ಕನ್ನಡ ಸುದ್ದಿ  /  Sports  /  We Will Win The First Trophy Says Rcb Captain Smriti Mandhana

RCB: ಟ್ರೋಫಿ ಗೆಲ್ಲುವ ಶಪಥ ಮಾಡಿದ ಮಂದಾನ! ಕಪ್​​​​​ ಗೆದ್ದೇ ಮನೆಗೆ ಹೋಗುತ್ತೇವೆ ಎಂದ ನಾಯಕಿ!

ಟ್ರೋಫಿ ಗೆಲ್ಲುವುದೇ ನಮ್ಮ ಅಜೆಂಡಾ.! ಟ್ರೋಫಿ ಗೆದ್ದು, ಇದುವರೆಗೂ ಕಪ್​ ಗೆದ್ದಿಲ್ಲ ಎಂಬ ಟೀಕೆಗಳಿಗೆ ಉತ್ತರ ಕೊಡುತ್ತೇವೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​​ ಲೀಗ್​​​​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿಯೇ ಮನೆಗೆ ಮರಳುತ್ತೇವೆ ಎಂದು ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಶಪಥ ಮಾಡಿದ್ದಾರೆ.

ಸ್ಮೃತಿ ಮಂದಾನ
ಸ್ಮೃತಿ ಮಂದಾನ (Twitter/RCB)

ಇಂಡಿಯನ್​ ಪ್ರೀಮಿಯರ್​​ ಲೀಗ್​​ (IPL) ತಂಡಗಳ ಪೈಕಿ ವಿಶೇಷ ಮತ್ತು ದೊಡ್ಡ ಅಭಿಮಾನಿ ಬಳಗ ಹೊಂದಿರುವ ತಂಡ ಅಂದರೆ, ಅದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು.! ಈ ಫ್ರಾಂಚೈಸಿಯ ಅಭಿಮಾನಿಗಳು ವಿಶಾಲ ಹೃದಯದವರು. ಪ್ರತಿ ಬಾರಿ IPL ಸೀಸನ್ ಶುರುವಾದಾಗಲೂ ಈ ಸಲ ಕಪ್ ನಮ್ದೇ ಅಂತ ಘೋಷಣೆ ಕೂಗಿ ಬೆಂಬಲಕ್ಕೆ ನಿಲ್ಲುತ್ತಾರೆ. ಆರ್​ಸಿಬಿ ಕೇವಲ ತಂಡವಲ್ಲ, ನಮ್ಮ ಉಸಿರು.! ನಮ್ಮ ಹೆಮ್ಮೆ ಅಂತಲೇ ಆರಾಧಿಸುತ್ತಾರೆ. ತಂಡಕ್ಕಾಗಿ ಪ್ರಾಣವನ್ನೇ ಅರ್ಪಿಸುವ ಈ ಫ್ಯಾನ್ಸ್​​​ಗೆ ಆರ್​​ಸಿಬಿ ಕಪ್​ ಗೆದ್ದಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ಸುದ್ದಿ.!

ಬೆಂಗಳೂರು ಕಪ್​ ಗೆದ್ದಿಲ್ಲ ಎಂಬ ಕಾರಣಕ್ಕೆ ಆರ್​ಸಿಬಿ ಅಭಿಮಾನಿಗಳ ಸಂಖ್ಯೆ ಕುಸಿದಿಲ್ಲ. ಬದಲಾಗಿ ದುಪ್ಪಟ್ಟಾಗಿದೆ. ವಿಶ್ವ ಕ್ರಿಕೆಟ್​​​​​​ನ ಫ್ಯಾನ್ಸ್​​​ ವಿಷಯದಲ್ಲಿಆರ್​​​ಸಿಬಿಯೇ ಟಾಪ್​​.! ಆರ್​​ಸಿಬಿ ಈ ಬಾರಿ ಒಂದಲ್ಲ, ಎರಡು ಟ್ರೋಫಿ ಗೆಲ್ಲುವ ಅವಕಾಶ ತನ್ನ ಮುಂದಿಟ್ಟುಕೊಂಡಿದೆ. ಪುರುಷರ ಆರ್​​ಸಿಬಿ ತಂಡವಲ್ಲ, ಮಹಿಳೆಯರ ಆರ್​ಸಿಬಿ ತಂಡ ಕೂಡ ಇದೀಗ ಭಾರತೀಯ ಟಿ20 ಲೀಗ್​ಗೆ ಬಂದಿದೆ. ಈಗ ನಾಯಕಿ ಸ್ಮೃತಿ ಮಂದಾನ ಟ್ರೋಫಿ ಗೆಲ್ಲುವ ಶಪಥ ಮಾಡಿದ್ದಾರೆ. ಟ್ರೋಫಿ ಬರ ನೀಗಿಸುವ ಬಗ್ಗೆ ಮಾತನಾಡಿದ ಆರ್​​ಸಿಬಿ ನಾಯಕಿ, ಖಂಡಿತವಾಗಿ ಪ್ರಶಸ್ತಿ ಗೆದ್ದು, ಸುಖಾಂತ್ಯ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಟ್ರೋಫಿ ಗೆದ್ದೇ ಮನೆಗೆ ಹೋಗುತ್ತೇವೆ.!

ಈ ಬಗ್ಗೆ ಮಾತನಾಡಿದ ಸ್ಮೃತಿ ಮಂದಾನ, ಟ್ರೋಫಿ ಗೆಲ್ಲುವುದೇ ನಮ್ಮ ಅಜೆಂಡಾ.! ಟ್ರೋಫಿ ಗೆದ್ದು, ಇದುವರೆಗೂ ಕಪ್​ ಗೆದ್ದಿಲ್ಲ ಎಂಬ ಟೀಕೆಗಳಿಗೆ ಉತ್ತರ ಕೊಡುತ್ತೇವೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​​ ಲೀಗ್​​​​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿಯೇ ಮನೆಗೆ ಮರಳುತ್ತೇವೆ. ಅದಕ್ಕಾಗಿ ಸಾಕಷ್ಟು ಹಾರ್ಡ್​​ವರ್ಕ್​ ಮಾಡುತ್ತಿದ್ದೇವೆ. ತುಂಬಾ ಅದ್ಭುತ ತಂಡವನ್ನು ಹೊಂದಿದ್ದೇವೆ. ಪ್ರತಿ ಹಂತದಲ್ಲೂ ಪ್ಲಾನ್ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕಪ್​ ಮಿಸ್​ ಆಗಲ್ಲ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಆರ್​​ಸಿಬಿ ನಾಯಕಿ.!

ಹಾಗೆಯೇ ಮಾತು ಮುಂದುವರೆಸಿದ ಸ್ಮೃತಿ ಮಂದಾನ, ತಂಡದ ಸ್ಟ್ರಾಟರ್ಜಿ ಕುರಿತು ವಿವರಿಸಿದರು. ತಂಡದ ಸ್ಟ್ರಾಟರ್ಜಿ ವೆರಿ ಸಿಂಪಲ್​. ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಗೆಲ್ಲುವುದು. ಅದಕ್ಕಾಗಿ ತಂಡದ ಆಟಗಾರ್ತಿಯರು ಸತತ ಪರಿಶ್ರಮ ಹಾಕುತ್ತಿದ್ದಾರೆ. ಬಿಡುವು ಪಡೆಯದೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ತಂಡದಲ್ಲಿ ಕೆಲವರ ಬಗ್ಗೆ ನಾನಿನ್ನೂ ತಿಳಿದುಕೊಳ್ಳಬೇಕು. ಕೆಲವರ ಬಗ್ಗೆ ಈಗಾಗಲೇ ತಿಳಿದಿದ್ದೇನೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ತಂಡದ ಕ್ಯಾಪ್ಟನ್​​ಗಳು ತಂಡಗಳು ಇದ್ದಾರೆ. ನ್ಯೂಜಿಲೆಂಡ್​​ ತಂಡದ ಸೋಫಿ ಡಿವೈನ್, ಇಂಗ್ಲೆಂಡ್​ ತಂಡದ ಹೀದರ್​​ ನೈಟ್​​, ಸೌತ್​ ಆಫ್ರಿಕಾ ತಂಡ ಡೇನ್​ ವ್ಯಾನ್​ ನೀಕರ್ಕ್​​ ನಾಯಕಿಯರಾಗಿ ಅಪಾರ ಅನುಭವ ಹೊಂದಿದ್ದಾರೆ. ಈಗ ನಾನು ನಾಯಕಿಯಾಗಿ ಅವರೊಂದಿಗೂ ಸಾಕಷ್ಟು ಕಲಿಯುವುದಿದೆ. ಏನೇ ಸಮಸ್ಯೆ ಕಂಡು ಬಂದರೂ, ಟೀಮ್​ ಮ್ಯಾನೇಜ್​ಮೆಂಟ್​ ಜೊತೆಗೆ ಅವರ ಸಲಹೆ ಕೂಡ ಸ್ವೀಕರಿಸುತ್ತೇನೆ. ತಂಡದಲ್ಲಿ ಉತ್ತಮ ಆರೋಗ್ಯಕರ ವಾತವರಣ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.

ನಾಳೆ ಆರ್​ಸಿಬಿ ಪಂದ್ಯ

ಆರ್​​​​ಸಿಬಿ ನಾಳೆ ಶುಭಾರಂಭದ ನಿರೀಕ್ಷೆಯಲ್ಲಿದೆ. ಮುಂಬೈನ ಬ್ರೆಬೋರ್ನ್​ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​​​​ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಚೊಚ್ಚಲ ಲೀಗ್​​​ನ ಚೊಚ್ಚಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಕೋಟ್ಯಂತರ ಆರ್​​ಸಿಬಿ ಫ್ಯಾನ್ಸ್​ ಕಾಯುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಕೋಮಲ್ ಜಂಜಾದ್, ಮೇಘನ್ ಶಟ್, ಸಹನಾ ಪವಾರ್.