Vinesh Phogat: ವಿನೇಶ್ ಫೋಗಾಟ್ ಮೇಲ್ಮನವಿಯ ತೀರ್ಪು ಇಂದು ಪ್ರಕಟ; ಕ್ರೀಡಾ ನ್ಯಾಯ ಮಂಡಳಿ
Vinesh Phogat: ಒಲಿಂಪಿಕ್ಸ್ ಫೈನಲ್ನಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರು ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಲ್ಲಿಸಿದ್ದ ಮನವಿಯ ವಿಚಾರಣೆಯ ತೀರ್ಪನ್ನು ಆಗಸ್ಟ್ 11ಕ್ಕೆ ಮುಂದೂಡಲಾಗಿದೆ.
Vinesh Phogat: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದ ಸ್ಪರ್ಧೆಯ ಫೈನಲ್ಗೆ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಾಟ್ ಸಲ್ಲಿಸಿರುವ ಮೇಲ್ಮನವಿಯ ತೀರ್ಪನ್ನು ಇಂದು (ಆಗಸ್ಟ್ 11) ಸಂಜೆ 6 ಗಂಟೆಗೆ ಕ್ರೀಡಾ ನ್ಯಾಯ ಮಂಡಳಿ ಮುಂದೂಡಿದೆ.
ಆರಂಭದಲ್ಲಿ ತೀರ್ಪಿನ ಗಡುವು ವಿಸ್ತರಣೆಗೆ ಸಂಬಂಧಿಸಿ ಗೊಂದಲ ಉಂಟಾಗಿತ್ತು. ಈ ಮೊದಲು ಗಡುವನ್ನು ಆಗಸ್ಟ್ 13 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗಿತ್ತು. ನಂತರ ಅಧಿಕೃತವಾಗಿ ಸಿಎಎಸ್‌ನ ತಾತ್ಕಾಲಿಕ ವಿಭಾಗವು 2024ರ ಆಗಸ್ಟ್ 11ರಂದು ಸಂಜೆ 6 ಗಂಟೆಯ ಸಮಯಕ್ಕೆ ವಿಸ್ತರಿಸಿದ್ದು, ಪದಕದ ಆಸೆ ಜೀವಂತವಾಗಿದೆ.
ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ನಲ್ಲಿ 100 ಗ್ರಾಂ ತೂಕ ಅಧಿಕವಾಗಿ ಹೊಂದಿದ್ದ ಕಾರಣ ಫೈನಲ್ ಪಂದ್ಯದಿಂದ ವಿನೇಶ್ ಅವರನ್ನು ಅನರ್ಹ ಮಾಡಲಾಗಿತ್ತು. ಹೀಗಾಗಿ ಕ್ರೀಡಾಕೂಟದ ವೇಳೆ ವಿವಾದಗಳಿಗೆ ಪರಿಹಾರ ನೀಡಲು ಸ್ಥಾಪಿಸಿರುವ ಸಿಎಎಸ್ ತಾತ್ಕಾಲಿಕ ವಿಭಾಗಕ್ಕೆ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿನೇಶ್ ಅವರು ಆಗಸ್ಟ್ 9ರ ಶುಕ್ರವಾರ ಮೇಲ್ಮನವಿ ಸಲ್ಲಿಸಿದ್ದರು.
ಭಾರತದ ಸ್ಟಾರ್ ಕ್ರೀಡಾಪಟು ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ವೀಕರಿಸಿದ್ದ ಕ್ರೀಡಾ ನ್ಯಾಯ ಮಂಡಳಿ, ಆಗಸ್ಟ್ 10ರ ರಾತ್ರಿ 9.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಈ ವಿಚಾರಣೆಯ ತೀರ್ಪು ಆಗಸ್ಟ್ 9ರ ಶುಕ್ರವಾರವೇ ಮುಕ್ತಾಯಗೊಂಡಿದೆ. ಇದೀಗ ಆ ಅಂತಿಮ ತೀರ್ಪನ್ನು ಮತ್ತೆ ಮುಂದೂಡಿಕೆ ಮಾಡಲಾಗಿದ್ದು, ವಿನೇಶ್ಗೆ ಪದಕ ಆಸೆ ಸದ್ಯಕ್ಕಂತೂ ನಿರಾಸೆಯಾಗಿದೆ.
ಫೈನಲ್ನಲ್ಲಿ ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಆಡಬೇಕಿತ್ತು
ವಿನೇಶ್ ಅವರು ಆಗಸ್ಟ್ 7ರ ರಾತ್ರಿ 11.30ರ ಸುಮಾರಿಗೆ ಫೈನಲ್ ಪಂದ್ಯದಲ್ಲಿ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಬೇಕಿತ್ತು. ಆದರೆ ಆಗಸ್ಟ್ 6ರಂದು ಮೂರು ಪಂದ್ಯಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದ ವಿನೇಶ್, ಫೈನಲ್ಗೂ ಮುನ್ನ 2 ಕೆಜಿ ತೂಕ ಹೆಚ್ಚಾಗಿದ್ದರು. ಹಾಗಾಗಿ ತೂಕ ಇಳಿಸಲು ಹೇರ್ ಮಾಡಿದ್ದರು. ರಾತ್ರಿಯೆಲ್ಲಾ ರನ್ನಿಂಗ್ ಮಾಡಿದ್ದರು. ಸ್ಕಿಪಿಂಗ್ ಮಾಡಿದ್ದರು, ರಕ್ತವನ್ನು ಡ್ರಾ ಮಾಡಿದ್ದರು.
ಹೀಗಾಗಿ 1 ಕೆಜಿ 900 ಗ್ರಾಂ ತೂಕ ಇಳಿದರು. ಆದರೆ 100 ಗ್ರಾಂ ತೂಕ ಇಳಿಯದ ಕಾರಣ ಫೈನಲ್ ಪಂದ್ಯದಿಂದ ಅನರ್ಹ ಮಾಡಲಾಯಿತು. ಇದರ ಬೆನ್ನಲ್ಲೇ ಅನರ್ಹ ಬೆನ್ನಲ್ಲೇ ಭಾರತದ ನಿಯೋಗದಿಂದ ದೂರ ದಾಖಲಿಸಿದ್ದರು. ವಿನೇಶ್ ಅವರು ಈ ಹಿಂದೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತನ್ನ ತೂಕವನ್ನು 50 ಕೆಜಿಗೆ ಇಳಿಸಿದ್ದರು. ಆದಾಗ್ಯೂ, ಆಕೆಯ ತೂಕ ವಿಭಾಗದ 2ನೇ ದಿನದಂದು ವಿನೇಶ್ ಅವರು ಮಿತಿಗಿಂತ ಹೆಚ್ಚು ತೂಕ ಹೊಂದಿದ್ದರು.
ವಿನೇಶ್ ಸೆಮಿಫೈನಲ್ ತಲುಪಲು ಸತತ 2 ಅಸಾಧ್ಯವಾದ ಗೆಲುವು ದಾಖಲಿಸಿದ್ದರು. 16ನೇ ಸುತ್ತಿನಲ್ಲಿ ಟೊಕಿಯೊ ಒಲಿಂಪಿಕ್ಸ್ ವಿಜೇತೆ ಜಪಾನ್‌ನ ಯುಯಿ ಸುಸಾಕಿಯನ್ನು ಸೋಲಿಸಿದ್ದರು. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕದ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು ಮಣಿಸಿದ್ದರು. ಸೆಮಿಫೈನಲ್ನಲ್ಲಿ ಕೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ರಿಂದ ಸೋಲಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದರು.