ಹೆಸರು ಯೂಸುಫ್ ಡಿಕೆಕ್, ಟರ್ಕಿಯ​ ಭಯಂಕರ ಶೂಟರ್; ಸ್ಪೆಷಲ್ ಲೆನ್ಸ್, ಕಣ್ಣುಪಟ್ಟಿ ಇಲ್ಲದೆ ಬೆಳ್ಳಿ ಗೆದ್ದ 51ರ ವಯಸ್ಕ
ಕನ್ನಡ ಸುದ್ದಿ  /  ಕ್ರೀಡೆ  /  ಹೆಸರು ಯೂಸುಫ್ ಡಿಕೆಕ್, ಟರ್ಕಿಯ​ ಭಯಂಕರ ಶೂಟರ್; ಸ್ಪೆಷಲ್ ಲೆನ್ಸ್, ಕಣ್ಣುಪಟ್ಟಿ ಇಲ್ಲದೆ ಬೆಳ್ಳಿ ಗೆದ್ದ 51ರ ವಯಸ್ಕ

ಹೆಸರು ಯೂಸುಫ್ ಡಿಕೆಕ್, ಟರ್ಕಿಯ​ ಭಯಂಕರ ಶೂಟರ್; ಸ್ಪೆಷಲ್ ಲೆನ್ಸ್, ಕಣ್ಣುಪಟ್ಟಿ ಇಲ್ಲದೆ ಬೆಳ್ಳಿ ಗೆದ್ದ 51ರ ವಯಸ್ಕ

Who is Yusuf Dikec: ಪ್ಯಾರಿಸ್ ಒಲಿಂಪಿಕ್ಸ್​ 2024 ಕ್ರೀಡಾಕೂಟದಲ್ಲಿ ಅದ್ಭುತವೊಂದು ನಡೆದಿದೆ. ಟರ್ಕಿ ದೇಶದ 51 ವರ್ಷದ ಆಟಗಾರ ಯೂಸುಫ್ ಡಿಕೆಕ್ ಶೂಟಿಂಗ್​ನಲ್ಲಿ ಬೆಳ್ಳಿ ಗೆದ್ದು ಇಡೀ ಜಗತ್ತಿಗೆ ಪರಿಚಯವಾಗಿದ್ದಾರೆ.

ಹೆಸರು ಯೂಸುಫ್ ಡಿಕೆಕ್, ಟರ್ಕಿಯ​ ಭಯಂಕರ ಶೂಟರ್; ಸ್ಪೆಷಲ್ ಲೆನ್ಸ್, ಕಣ್ಣುಪಟ್ಟಿ ಇಲ್ಲದೆ ಬೆಳ್ಳಿ ಗೆದ್ದ 51ರ ವಯಸ್ಕ
ಹೆಸರು ಯೂಸುಫ್ ಡಿಕೆಕ್, ಟರ್ಕಿಯ​ ಭಯಂಕರ ಶೂಟರ್; ಸ್ಪೆಷಲ್ ಲೆನ್ಸ್, ಕಣ್ಣುಪಟ್ಟಿ ಇಲ್ಲದೆ ಬೆಳ್ಳಿ ಗೆದ್ದ 51ರ ವಯಸ್ಕ

ಈ ಜಗತ್ತಿನಲ್ಲಿ ಯಾವುದೇ ರೀತಿಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಯಾರು ಗೆಲ್ಲುತ್ತಾರೋ ಅಂತಹವರ ಹೆಸರನ್ನಷ್ಟೇ ನಾವಾಗಲಿ, ನೀವಾಗಲಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ, ಅಂತಹವರ ಹೆಸರು ಮಾತ್ರ ಚರಿತ್ರೆಯ ಪುಟಗಳಲ್ಲಿ ಉಳಿದುಬಿಡಲಿದೆ. ಆದರೆ, ಇಲ್ಲೊಬ್ಬ ದ್ವಿತೀಯ ಸ್ಥಾನಕ್ಕೂ ಬೆಲೆ ಹಾಗೂ ಗೌರವ ದೊರಕಿಸಿ ಚರಿತ್ರೆಯನ್ನೇ ಸೃಷ್ಟಿಸಿದ್ದಾನೆ! ಹೆಸರು ಯೂಸುಫ್ ಡಿಕೆಕ್. ಟರ್ಕಿ ದೇಶದ ಶೂಟರ್​.

ಎರಡ್ಮೂರು ದಿನದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಹವಾ ಸೃಷ್ಟಿಸಿರುವ ಮಿಸ್ಟರ್ ಕೂಲ್ ಎಂದೇ ಕರೆಸಿಕೊಳ್ಳುವ ಡಿಕೆಕ್, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಶೂಟಿಂಗ್​ನಲ್ಲಿ ಸಾದಾ ಶೈಲಿಯಲ್ಲಿ ಮಿನುಗುವ ಬೆಳ್ಳಿ ಪದಕಕ್ಕೆ ಗುರಿಯಿಟ್ಟರು. ಸೆವ್ವಲ್ ಇಳಯ್ದ ತರ್ಹನ್ ಜೊತೆಗಾರ್ತಿಯಾಗಿದ್ದರು. ಆದರೆ ಸ್ವಲ್ಪದರಲ್ಲಿ ಚಿನ್ನದ ಪದಕ ಸರ್ಬಿಯಾ ಪಾಲಾಯಿತು.

ಇಲ್ಲಿರುವ ವಿಷಯ ಚಿನ್ನ ಮತ್ತು ಬೆಳ್ಳಿಯದ್ದಲ್ಲ. ಈ ಮನುಷ್ಯ ಶೂಟಿಂಗ್​ಗೆ ಎಂಟ್ರಿ ಕೊಟ್ಟ ಸ್ಟೈಲ್ ಮತ್ತು ಶೂಟ್​​ ಮಾಡಿದ ರೀತಿಗೆ ಇಡೀ ಜಗತ್ತೇ ಸಲಾಂ ಎನ್ನುತ್ತಿದೆ. ಚಿನ್ನದ ಪದಕ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿರುವುದೂ ಉಂಟು. ಅದರಲ್ಲೂ ಆತನ ದೇಹಭಾಷೆ ಎಲ್ಲರನ್ನೂ ಆಕರ್ಷಿಸಿತು. ಆತನ ಆತ್ಮ ವಿಶ್ವಾಸ ಎಂಥವರಿಗೂ ಅಸೂಯೆ ಹುಟ್ಟಿಸುತ್ತದೆ.

ಆತನ ಕಣ್ಣುಗಳು ಮತ್ತು ಶಾಂತಮುಖ ಮಾತ್ರವಲ್ಲ, ಇಡೀ ದೇಹವೇ ಹೇಳುತ್ತಿತ್ತು ತಾನೆಷ್ಟು ಆತ್ಮವಿಶ್ವಾಸ ಹೊಂದಿದ್ದರು ಎಂಬುದನ್ನು. ಆತ ಜೇಬಲ್ಲಿ ಕೈ ಹಾಕಿದ ರೀತಿ, ಮಾಮೂಲಿ ಕನ್ನಡಕ ಹಾಕಿಕೊಂಡು ಬೇರೆ ಯಾವ ಪರಿಕರ ಉಪಯೋಗಿಸದೇ ಅವ ಬಂದ, ಅವ ನೋಡಿದ, ಅವ ಗೆದ್ದ ಅನ್ನೋಥರ ಈ ಗೆಲುವು ನಿಜವಾಗಿಯೂ ವಿಶೇಷ ಅನ್ನಿಸಿತು. ತಾಳ್ಮೆ ಎಂಬ ಪದಕ್ಕೆ ನಿಜವಾದ ಅರ್ಥವಾಗಿ ಮಾರ್ಪಟ್ಟರು ಡಿಕೆಕ್.

ಶೂಟಿಂಗ್​ಗೆ ಮುಖ್ಯವಾಗಿ ಬೇಕಿರುವುದು ಗೇಮ್ಸ್​ ಪ್ಲಾನ್ಸ್, ತಂತ್ರಗಳು ಅಲ್ಲ. ತಾಳ್ಮೆ ಮತ್ತು ಏಕಾಗ್ರತೆ. ಎಷ್ಟು ಏಕಾಗ್ರತೆ ಬೇಕೆಂದರೆ, ಋಷಿಗಳು ತಪಸ್ಸು ಮಾಡಿದಂತೆ. ಪ್ರತಿ ಸುತ್ತಿನಲ್ಲೂ ಒಂದೊಂದು ರೀತಿ ಏಕಾಗ್ರತೆ ಬೇಕು. ಅಡಿಯಿಂದ ಮುಡಿವರೆಗೆ ಅಲುಗಾಡದಂತೆ ನಿಲ್ಲಬೇಕು, ದೇಹ ಬೆಂಡಾಗಬಾರದು, ಒಂದೇ ಮಾತಲ್ಲಿ ಹೇಳಬೇಕೆಂದರೆ ವಿಗ್ರಹದಂತೆ ನಿಂತುಬಿಟ್ಟು ಪಿಸ್ತೂಲಿನ ಟ್ರಿಗರ್ ಮೇಲೆ ತೋರು ಬೆರಳು ಇಡಬೇಕು.

ವಿಗ್ರಹದಂತೆ ನಿಲ್ಲುವುದು ಮಾತ್ರವಲ್ಲ, ಕಣ್ಣುಗಳು ಗುರಿಯ ಮೇಲೆಯೇ ಇಡಬೇಕು. ತನ್ನ ಹಿಂದೆ, ಅಕ್ಕ-ಪಕ್ಕದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವು ತನಗೆ ಗೊತ್ತಾಗಬಾರದು. ಗುರಿ ಬಿಟ್ಟರೆ ಇನ್ನೇನೂ ಕಾಣಿಸುತ್ತಿಲ್ಲ, ಇನ್ನೇನೂ ಕೇಳಿಸುತ್ತಿಲ್ಲ ಎನ್ನುವ ಹಂತಕ್ಕೆ ಏಕಾಗ್ರತೆ ಇರಬೇಕು.​ ಬೇರೆಲ್ಲ ಶೂಟರ್ಸ್​ ಭರ್ಜರಿ ಸಿದ್ಧತೆಯೊಂದಿಗೆ ಬಂದಿದ್ದರು. ಆದರೆ ಡಿಕಕ್ ತುಂಬಾ ಸರಳವಾಗಿ ಬಂದಿದ್ದರು. ಸ್ಪೆಷಲ್ ಲೆನ್ಸ್, ಕಣ್ಣುಪಟ್ಟಿ ಇಲ್ಲದೆ ಬೆಳ್ಳಿ ಪದಕವನ್ನು ಗೆದ್ದುಕೊಂಡರು.

5 ಒಲಿಂಪಿಕ್ಸ್​​ನಲ್ಲಿ ಭಾಗಿ

ಯೂಸುಫ್ 5 ಒಲಿಂಪಿಕ್ಸ್​​ಗಳನ್ನು ಆಡಿದ್ದು, ಮೊದಲ ಬಾರಿಗೆ ಬೆಳ್ಳಿಯ ಗೆರೆ ಎಳೆದಿದ್ದಾರೆ. ಆದರೆ, ಏಳು ಬಾರಿಗೆ ಯೂರೋಪಿಯನ್ ಚಾಂಪಿಯನ್ ಆಗಿದ್ದರು ಎಂಬುದು ಅಚ್ಚರಿಯಾಗಿದೆ. ಈತನ ಕೆರಿಯರ್ ಶುರುವಾಗಿದ್ದು, ಟರ್ಕಿಯ ಜೆಂಡರ್ಮೆರಿ ಜನರಲ್ ಕಮಾಂಡ್ ನಾನ್-ಕಮಿಷನ್ಡ್ ಅಧಿಕಾರಿಯಾಗಿ. ಮತ್ತೊಂದು ವಿಶೇಷ ಅಂದರೆ ಈತ ಭಾರತೀಯ ಮೂಲದವರು.

ಭಾರತದ ಮೂಲದವರಂತೆ!

ಅಂಕಾರಾದ ಗಾಜಿ ಯೂನಿವರ್ಸಿಟಿ ಸ್ಕೂಲ್ ಆಫ್ ಫಿಸಿಕಲ್ ಟ್ರೈನಿಂಗ್ & ಎಜುಕೇಶನ್‌ನಲ್ಲಿ ಅಧ್ಯಯನ ಮಾಡಿರುವ ಯೂಸುಫ್, ನಂತರ ಕೊನ್ಯಾದ ಸೆಲ್ಕುಕ್ ವಿಶ್ವವಿದ್ಯಾಲಯದಿಂದ ಕೋಚಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇಂಗ್ಲಿಷ್ ಮತ್ತು ಟರ್ಕಿಶ್ ಎರಡರಲ್ಲೂ ಡಿಕೆಕ್ ನಿರರ್ಗಳವಾಗಿ ಮಾತನಾಡುತ್ತಾರೆ. 2008, 2012, 2016, 2020 ಮತ್ತು 2024ರ ಒಲಿಂಪಿಕ್ಸ್​​ನಲ್ಲಿ ಟರ್ಕಿ ಪ್ರತಿನಿಧಿಸಿದ್ದಾರೆ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನ ಜೊತೆ ಟರ್ಕಿಗೆ ವಲಸೆ ಹೋದ ಉತ್ತರಾಖಂಡದ ಪೂರ್ವಿಕರ ಮನೆತನದ ಹುಡುಗ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.