PKL Season 11: ಕಬಡ್ಡಿ ಆಟಗಾರರ ತೂಕ ಎಷ್ಟಿರಬೇಕು; ಪುರುಷ-ಮಹಿಳಾ ಆಟಗಾರರಿಗೆ ತೂಕದ ಮಿತಿ ಏನು?-what is the weight limit for kabaddi pro kabaddi league 2024 pkl season 11 kannada news prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Pkl Season 11: ಕಬಡ್ಡಿ ಆಟಗಾರರ ತೂಕ ಎಷ್ಟಿರಬೇಕು; ಪುರುಷ-ಮಹಿಳಾ ಆಟಗಾರರಿಗೆ ತೂಕದ ಮಿತಿ ಏನು?

PKL Season 11: ಕಬಡ್ಡಿ ಆಟಗಾರರ ತೂಕ ಎಷ್ಟಿರಬೇಕು; ಪುರುಷ-ಮಹಿಳಾ ಆಟಗಾರರಿಗೆ ತೂಕದ ಮಿತಿ ಏನು?

Pro Kabaddi League 2024: ಪ್ರೋ ಕಬಡ್ಡಿ ಲೀಗ್​ 11ನೇ ಆವೃತ್ತಿಯು ಅಕ್ಟೋಬರ್​ 18 ರಿಂದ ಭರ್ಜರಿ ಆರಂಭ ಪಡೆದುಕೊಳ್ಳಲಿದೆ. ಆದರೆ ಕಬಡ್ಡಿ ಆಡುವ ಆಟಗಾರರ ತೂಕದ ಎಷ್ಟಿರಬೇಕು? ಇಲ್ಲಿದೆ ವಿವರ.

ಕಬಡ್ಡಿ ಆಡಲು ಆಟಗಾರರ ತೂಕ ಎಷ್ಟಿರಬೇಕು; ಪುರುಷ-ಮಹಿಳಾ ಆಟಗಾರರಿಗೆ ತೂಕದ ಮಿತಿ ಏನು?
ಕಬಡ್ಡಿ ಆಡಲು ಆಟಗಾರರ ತೂಕ ಎಷ್ಟಿರಬೇಕು; ಪುರುಷ-ಮಹಿಳಾ ಆಟಗಾರರಿಗೆ ತೂಕದ ಮಿತಿ ಏನು?

ಸೀಸನ್-11ರ ಪ್ರೊ ಕಬಡ್ಡಿ ಲೀಗ್ (PKL Season 11) ಟೂರ್ನಿ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಆಟಗಾರರು ಸಹ ಅದ್ಭುತ ಪ್ರದರ್ಶನದೊಂದಿಗೆ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 18 ರಿಂದ ಲೀಗ್ ಆರಂಭಗೊಳ್ಳಲಿದೆ. ಕೊನೆಯ ಮೂರು ಆವೃತ್ತಿಗಳು (ಪಿಕೆಎಲ್ 8, 9, 10) ಡಿಸೆಂಬರ್-ಫೆಬ್ರವರಿ ನಡುವೆ ನಡೆದಿದ್ದವು. ಆದರೆ ಈ ಬಾರಿ ಬೇಗನೇ ಟೂರ್ನಿ ಆರಂಭವಾಗುತ್ತಿದೆ. ಇನ್ನು ಈ ಕ್ರೀಡೆಗೆ ತೂಕದ ಮಿತಿ ಏನು ಎಂಬುದರ ವಿವರವನ್ನು ಈ ಮುಂದೆ ತಿಳಿಯೋಣ.

ಅಕ್ಟೋಬರ್​ 18ರಂದು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ಹೈದರಾಬಾದ್​ನಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ನವೆಂಬರ್ 10 ರಿಂದ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಎರಡನೇ ಹಂತದಲ್ಲಿ ಪಂದ್ಯಗಳು ನಡೆಯಲಿವೆ. ಇದಾದ ನಂತರ 3ನೇ ಹಂತದಲ್ಲಿ ಪುಣೆಯ ಬಾಳೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಆವೃತ್ತಿಯು ಕೇವಲ ಮೂರು ನಗರಗಳಲ್ಲಿ ಮಾತ್ರ ನಡೆಯಲಿದೆ.

ಇನ್ನು ಲೀಗ್‌ನಲ್ಲಿ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ ಮತ್ತು ಯುಪಿ ಯೋಧಾಸ್ ತಂಡಗಳು ಕಣಕ್ಕಿಳಿಯಲಿವೆ. ಪ್ರತಿಷ್ಠಿತ ಚಾಂಪಿಯನ್‌ಶಿಪ್ ಕಿರೀಟಕ್ಕಾಗಿ 12 ತಂಡಗಳು ಸೆಣಸಾಟ ನಡೆಸಲಿವೆ. ಕಳೆದ ವರ್ಷ ಅಂದರೆ 10ನೇ ಸೀಸನ್​ನಲ್ಲಿ ಪುಣೇರಿ ಪಲ್ಟನ್ಸ್ ಗೆದ್ದು ಬೀಗಿತ್ತು. ಹರಿಯಾಣ ಸ್ಟೀಲರ್ಸ್ ಎದುರು 3 ಪಾಯಿಂಟ್ಸ್ ಅಂತರದಲ್ಲಿ ಜಯಿಸಿ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು.

ಪ್ರೊ ಕಬಡ್ಡಿಗೆ ತೂಕದ ಮಿತಿ ಎಷ್ಟು?

ಪ್ರೊ ಕಬಡ್ಡಿ ಲೀಗ್​ನಲ್ಲಿ ತೂಕದ ಮಿತಿ ಎಷ್ಟಿರಬೇಕು ಎಂಬ ಪ್ರಶ್ನೆ ಸಾಕಷ್ಟು ಮಂದಿಗೆ ಕಾಡಿದೆ. ಕೆಲವೊಂದು ಕ್ರೀಡೆಗಳಿಗೆ ಇಷ್ಟೇ ತೂಕ ಇರಬೇಕು ಎಂಬ ನಿಯಮ ಇದೆ. ಅದೇ ರೀತಿ ಕಬಡ್ಡಿಗೂ ತೂಕದ ಮಿತಿ ಇದೆ. ಪ್ರೊ ಕಬಡ್ಡಿಯಲ್ಲಿ ಪುರುಷ ಆಟಗಾರರ ತೂಕದ ಮಿತಿ 85 ಕೆಜಿ ಇರಲಿದೆ. ಅದೇ ರೀತಿ ಮಹಿಳಾ ಆಟಗಾರ್ತಿಯರಿಗೆ ತೂಕದ ಮಿತಿ 75 ಕೆಜಿ ತೂಕದ ಮಿತಿಯನ್ನು ಅನುಸರಿಸಬೇಕು. ಲೀಗ್‌ನಲ್ಲಿ ಆಟಗಾರರನ್ನು ನಿಯಮಿತವಾಗಿ ತೂಕ ಮಾಡಲಾಗುತ್ತದೆ. ನಿಗದಿಪಡಿಸಿದ ತೂಕದ ಮಿತಿಗಿಂತ ಹೆಚ್ಚಿದ್ದರೆ ಅವರಿಗೆ ಆಡಲು ಅವಕಾಶ ಇರುವುದಿಲ್ಲ.

ಆದರೆ ಕಬಡ್ಡಿಯಲ್ಲಿ, ನಿರ್ದಿಷ್ಟ ಲೀಗ್ ಅಥವಾ ಸ್ಪರ್ಧೆಯನ್ನು ಅವಲಂಬಿಸಿ ತೂಕದ ಮಿತಿ ಬದಲಾಗುತ್ತದೆ. ಭಾರತದಲ್ಲಿ ಜೂನಿಯರ್-ವರ್ಗದ ಕಬಡ್ಡಿ ಪಂದ್ಯಾವಳಿಯಾದ ಯುವ ಕಬಡ್ಡಿ ಸಿರೀಸ್​ಗಳಲ್ಲಿ ಆಟಗಾರರು 80 ಕೆಜಿಗಿಂತ ಕಡಿಮೆ ತೂಕ ಹೊಂದಿರಬೇಕು. ಕಿರಿಯ ಆಟಗಾರರಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಗಾಯಗಳನ್ನು ತಡೆಗಟ್ಟಲು ಈ ತೂಕದ ಮಿತಿಯನ್ನು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಪ್ರೊ ಕಬಡ್ಡಿ ಸೀಸನ್ 11 ಅನ್ನು ಎಲ್ಲಿ ವೀಕ್ಷಿಸಬೇಕು?

ಪ್ರೊ ಕಬಡ್ಡಿ ಸೀಸನ್ 11 ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಇದಲ್ಲದೆ, ಭಾರತದಲ್ಲಿ ಪ್ರೊ ಕಬಡ್ಡಿ ಸೀಸನ್ 11 ರ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

PKL ಸೀಸನ್
ವಿಜೇತ
ರನ್ನರ್​ಅಪ್
MVP (ಪ್ರತಿ ಸೀಸನ್)
1
ಜೈಪುರ ಪಿಂಕ್ ಪ್ಯಾಂಥರ್ಸ್
ಯು ಮುಂಬಾ
ಅನುಪ್ ಕುಮಾರ್
2
ಯು ಮುಂಬಾ
ಬೆಂಗಳೂರು ಬುಲ್ಸ್
ಕಾಶಿಲಿಂಗ್ ಅಡಕೆ
3
ಪಾಟ್ನಾ ಪೈರೇಟ್ಸ್
ಯು ಮುಂಬಾ
ಮಂಜೀತ್ ಚಿಲ್ಲರ್
4
ಪಾಟ್ನಾ ಪೈರೇಟ್ಸ್
ಜೈಪುರ ಪಿಂಕ್ ಪ್ಯಾಂಥರ್ಸ್
ರಾಹುಲ್ ಚೌಧರಿ
5
ಪಾಟ್ನಾ ಪೈರೇಟ್ಸ್
ಗುಜರಾತ್ ಜೈಂಟ್ಸ್
ಪರ್ದೀಪ್ ನರ್ವಾಲ್
6
ಬೆಂಗಳೂರು ಬುಲ್ಸ್
ಗುಜರಾತ್ ನ್ ಜೈಂಟ್ಸ್
ಪವನ್ ಸೆಹ್ರಾವತ್
7
ಬೆಂಗಾಲ್ ವಾರಿಯರ್ಸ್
ದಬಾಂಗ್ ಡೆಲ್ಲಿ
ನವೀನ್ ಕುಮಾರ್,
8
ದಬಾಂಗ್ ಡೆಲ್ಲಿ
ಪಾಟ್ನಾ ಪೈರೇಟ್ಸ್
ನವೀನ್ ಕುಮಾರ್
9
ಜೈಪುರ ಪಿಂಕ್ ಪ್ಯಾಂಥರ್ಸ್
ಪುಣೇರಿ ಪಲ್ಟನ್
ಅರ್ಜುನ್ ದೇಶ್ವಾಲ್
10
ಪುಣೇರಿ ಪಲ್ಟನ್
ಹರಿಯಾಣ ಸ್ಟೀಲರ್ಸ್
ಅಸ್ಲಂ ಮುಸ್ತಫಾ ಇನಾಮದಾರ

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.