್ಲಿಯವರೆಗೂ ಬಂದಿದ್ದೇಕೆ?" ಎಂದು ಕೆಲವರು ಪ್ರಶ್ನೆ ಕೇಳಿದರೆ, ಇನ್ನು ಕೆಲವರು ಇಬ್ಬರ ಫೋಟೋಗಳಿಗೆ ಬಗೆಬಗೆ ಕಮೆಂಟ್‌ ಮಾಡಿದ್ದಾರೆ. ಆ ಮೀಮ್‌ಗಳು ಇಲ್ಲಿವೆ..

ಹೌದು, ಕಳೆದ ಕೆಲ ವಾರಗಳ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ಮತ್ತು ರಿಷಬ್‌ ಪಂತ್‌ ಇಬ್ಬರ ಕಿತ್ತಾಟ ನಡೆದಿತ್ತು. ಎಲ್ಲಿಯೂ ರಿಷಬ್‌ ಪಂತ್‌ ಹೆಸರನ್ನು ನೇರವಾಗಿ ಹೇಳದೆ, ಆರ್‌ಪಿ ಎಂದು ಸಂಬೋಧಿಸಿ, ಆ ಕ್ರಿಕೆಟಿಗ ತನ್ನ ಹಿಂದೆ ಬಿದ್ದಿರುವ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ನಾನು ಯಾವತ್ತೂ ಕ್ರಿಕೆಟ್‌ ನೋಡಲ್ಲ ಎಂದಿದ್ದರು. ಊರ್ವಶಿಯ ಈ ಸಂದರ್ಶನದ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಕ್ರಿಕೆಟರ್‌ ರಿಷಬ್‌ ಪಂತ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಊರ್ವಶಿ- ರಿಷಬ್‌ ಹೀಟ್‌ ವಾರ್..‌

"ಕೇವಲ ಅಲ್ಪ ಜನಪ್ರಿಯತೆಗಾಗಿ ಮತ್ತು ಸುದ್ದಿಯಾಗುವುದಕ್ಕೆ ಜನ ಹೇಗೆ ಸುಳ್ಳು ಹೇಳುತ್ತಾರೆ ಎಂಬುದನ್ನು ನೋಡಲು ತಮಾಷೆ ಎನಿಸುತ್ತದೆ. ಖ್ಯಾತಿಗಾಗಿ ಹೆಸರಿಗಾಗಿ ಈ ರೀತಿ ಮಾಡುವವರಿಗೆ ದೇವರು ಒಳ್ಳೆಯದನ್ನು ಮಾಡಲಿ" ಎಂದಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಲಿಮಿಟ್‌ ಇರಬೇಕು, ನನ್ನ ಹಿಂದೆ ಬರಬೇಡ ಅಕ್ಕ #merapichachorhoBehen #Jhutkibhilimithotihai ಎಂದು ಹ್ಯಾಷ್‌ ಟ್ಯಾಗ್‌ ಮೂಲಕ ಪ್ರತಿಕ್ರಿಯಿಸಿದ್ದರು. ಬಳಿಕ ಕೆಲ ಹೊತ್ತಿನ ನಂತರ ಪೋಸ್ಟ್‌ ಡಿಲಿಟ್‌ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಊರ್ವಶಿ "ಚೋಟು ಭಯ್ಯಾ ನೀವು ಬ್ಯಾಟ್ ಬಾಲ್ ಆಡಬೇಕು. ಮೈಂ ಕೋಯಿ ಮುನ್ನಿ ನಹೀ ಹೂಂ ಬದ್ನಾಮ್ ಹೋನೆ ವಿತ್ ಯಂಗ್ ಕಿಡ್ಡೋ ಡಾರ್ಲಿಂಗ್ಸ್ ತೇರೆ ಲಿಯೇ ಲಿಯೇ. ರಕ್ಷಾಬಂಧನದ ಶುಭಾಶಯಗಳು #RPChtobhaiyaa #Cougarhunter #Donttakeadvantageofsilentgirl.” ಎಂದು ದಬಾಂಗ್‌ ಚಿತ್ರದ ಹಾಡನ್ನು ಹೇಳಿ ಟಾಂಗ್‌ ಕೊಟ್ಟಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.