ಕನ್ನಡ ಸುದ್ದಿ  /  Sports  /  Virat Kohli Ishan Kishan Shubman Gill Flop Show In 1st Odi Against Australia

Ind vs Aus: 3, 4, 0, 20.. ಇದು ಟಾಪ್​​​-4 ಬ್ಯಾಟರ್​​​​ಗಳ ಸ್ಕೋರ್​.. ಫ್ಯಾನ್ಸ್​​​​ ಸಿಡಿಮಿಡಿ!

Ind vs Aus: ಮೊದಲ ಏಕದಿನ ಪಂದ್ಯದಲ್ಲಿ ಬೌಲರ್​​​​ಗಳು ತಮ್ಮ ಕರ್ತವ್ಯವನ್ನು ಅಚ್ಚಕಟ್ಟಾಗಿ ನಿಭಾಯಸಿದರೆ, ಬ್ಯಾಟ್ಸ್​​​ಮನ್​​ಗಳು ಮಾತ್ರ ಜವಾಬ್ದಾರಿ ಮರೆತು ಆಡಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ. ಭಾರತದ ಪಿಚ್​​ಗಳಲ್ಲೇ ಆಸಿಸ್​​​​​ ಬೌಲರ್​​ಗಳ ಮುಂದೆ ಘಟಾನುಘಟಿ ಬ್ಯಾಟ್ಸ್​​ಮನ್​​ಗಳು ಮಂಡಿಯೂರಿದ್ದು, ಭಾರಿ ಟೀಕೆಗೆ ಕಾರಣವಾಗಿದೆ.

ಶುಭ್​ಮನ್ ಗಿಲ್​ ಮತ್ತು ವಿರಾಟ್​ ಕೊಹ್ಲಿ
ಶುಭ್​ಮನ್ ಗಿಲ್​ ಮತ್ತು ವಿರಾಟ್​ ಕೊಹ್ಲಿ (Twitter)

ಮೊದಲ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಕಳಪೆ (Team India Batters Flop show) ಪ್ರದರ್ಶನ ತೋರಿದ್ದಾರೆ. ಬೌಲರ್​​​​ಗಳು ತಮ್ಮ ಕರ್ತವ್ಯವನ್ನು ಅಚ್ಚಕಟ್ಟಾಗಿ ನಿಭಾಯಸಿದರೆ, ಬ್ಯಾಟ್ಸ್​​​ಮನ್​​ಗಳು ಮಾತ್ರ ಜವಾಬ್ದಾರಿ ಮರೆತು ಆಡಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ. ಭಾರತದ ಪಿಚ್​​ಗಳಲ್ಲೇ ಆಸಿಸ್​​​​​ ಬೌಲರ್​​ಗಳ ಮುಂದೆ ಘಟಾನುಘಟಿ ಬ್ಯಾಟ್ಸ್​​ಮನ್​​ಗಳು ಮಂಡಿಯೂರಿದ್ದು, ಭಾರಿ ಟೀಕೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾ ನೀಡಿದ್ದು ಕೇವಲ 189 ರನ್​ಗಳ ಗುರಿ. ಹಾಗಾಗಿ ಕ್ರಿಕೆಟ್​​ ಪ್ರೇಮಿಗಳು, ಏನಿಲ್ಲವೆಂದರೂ 35 ಓವರ್​​ಗಳಲ್ಲಿ ಗೆಲುವಿನ ಬಾವುಟ ಹಾರಿಸುತ್ತಾರೆ ಎಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ.! ಸುಲಭ ಗುರಿಯನ್ನು ಬೆನ್ನೆತ್ತುವ ಭರದಲ್ಲಿ ಭಾರತದ ಟಾಪ್​ ಆರ್ಡರ್​​ ಬ್ಯಾಟರ್​​ಗಳು ಬ್ಯಾಕ್​ ಟು ಬ್ಯಾಕ್​ ವಿಕೆಟ್​​​​​​​ ಪೆವಿಲಿಯನ್​​​ನತ್ತ ಹೆಜ್ಜೆ ಹಾಕಿ, ತಂಡವನ್ನು ಮೃತ್ಯುಕೂಪಕ್ಕೆ ತಳ್ಳಿದರು.

ನಿರೀಕ್ಷೆ ಹುಸಿಗೊಳಿಸಿದ ಇಶಾನ್​..!

ಆರಂಭಿಕ ಆಟಗಾರ ರೋಹಿತ್​ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ದ್ವಿಶತಕ ವೀರ ಇಶಾನ್​ ಕಿಶನ್ (Ishan Kishan)​​, ನಿರೀಕ್ಷೆ ಹುಸಿಗೊಳಿಸಿದರು. ಸಿಕ್ಕ ಅವಕಾಶದಲ್ಲಿ ಅಬ್ಬರಿಸುವ ಬದಲಿಗೆ ಒದ್ದಾಡಿದರು. 8 ಎಸೆತಗಳಲ್ಲಿ ಕೇವಲ 3 ರನ್​​ಗೆ ವಿಕೆಟ್​​ ಒಪ್ಪಿಸಿ ಹೊರ ನಡೆದರು. ಆ ಮೂಲಕ ತಂಡವನ್ನು ಆರಂಭಿಕ ಆಘಾತಕ್ಕೆ ಸಿಲುಕಿಸಿದ ಎಡಗೈ ಬ್ಯಾಟರ್​​​, ಮ್ಯಾನೇಜ್​​ಮೆಂಟ್ ಇಟ್ಟಿದ್ದ​​​ ನಂಬಿಕೆಯನ್ನು ಕಳೆದುಕೊಂಡರು.

ಕೊಹ್ಲಿಯಿಂದ ಬರಲಿಲ್ಲ ದೊಡ್ಡ ಇನ್ನಿಂಗ್ಸ್​..!

ಬಾರ್ಡರ್​ - ಗವಾಸ್ಕರ್​ ಟೆಸ್ಟ್​ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್​​ ಕೊಹ್ಲಿ (Virat Kohli), ಅದೇ ಫಾರ್ಮ್​​ ಏಕದಿನದಲ್ಲೂ ಮುಂದುವರೆಸುವ ವಿಶ್ವಾಸದಲ್ಲಿದ್ದರು. ಆದರೆ ಅದು ಕೈ ಹಿಡಿಯಲಿಲ್ಲ. ಒಂದೆರಡು ಎಸೆತಗಳ ಬಳಿಕ ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಕಿಂಗ್​, 4 ರನ್​ಗಳಿಗೇ ಆಟ ಮುಗಿಸಿದರು. ಏಕದಿನ ಕ್ರಿಕೆಟ್​​ನಲ್ಲೂ ಫಾರ್ಮ್​ಗೆ ಮರಳಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಕೋಟ್ಯಂತರ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದರು. ಕೊಹ್ಲಿ ಔಟಾದಾಗ ತಂಡದ ಮೊತ್ತ 16 ರನ್​.

ಮತ್ತೆ ಫೇಲ್​​​.. ಸೂರ್ಯ ಗೋಲ್ಡನ್​ ಡಕ್​.!

ಶ್ರೇಯಸ್​ ಅಯ್ಯರ್​ (Shreyas Iyer) ಅಲಭ್ಯತೆಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡ ಸೂರ್ಯಕುಮಾರ್ ಯಾದವ್​ (Suryakumar Yadav), ಏಕದಿನ ಕ್ರಿಕೆಟ್​​ನಲ್ಲಿ ಫ್ಲಾಪ್​ ಶೋ ಮುಂದುವರೆಸಿದರು. ಟಿ20 ಕ್ರಿಕೆಟ್​​ನಲ್ಲಿ ರನ್​ ಶಿಖರ ನಿರ್ಮಿಸಿದ ಸ್ಕೈ, ಒಡಿಐ ಕ್ರಿಕೆಟ್​ನಲ್ಲಿ ಮಾತ್ರ ಸದ್ದು ಮಾಡುತ್ತಲೇ ಇಲ್ಲ. ಇದು ಟೀಮ್​ ಮ್ಯಾನೇಜ್​ಮೆಂಟ್​​ಗೆ ತಲೆನೋವು ತರಿಸಿದೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ಗೆ ಸೂಕ್ತ ಬದಲಿ ಆಟಗಾರ ಸಿಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಕೊಹ್ಲಿ ಔಟಾದ ಮರು ಎಸೆತದಲ್ಲೇ ಸೂರ್ಯ ಗೋಲ್ಡನ್​ ಡಕ್​ಗೆ ಬಲಿಯಾದರು.

ಜೀವದಾನ ಸಿಕ್ಕರೂ ಆಡಲಿಲ್ಲ ಗಿಲ್​.!

ಸತತ ವಿಕೆಟ್​​ಗಳ ಪತನದ ನಡುವೆಯೂ ಶುಭ್​ಮನ್​​​ ಗಿಲ್​ (Shubman Gill) ಜವಾಬ್ದಾರಿಯುತ ಆಟವಾಡಿದರು. ಆದರೆ ಗಿಲ್​​ಗೆ ಆರಂಭದಲ್ಲೇ ಒಂದು ಜೀವದಾನ ಸಿಕ್ಕಿತ್ತು ಎಂಬುದು ವಿಶೇಷ. ಇದರ ಲಾಭ ಪಡೆಯದ ಆರಂಭಿಕ ಆಟಗಾರ 20 ರನ್ ಗಳಿಸಿ ಆಟ ಮುಗಿಸಿದರು. ರಕ್ಷಣಾತ್ಮಕ ಆಟಕ್ಕೆ ಕೈ ಹಾಕಿದ ಪಂಜಾಬ್​ ಪುತ್ತರ್​​​, ಮಿಚೆಲ್​ ಸ್ಟಾರ್ಕ್​​​​ ಬೌಲಿಂಗ್​​ನಲ್ಲಿ ಬಲಿಯಾದರು. ಆಗ ಭಾರತದ ಮೊತ್ತ 39 ರನ್​ಗಳಷ್ಟೇ.

ಪ್ರಮುಖ 4 ವಿಕೆಟ್​ಗಳು ಬೇಗನೆ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿದೆ. ಈ ಅಲ್ಪ ಮೊತ್ತವನ್ನೂ ಬೆನ್ನತ್ತಲಾಗದೇ ಪರದಾಟ ನಡೆಸಿ ಔಟಾದ ಬ್ಯಾಟರ್​ಗಳ ವಿರುದ್ಧ ಭಾರತೀಯ ಕ್ರಿಕೆಟ್ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನಾ ಬ್ಯಾಟಿಂಗ್​​ ಅಂದರೆ ಅಂತ ಕಿಡಿಕಾರಿದ್ದಾರೆ.