ಕನ್ನಡ ಸುದ್ದಿ  /  Sports  /  Watch Big Controversy In Isl Playoffs, Kerala Blasters Walk Off In Protest, Forfeit Match After Sunil Chhetri Goal

ISL 2023: ಗೋಲು ವಿವಾದ, ವಾಕೌಟ್​ ಮಾಡಿದ ಕೇರಳ, ಸೆಮೀಸ್​ಗೆ ಛೆಟ್ರಿ ನೇತೃತ್ವದ ಬೆಂಗಳೂರು

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಷನ್​ ಪಂದ್ಯದಲ್ಲಿ ಗೋಲು ವಿವಾದ ಉಂಟಾಯಿತು. ಇಂಡಿಯನ್​ ಸೂಪರ್ ಲೀಗ್ (Indian Super League)​ ಟೂರ್ನಿಯಲ್ಲಿ ರೆಫ್ರಿ ವಿರುದ್ಧ ಪ್ರತಿಭಟನೆ ನಡೆಸಿ ಕೇರಳ ಬ್ಲಾಸ್ಟರ್ಸ್ ತಂಡ, ಹೊರ ನಡೆಯಿತು. ಇದರಿಂದ ಬೆಂಗಳೂರು ಎಫ್​ಸಿ ಸೆಮಿಫೈನಲ್​​ಗೆ ಅರ್ಹತೆ ಪಡೆದಿದೆ. ಸೆಮೀಸ್​ಗೆ ಛೆಟ್ರಿ ನೇತೃತ್ವದ ಬೆಂಗಳೂರು

ಸುನಿಲ್​ ಛೆಟ್ರಿ
ಸುನಿಲ್​ ಛೆಟ್ರಿ (ISL/Twitter)

ಬೆಂಗಳೂರು ಎಫ್​ಸಿ (Bengaluru FC) ಮತ್ತು ಕೇರಳ ಬ್ಲಾಸ್ಟರ್ಸ್ (Kerala Blasters FC)​​​​ ತಂಡಗಳ ನಡುವಿನ ಗೋಲು ವಿವಾದ ಘಟನೆಯು ಅಸಾಧಾರಣ ದೃಶ್ಯಗಳಿಗೆ ಕಾರಣವಾಯಿತು. ಇದು ಪಂದ್ಯಕ್ಕೆ ವಿವಾದಾತ್ಮಕ ನಿರ್ಧಾರಕ್ಕೆ ಕಾರಣವಾಯಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ (kanteerava stadium) ಕೇರಳ ವಿರುದ್ಧ ಬೆಂಗಳೂರು ಅಜೇಯ ಓಟ ಮುಂದುವರೆಸಿತು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ರೋಚಕ ಕಾಳಗ ನಡೆಯಿತು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಷನ್​ ಪಂದ್ಯದಲ್ಲಿ ಗೋಲು ವಿವಾದ ಉಂಟಾಯಿತು. ಇಂಡಿಯನ್​ ಸೂಪರ್ ಲೀಗ್ (Indian Super League)​ ಟೂರ್ನಿಯಲ್ಲಿ ರೆಫ್ರಿ ವಿರುದ್ಧ ಪ್ರತಿಭಟನೆ ನಡೆಸಿ ಕೇರಳ ಬ್ಲಾಸ್ಟರ್ಸ್ ತಂಡ, ಹೊರ ನಡೆಯಿತು. ಇದರಿಂದ ಬೆಂಗಳೂರು ಎಫ್​ಸಿ ಸೆಮಿಫೈನಲ್​​ಗೆ ಅರ್ಹತೆ ಪಡೆದಿದೆ.

ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಟ್ಟ ಪ್ಲೇ ಆಫ್​ ಪಂದ್ಯದಲ್ಲಿ ಬೆಂಗಳೂರು ಫುಟ್​​ಬಾಲ್ ಕ್ಲಬ್​​ ಕ್ಯಾಪ್ಟನ್​​ ಸುನಿಲ್​ ಛೆಟ್ರಿ (Sunil Chhetri) 97ನೇ ನಿಮಿಷದಲ್ಲಿ ಸಿಡಿಸಿದರು. ಈ ಗೋಲು ಮಾನ್ಯಗೊಳಿಸಿದ ರೆಫ್ರಿ ನಿರ್ಧಾರವನ್ನು ಪ್ರತಿಭಟಿಸಿದ ಕೇರಳ ಬ್ಲಾಸ್ಟರ್ಸ್ ತಂಡ ಪಂದ್ಯ ತ್ಯಜಿಸಿ ಮೈದಾನದಿಂದ ಹೊರ ನಡೆಯಿತು.​​​ ಇದರಿಂದ 1 - 0 ರಿಂದ ಗೆದ್ದ ಬಿಎಫ್​​ಸಿ ಸೆಮಿಫೈನಲ್​​​​​ ಪ್ರವೇಶಿಸಿದೆ.

ನಿಗದಿತ ಸಮಯದಲ್ಲಿ ಉಭಯ ತಂಡಗಳು ಗೋಲು ಗಳಿಸಲಿಲ್ಲ. 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ, ಹೆಚ್ಚುವರಿ 30 ನಿಮಿಷಗಳಿಗೆ ಆಟವನ್ನು ವಿಸ್ತರಿಸಲಾಯಿತು. ಈ ಅವಧಿಯಲ್ಲಿ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ 97ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿಗೆ ಗೋಲು ಗಳಿಸಿಕೊಟ್ಟರು. ಆದರೆ, ಈ ಗೋಲು ಭಾರೀ ವಿವಾದಕ್ಕೆ ಕಾರಣವಾಯಿತು.

ಅಲ್ಲದೆ, ಈ ಗೋಲು ಅಮಾನ್ಯ ಎಂದು ಕೇರಳ ಬ್ಲಾಸ್ಟರ್ಸ್ ಮೈದಾನದಿಂದಲೇ ಹೊರನಡೆದ ಘಟನೆ ನಡೆಯಿತು. ಬೆಂಗಳೂರು ಎಫ್‌ಸಿ ಹೊಡೆದ ಫ್ರೀ ಕಿಕ್ ಕಾನೂನು ಬಾಹಿರ. ಅದನ್ನು ಮಾನ್ಯ ಮಾಡುವಂತಿಲ್ಲ ಎಂದು ಕೇರಳ ತಂಡದ ಆಟಗಾರರು ವಾದಿಸಿದರು. ಗೋಲು ಅಮಾನ್ಯ ಮಾಡುವಂತೆ ಕೇರಳ ತಂಡದ ಆಟಗಾರರು, ಒತ್ತಾಯಿಸಿದರು. ಆದರೆ, ರೆಫ್ರಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಈ ಗೋಲನ್ನು ಅಮಾನ್ಯಗೊಳಿಸುವಂತೆ ಪ್ರತಿಭಟಿಸಿದರು.

ಕೇರಳ ಬ್ಲಾಸ್ಟರ್ಸ್ ಮ್ಯಾನೇಜರ್ ಇವಾನ್ ವುಕೊಮಾನೋವಿಕ್ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ತಂಡದ ಆಟಗಾರರನ್ನು ಮೈದಾನದಿಂದ ಹೊರ ನಡೆಯುವಂತೆ ಸೂಚಿಸಿದರು. ಇದರ ಬೆನ್ನಲ್ಲೇ ಪಂದ್ಯ ಮುಕ್ತಾಯಗೊಂಡಿದೆ. ಬೆಂಗಳೂರು ಎಫ್​​​ ತಂಡವು ವಿಜಯಶಾಲಿಯಾಗಿದೆ ಎಂದು ರೆಫ್ರಿ ಘೋಷಿಸಿದರು. ಈ ಗೆಲುವಿನೊಂದಿಗೆ ಬೆಂಗಳೂರು ಸೆಮಿಫೈನಲ್‌ಗೆ ಪ್ರವೇಶಿಸಿತು.

ಅಸಲಿಗೆ ನಡೆದಿದ್ದಾದರೂ ಏನು..?

ಹೆಚ್ಚುವರಿ ಆಟದ ಸಮಯದಲ್ಲಿ ಸುನಿಲ್ ಛೆಟ್ರಿ ಫ್ರೀ ಕಿಕ್ ಹೊಡೆಯಲು ಬಂದರು. ಛೆಟ್ರಿ ಬಲ ಭಾಗದಿಂದ ಚೆಂಡನ್ನು ಹೊಡೆದು ಗೋಲು ಪೆಟ್ಟಿಗೆಗೆ ನುಗ್ಗಿಸಿದರು. ಗೋಲು ಗಳಿಸುತ್ತಿದ್ದಂತೆ ಕೇರಳ ಬ್ಲಾಸ್ಟರ್ಸ್ ತಾವು ರಕ್ಷಣಾ ಗೋಡೆ ನಿರ್ಮಿಸುತ್ತಿದ್ದಾಗ ಛೆಟ್ರಿ ಗೋಲು ಹೊಡೆದಿದ್ದಾರೆ. ಇದನ್ನು ಅಮಾನ್ಯ ಮಾಡಬೇಕು ಎಂದು ರೆಫ್ರಿಗೆ ತಿಳಿಸಿದರು. ರೆಫರಿ ಕ್ರಿಸ್ಟಲ್ ಜಾನ್ ಗೋಲು ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ. ರೆಫ್ರಿ ಸೂಚನೆ ನೀಡಿದ ನಂತರವೇ ಗೋಲು ಗಳಿಸಿದ್ದು ಎಂದು ಸುನಿಲ್ ಛೆಟ್ರಿ ಸ್ಪಷ್ಟಪಡಿಸಿದ್ದಾರೆ.

ಸೆಮೀಸ್​​ನಲ್ಲಿ ಮುಂಬೈ ವಿರುದ್ಧ.!

ಬೆಂಗಳೂರು ಎಫ್‌ಸಿ ತಂಡ ಐಎಸ್‌ಎಲ್‌ ಪ್ಲೇಆಫ್‌ನ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಮಾರ್ಚ್ 7 ಮತ್ತು 12 ರಂದು ಅವರು ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಲಿದ್ದಾರೆ.

ವಿಭಾಗ