ಕನ್ನಡ ಸುದ್ದಿ  /  Sports  /  Virat Kohli Reveals His Class 10th Marks In Internet-breaking Post Before Rcbs Ipl 2023 Opener Vs Mumbai Indians

SSLC ಅಂಕಪಟ್ಟಿ ಹಂಚಿಕೊಂಡ Virat kohli; ಮಾರ್ಕ್ಸ್​ ನೋಡಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್

Virat kohli: ಸಾಮಾಜಿಕ ಜಾಲತಾಣ ‘ಕೂ’ ಖಾತೆಯಲ್ಲಿ ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ವಿರಾಟ್​​​ ಕೊಹ್ಲಿ ಹಂಚಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಮಾರ್ಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.​ ಹಾಗಾದ್ರೆ ವಿರಾಟ್​​ SSLCಯಲ್ಲಿ ಪಡೆದಿರುವ ಅಂಕವೆಷ್ಟು ಎಂಬುದನ್ನು ಈ ಮುಂದೆ ನೋಡೋಣ.

ವಿರಾಟ್​ ಕೊಹ್ಲಿ ಅಂಕಪಟ್ಟಿ
ವಿರಾಟ್​ ಕೊಹ್ಲಿ ಅಂಕಪಟ್ಟಿ (Twitter)

ಶಾಲಾ ದಿನಗಳಿಂದಲೂ ಕ್ರಿಕೆಟ್ ಆಡುತ್ತಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಇಂತಹ ಅಭಿಮಾನಿಗಳಿಗೆ ಕೊಹ್ಲಿಯ ಓದು, ಪಡೆದಿರುವ ಅಂಕ ಎಷ್ಟು ಎಂಬುದನ್ನು ತಿಳಿಯಲು ಕುತೂಹಲ ಇದ್ದೇ ಇರುತ್ತದೆ. ಈಗ ಮಿಲಿಯನ್​ಗಟ್ಟಲ್ಲೇ ಅಭಿಮಾನಿ ಬಳಗ ಹೊಂದಿರುವ​ ಕೊಹ್ಲಿ, ತಮ್ಮ ಅಭಿಮಾನಿಗಳ ಮಹದಾಸೆಯನ್ನು ನೆರವೇರಿಸಿದ್ದಾರೆ. ಹೌದು. ವಿರಾಟ್​ ತನ್ನ 10ನೇ ತರಗತಿಯ (CBSE) ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಓದಿದ್ದು, 12ನೇ ತರಗತಿವರೆಗೆ ಮಾತ್ರ. ಆ ಬಳಿಕ ಕೊಹ್ಲಿ ಸಂಪೂರ್ಣ ಕ್ರಿಕೆಟಿಗರಾಗಿಯೇ ಮುಂದುವರೆದರು. 19 ವರ್ಷದ ಒಳಗಿನ ವಿಶ್ವಕಪ್‌ನಲ್ಲಿ ಭಾರತದ ನಾಯಕನಾಗಿ ತಂಡವನ್ನು ಮುನ್ನಡಸಿದ ಕಿಂಗ್​​​ ಕೊಹ್ಲಿ, ಕಪ್​​​​​​​​ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ಕಿಂಗ್​​​​ ದಾಖಲೆಗಳ ಒಡೆಯನಾಗಿ ಮುನ್ನುಗ್ಗುತ್ತಿದ್ದಾರೆ.

ಸದ್ಯ IPL-2023ಕ್ಕೆ ತಯಾರಿ ನಡೆಸುತ್ತಿರುವ ವಿರಾಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇದರ ನಡುವೆಯೇ ಕೊಹ್ಲಿಯ ಹತ್ತನೇ ತರಗತಿಯ ಅಂಕಪಟ್ಟಿ ಭಾರಿ ವೈರಲ್​ ಆಗುತ್ತಿದೆ. ಸೋಶಿಯಲ್ ಮೀಡಿಯಾ ‘ಕೂ’ ಖಾತೆಯಲ್ಲಿ ತಮ್ಮ SSLC ಅಂಕಪಟ್ಟಿಯನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. 34 ವರ್ಷದ ಕೊಹ್ಲಿ 2004 ರಲ್ಲಿ 10 ನೇ ತರಗತಿ ಪೂರ್ಣಗೊಳಿಸಿದ್ದಾರೆ.

ಕಿಂಗ್ ಕೊಹ್ಲಿ ಮಾರ್ಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.​ CBSE 10 ನೇ ತರಗತಿಯ ಫಲಿತಾಂಶ-2023ಕ್ಕೆ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಾರೆ. ಇದೀಗ ಕೊಹ್ಲಿ ಅವರ 10ನೇ ತರಗತಿಯ ಅಂಕ ಪಟ್ಟಿ ಹಂಚಿಕೊಂಡಿದ್ದು, ಅನೇಕರಿಗೆ ಸ್ಫೂರ್ತಿಯಾಗಿದೆ. ಸ್ಕೋರ್ ಕಾರ್ಡ್ ಹಂಚಿಕೊಂಡಿದ್ದಕ್ಕಾಗಿ ಅವರಿಗೆ ನೆಟಿಜನ್ಸ್​​​ ಧನ್ಯವಾದ ಹೇಳಿದ್ದಾರೆ.

ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕ

ವಿಷಯಅಂಕ
ಇಂಗ್ಲೀಷ್​​83
ಹಿಂದಿ75
ಗಣಿತ51
ವಿಜ್ಞಾನ ಮತ್ತು ತಂತ್ರಜ್ಞಾನ55
ಸಮಾಜ ವಿಜ್ಞಾನ81
ಇಂಟ್ರಡಕ್ಷರಿ ಐಟಿ74
ಒಟ್ಟು419

ಆರ್​ಸಿಬಿ ಬಲ ಹೆಚ್ಚಿಸಲಿದ್ದಾರಾ ಕೊಹ್ಲಿ?

ಸದ್ಯ ಕೊಹ್ಲಿ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನ ಮೂರು ಫಾರ್ಮೆಟ್​​ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಅವರ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸುವಂತೆ ಮಾಡಿದೆ. ಹಾಗಾಗಿ ಈ ಬಾರಿ ಆರ್​ಸಿಬಿ ಪರ ಕಿಂಗ್​, ಮತ್ತೆ ಪುಟಿದೇಳುವ ವಿಶ್ವಾಸ ವ್ಯಕ್ತವಾಗಿದೆ. ಕಳೆದ ಐಪಿಎಲ್​​ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಮಾಜಿ ನಾಯಕ, ಈ ಸಲ ಅಬ್ಬರಿಸಿ ಬೊಬ್ಬರಿಯುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

15 ಆಯ್ತು 16ರಲ್ಲಾದರೂ ಬರುತ್ತಾ ಕಪ್​​?

ಸದ್ಯ ಬೆಂಗಳೂರು ತಂಡ 15 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದೀಗ 16ನೇ ಆವೃತ್ತಿಗೂ ಕಾಲಿಟ್ಟಿದೆ. ಆದರೆ, IPL​ ಇತಿಹಾಸದಲ್ಲಿ ಒಂದು ಬಾರಿಯೂ ಟ್ರೋಫಿ ಗೆಲ್ಲದ RCB, ಈ ಸಲವಾದರೂ ಟ್ರೋಫಿ ಬರ ನೀಗಿಸುತ್ತದಾ ಎಂಬ ಕುತೂಹಲ ಜೋರಾಗಿದೆ. ಆ ಮೂಲಕ ಅಭಿಮಾನಿಗಳ ಈ ಸಲ ಕಪ್​​ ನಮ್ದೇ ಎಂಬ ಘೋಷ ವಾಕ್ಯಕ್ಕೆ ನ್ಯಾಯ ದೊರಕಿಸಿಕೊಡುತ್ತಾ ಎಂಬುದನ್ನು ಕಾದುನೋಡಬೇಕು.

ಆರ್​​ಸಿಬಿ - ಮುಂಬೈ ಮುಖಾಮುಖಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು, ಏಪ್ರಿಲ್​ 2ರಂದು IPL​ನಲ್ಲಿ ಏಪ್ರಿಲ್​ 2ರಂದು ತಮ್ಮ ಅಭಿಯಾನ ಆರಂಭಿಸಲಿದೆ. ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಬಾರಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ ತಂಡವೇ ಮೇಲುಗೈ ಸಾಧಿಸಿದೆ. ಮುಂಬೈ 17 ಗೆಲುವು ದಾಖಲಿಸಿದ್ದರೆ, ಬೆಂಗಳೂರು 13 ಗೆಲುವು ಸಾಧಿಸಿದೆ.

ಆರ್​ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​​), ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಅನುಜ್ ರಾವತ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಕರಣ್​ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್‌ವೆಲ್.