ಕನ್ನಡ ಸುದ್ದಿ  /  Sports  /  Virat Kohli Breaks Rahul Dravid Record

Virat Kohli Breaks Dravid Record: ದ್ರಾವಿಡ್‌ ಬರೆದಿದ್ದ ಶ್ರೇಷ್ಠ ದಾಖಲೆ ಕೊಹ್ಲಿ ಪಾಲು, ಉಳಿದಿದ್ದು ಸಚಿನ್‌ ರೆಕಾರ್ಡ್‌ ಮಾತ್ರ!

ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 63 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಕೋಚ್ ರಾಹುಲ್ ದ್ರಾವಿಡ್ ಅವರ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ.

ದ್ರಾವಿಡ್‌ ಬರೆದಿದ್ದ ಶ್ರೇಷ್ಠ ದಾಖಲೆ ಕೊಹ್ಲಿ ಪಾಲು, ಉಳಿದಿದ್ದು ಸಚಿನ್‌ ರೆಕಾರ್ಡ್‌ ಮಾತ್ರ!
ದ್ರಾವಿಡ್‌ ಬರೆದಿದ್ದ ಶ್ರೇಷ್ಠ ದಾಖಲೆ ಕೊಹ್ಲಿ ಪಾಲು, ಉಳಿದಿದ್ದು ಸಚಿನ್‌ ರೆಕಾರ್ಡ್‌ ಮಾತ್ರ!

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ನಿರ್ಣಾಯಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 63 (3 ಬೌಂಡರಿ, 4 ಸಿಕ್ಸ್)‌ ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸ್ಫೋಟಕ ಇನ್ನಿಂಗ್ಸ್ ಮೂಲಕ ಅವರೀಗ ಕೋಚ್ ರಾಹುಲ್ ದ್ರಾವಿಡ್ ಅವರ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.

ರಾಹುಲ್ ದ್ರಾವಿಡ್ ದಾಖಲೆ ಮುರಿದ ಕೊಹ್ಲಿ

ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 24,064 ರನ್ ಗಳಿಸಿದ್ದಾರೆ. (ಇದು ಏಷ್ಯಾ XI ಮತ್ತು ICC ವಿಶ್ವ XI ರನ್‌ಗಳನ್ನು ಒಳಗೊಂಡಿಲ್ಲ) ಹೀಗಿರುವಾಗ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಈ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದಾರೆ. ಕೊಹ್ಲಿ ಈಗ ಎಲ್ಲಾ ಮಾದರಿಗಳಲ್ಲಿ 24,078 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್‌ ಬ್ಯಾಟ್‌ನಿಂದ 664 ಪಂದ್ಯಗಳಲ್ಲಿ 48.52 ಸರಾಸರಿಯೊಂದಿಗೆ 34,357 ರನ್ ಬಂದಿವೆ. ಶತಕಗಳ ಶತಕ ಸಿಡಿಸಿದ ದಾಖಲೆಯೂ ಸಚಿನ್‌ ಹೆಸರಲ್ಲಿದೆ.

ರನ್‌ ಮಷಿನ್‌ ವಿರಾಟ್ ಕೊಹ್ಲಿ ಸಾಧನೆ ಹೀಗಿದೆ..

ಟೆಸ್ಟ್ ಕ್ರಿಕೆಟ್ ಹೊರತುಪಡಿಸಿದರೆ ಏಕದಿನ ಹಾಗೂ ಟಿ20ಯಲ್ಲಿ ಕೊಹ್ಲಿಯ ಬ್ಯಾಟಿಂಗ್ ಸರಾಸರಿ ಶೇ. 50 ದಾಟಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 49.53 ಸರಾಸರಿಯಲ್ಲಿ 8,074 ರನ್ ಗಳಿಸಿದರೆ, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20ಯಲ್ಲಿ 63 ರನ್‌ ಗಳಿಸುವ ಮೂಲಕ T20Iಯಲ್ಲಿ 3,660 ರನ್ ಸಿಡಿಸಿದಂತಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಹೆಚ್ಚು ರನ್‌ ಗಳಿಸಿದ್ದಾರೆ. 50 ಓವರ್‌ಗಳ ಪಂದ್ಯಗಳಲ್ಲಿ 43 ಶತಕಗಳೊಂದಿಗೆ 12,344 ರನ್ ಬಾರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿಯೂ ನಂ.1

ದಾಖಲೆ ಮೇಲೆ ದಾಖಲೆಗಳನ್ನು ಬರೆದಿರುವ ಟೀಮ್‌ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ, ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಹಲವು ದಾಖಲೆಗಳ ಸರದಾರನಾಗಿರುವ ಇದೇ ಕ್ರಿಕೆಟಿಗ ಇದೀಗ ಇನ್ನೊಂದು ಹೊಸ ದಾಖಲೆ ಬರೆದಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿಯೇ ಆ ದಾಖಲೆ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಏನದು?

ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಂಗಳವಾರ (13 ಸೆಪ್ಟೆಂಬರ್) ಟ್ವಿಟರ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಬರೋಬ್ಬರಿ 50 ಮಿಲಿಯನ್‌ (5 ಕೋಟಿ) ಫಾಲೋವರ್ಸ್‌ ಹೊಂದಿರುವ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಟ್ವಿಟರ್‌ನಲ್ಲಿ 50 ಮಿಲಿಯನ್‌ ಫಾಲೋವರ್ಸ್‌ ಹೊಂದಿದ ಮೊದಲ ಕ್ರಿಕೆಟಿಗ ಇವರಾಗಿದ್ದಾರೆ.

ಕ್ರಿಕೆಟಿಗರಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎಂಬ ಖ್ಯಾತಿ ಕೊಹ್ಲಿಗೆ ಸಿಕ್ಕರೆ, ಭಾರತದಲ್ಲಿ ಈ ಸಾಧನೆ ಮಾಡಿದ ಮೂರನೇ ವ್ಯಕ್ತಿಯೂ ಕೊಹ್ಲಿ. ಹಾಗಾದರೆ, ಮೊದಲೆರಡು ಸ್ಥಾನ ಯಾರಿಗೆ? ಸದ್ಯ ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಅವರ ಖಾತೆಯಲ್ಲಿ 82.3 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಅದಾದ ಬಳಿಕ ಪಿಎಂಒ ಕಚೇರಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ 50. 5 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಇದೀಗ 50ರ ಕ್ಲಬ್‌ಗೆ ಕೊಹ್ಲಿ ಸಹ ಸೇರ್ಪಡೆಗೊಂಡಿದ್ದಾರೆ.