Hockey India League: ಮಹಿಳಾ ಹಾಕಿ ಇಂಡಿಯಾ ಲೀಗ್: ತಂಡಗಳು, ವೇಳಾಪಟ್ಟಿ, ಪ್ರಶಸ್ತಿ ಮೊತ್ತ, ಸ್ಟ್ರೀಮಿಂಗ್ ವಿವರ ಇಲ್ಲಿದೆ
Women's Hockey India League: ಮಹಿಳಾ ಹಾಕಿ ಇಂಡಿಯಾ ಲೀಗ್ ಇಂದಿನಿಂದ ಆರಂಭವಾಗಲಿದೆ. ಸ್ಫರ್ಧಿಸುವ ತಂಡಗಳು, ಟೂರ್ನಿಯ ವೇಳಾಪಟ್ಟಿ, ಸ್ಟ್ರೀಮಿಂಗ್ ವಿವರ ಇಲ್ಲಿದೆ

ರಾಂಚಿಯ ಐಕಾನಿಕ್ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಹಾಕಿ ಸ್ಟೇಡಿಯಂನಲ್ಲಿ ಉದ್ಘಾಟನಾ ಮಹಿಳಾ ಹಾಕಿ ಇಂಡಿಯಾ ಲೀಗ್ (Womens Hockey India League) ಇಂದಿನಿಂದ ಪ್ರಾರಂಭವಾಗಲಿದೆ. ಎಫ್‌ಐಎಚ್ ಒಲಿಂಪಿಕ್ಸ್ ಕ್ವಾಲಿಫೈಯರ್‌ಗಳು ಮತ್ತು ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಂತಹ ಪ್ರತಿಷ್ಠಿತ ಟೂರ್ನಿಗಳ ಪಂದ್ಯಗಳನ್ನು ಆಯೋಜಿಸಿದ್ದ ಈ ಕ್ರೀಡಾಂಗಣವು ಮತ್ತೊಂದು ಐತಿಹಾಸಿಕ ದಿನಕ್ಕೆ ಸಜ್ಜಾಗಿದೆ. ಲೀಗ್ನಲ್ಲಿ ನಾಲ್ಕು ತಂಡಗಳು ಸ್ಪರ್ಧಿಸಲಿದ್ದು, ಉದ್ಘಾಟನಾ ಪಂದ್ಯವು ದೆಹಲಿ ಎಸ್ಜಿ ಪೈಪರ್ಸ್ ಮತ್ತು ಒಡಿಶಾ ವಾರಿಯರ್ಸ್ ನಡುವೆ ನಡೆಯಲಿದೆ.
ಸ್ಫರ್ಧಿಸುವ ತಂಡಗಳು ಮತ್ತು ನಾಯಕಿಯರು
ದೆಹಲಿ ಎಸ್ಜಿ ಪೈಪರ್ಸ್ - (ನವನೀತ್ ಕೌರ್)
ಒಡಿಶಾ ವಾರಿಯರ್ಸ್ - (ನೇಹಾ ಗೋಯೆಲ್)
ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ - (ಉದಿತಾ)
ಸೂರ್ಮಾ ಹಾಕಿ ಕ್ಲಬ್ - (ಸಲೀಮಾ ಟೆಟೆ)
ಮಹಿಳಾ ಹಾಕಿ ಇಂಡಿಯಾ ಲೀಗ್: ವೇಳಾಪಟ್ಟಿ
12 ಜನವರಿ 2025: ದೆಹಲಿ ಎಸ್ಜಿ ಪೈಪರ್ಸ್ vs ಒಡಿಶಾ ವಾರಿಯರ್ಸ್ - ರಾತ್ರಿ 08:40
13 ಜನವರಿ 2025: ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ vs ಸೂರ್ಮಾ ಹಾಕಿ ಕ್ಲಬ್ - ಸಂಜೆ 06:00
14 ಜನವರಿ 2025: ದೆಹಲಿ ಎಸ್ಜಿ ಪೈಪರ್ಸ್ vs ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ - ಸಂಜೆ 06:00
15 ಜನವರಿ 2025: ಒಡಿಶಾ ವಾರಿಯರ್ಸ್ vs ಸೂರ್ಮಾ ಹಾಕಿ ಕ್ಲಬ್ - ಸಂಜೆ 06:00
16 ಜನವರಿ 2025: ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ vs ಒಡಿಶಾ ವಾರಿಯರ್ಸ್ - ಸಂಜೆ 06:00
17 ಜನವರಿ 2025: ದೆಹಲಿ ಎಸ್ಜಿ ಪೈಪರ್ಸ್ vs ಸೂರ್ಮಾ ಹಾಕಿ ಕ್ಲಬ್ - ರಾತ್ರಿ 08:15
19 ಜನವರಿ 2025: ಒಡಿಶಾ ವಾರಿಯರ್ಸ್ vs ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ - ಸಂಜೆ 06:00
20 ಜನವರಿ 2025: ಸೂರ್ಮಾ ಹಾಕಿ ಕ್ಲಬ್ vs ದೆಹಲಿ ಎಸ್ಜಿ ಪೈಪರ್ಸ್ - ಸಂಜೆ 06:00
21 ಜನವರಿ 2025: ಸೂರ್ಮಾ ಹಾಕಿ ಕ್ಲಬ್ vs ಒಡಿಶಾ ವಾರಿಯರ್ಸ್ - ಸಂಜೆ 06:00
22 ಜನವರಿ 2025: ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ vs ದೆಹಲಿ ಎಸ್ಜಿ ಪೈಪರ್ಸ್ - ಸಂಜೆ 06:00
23 ಜನವರಿ 2025: ಒಡಿಶಾ ವಾರಿಯರ್ಸ್ vs ದೆಹಲಿ ಎಸ್ಜಿ ಪೈಪರ್ಸ್ - ಸಂಜೆ 06:00
24 ಜನವರಿ 2025: ಸೂರ್ಮಾ ಹಾಕಿ ಕ್ಲಬ್ vs ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ - ಸಂಜೆ 06:00
26 ಜನವರಿ 2025: ಫೈನಲ್ - ರಾತ್ರಿ 08:15
ಮಹಿಳೆಯರ ಹಾಕಿ ಇಂಡಿಯಾ ಲೀಗ್: ಸ್ಟ್ರೀಮಿಂಗ್ ವಿವರ
ಸೋನಿ ಟೆನ್ 1, ಸೋನಿ ಟೆನ್ 1 ಹೆಚ್‌ಡಿ, ಸೋನಿ ಟೆನ್ 3, ಸೋನಿ ಟೆನ್ 3 ಹೆಚ್‌ಡಿ, ಸೋನಿ ಟೆನ್ 4, ಸೋನಿ ಟೆನ್ 4 ಹೆಚ್‌ಡಿ ಚಾನೆಲ್ ಸೇರಿ ಡಿಡಿ ಸ್ಪೋರ್ಟ್ಸ್ ಮತ್ತು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಹಾಕಿ ಇಂಡಿಯಾ ಲೀಗ್ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಸೋನಿ ಲಿವ್ ಮತ್ತು ವೇವ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಪ್ರಶಸ್ತಿ ಮೊತ್ತ
ವಿಜೇತರಿಗೆ ಸಿಗುವ ಮೊತ್ತ - 1.5 ಕೋಟಿ
ರನ್ನರ್ಅಪ್ಗೆ ಸಿಗುವ ಮೊತ್ತ - 1 ಕೋಟಿ
ಮೂರನೇ ಸ್ಥಾನಿ ತಂಡಕ್ಕೆ - 50 ಲಕ್ಷ
ಸರಣಿ ಶ್ರೇಷ್ಠ ಆಟಗಾರರಿಗೆ - 20 ಲಕ್ಷ
