ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್​ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ
ಕನ್ನಡ ಸುದ್ದಿ  /  ಕ್ರೀಡೆ  /  ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್​ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ

ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್​ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ

ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್​ ನಿಷೇಧ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ಪ್ರತಿಕ್ರಿಯಿಸಿದ್ದಾರೆ.

ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್​ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ
ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್​ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ

ಆಸ್ಟ್ರೇಲಿಯನ್ ಓಪನ್​ ಚಾಂಪಿಯನ್ ಹಾಗೂ ಇಟಲಿಯ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ (Jannik Sinner doping ban) ಅವರನ್ನು ಮೂರು ತಿಂಗಳ ಕಾಲ ನಿಷೇಧ ಮಾಡಲಾಗಿದೆ. ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (WADA) ಜತೆಗೆ ಒಪ್ಪಂದ ಮಾಡಿರುವ ಯಾನಿಕ್ ಸಿನ್ನರ್​, ತಮ್ಮ ಹೊಣೆ ಹೊತ್ತು ಪ್ರಕರಣವನ್ನು ಬಗೆಹರಿಸಿಕೊಂಡಿದ್ದಾರೆ. ಶಿಕ್ಷೆಯ ಅವಧಿ ಫೆಬ್ರವರಿ 9ರಿಂದ ಮೇ 4ರ ತನಕ. ಈ ಸಮಯದಲ್ಲಿ ಅವರು ಯಾವುದೇ ಟೆನಿಸ್ ಟೂರ್ನಿಯಲ್ಲಿ ಆಡುವಂತಿಲ್ಲ. ಈ ನಿರ್ಧಾರದ ವಿರುದ್ಧ ಕೊಕೊ ಗೌಫ್, ಅರಿನಾ ಸಬಲೆಂಕಾ ಮತ್ತು ಜೆಸ್ಸಿಕಾ ಪೆಗುಲಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಯಾನಿಕ್ ಸಿನ್ನರ್‌ಗೆ ನೀಡಲಾದ ಡೋಪಿಂಗ್ ಶಿಕ್ಷೆಯು ವಾಡಾ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2024ರ ಮಾರ್ಚ್​ನಲ್ಲಿ ನಡೆದಿದ್ದ ಡೋಪಿಂಗ್ ಟೆಸ್ಟ್​ ವೇಳೆ ಸಿನ್ನರ್ ಉದ್ದೀಪನ ಮದ್ದು ಪಡೆದಿರುವುದು ದೃಢಪಟ್ಟಿತ್ತು. ಪರೀಕ್ಷೆಯ ಅವಧಿಯಲ್ಲಿ ಸಿನ್ನರ್ ದೇಹದಲ್ಲಿ ವಾಡಾ ನಿಷೇಧಿತ ವಸ್ತು ‘ಕ್ಲೋಸ್ಟೆಬೋಲ್’ ಪತ್ತೆಯಾಗಿತ್ತು. ಇದು ಉದ್ದೇಶಪೂರ್ವಕವಲ್ಲ ಎಂದು ಹೇಳಿದ್ದ ಸಿನ್ನರ್​​ಗೆ ಎರಡು ವರ್ಷಗಳ ಕಾಲ ನಿಷೇಧದ ಅವಧಿಯನ್ನು ಪ್ರಕಟಿಸಲಾಗಿತ್ತು. ಆದರೆ ಸಿನ್ನರ್​ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಶಿಕ್ಷೆಯನ್ನು ಮೂರು ತಿಂಗಳಿಗೆ ಇಳಿಸಲಾಯಿತು.

ಕೊಕೊ ಗೌಫ್ ಹೇಳಿದ್ದೇನು?

ಕಳೆದ ವರ್ಷಕ್ಕೂ ಮೊದಲು ಇಗಾ ಸ್ವಿಯಾಟೆಕ್ ಅವರ ದೇಹದಲ್ಲಿ ಟ್ರೈಮೆಟಾಜಿಡಿನ್ ಕಂಡುಬಂದಿದ್ದ ಹಿನ್ನೆಲೆ ಅವರನ್ನು ಒಂದು ತಿಂಗಳ ಕಾಲ ನಿಷೇಧಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅಮೆರಿಕನ್ ಆಟಗಾರ್ತಿ ಕೊಕೊ ಗೌಫ್, ಯಾನಿಕ್ ಸಿನ್ನರ್ ಡೋಪಿಂಗ್ ಪ್ರಕರಣದ ಕುರಿತು ಹೆಚ್ಚು ಗಮನ ಹರಿಸಿಲ್ಲ. ಆದರೆ ತಾನು ತೆಗೆದುಕೊಳ್ಳುವ ಔಷಧಿಗಳ ಬಗ್ಗೆ ಎಚ್ಚರದಿಂದಿದ್ದೇನೆ ಎಂದು ಹೇಳಿದ್ದಾರೆ. ಅವರು ಕ್ರೀಡೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟೆನಿಸ್ ಮತ್ತು ಆಟಗಾರರ ಸುರಕ್ಷತೆಯನ್ನು ಒತ್ತಿ ಹೇಳಿದ್ದಾರೆ. ಕ್ರೀಡೆಯನ್ನು ರಕ್ಷಿಸಲು ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಒಬ್ಬ ಆಟಗಾರ್ತಿಯಾಗಿ ನಾನು ಆಶಿಸಬಹುದಾದದ್ದು ಅದನ್ನೇ ಎಂದು ಹೇಳಿದ್ದಾರೆ.

ಭಯಪಡುವಂತೆ ಮಾಡಿದೆ ಎಂದ ಅರಿನಾ ಸಬಲೆಂಕಾ

ಬೆಲರೂಸ್‌ನ ಅರಿನಾ ಸಬಲೆಂಕಾ ಅವರು ಯಾನಿಕ್ ಸಿನ್ನರ್ ಬಗ್ಗೆ ಯಾವುದೇ ನೇರ ಕಾಮೆಂಟ್‌ ಮಾಡದಿದ್ದರೂ ಈ ಎಲ್ಲಾ ಘಟನೆಗಳು ಆಟಗಾರರ ಮಾನಸಿಕತೆ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಇದು 'ವ್ಯವಸ್ಥೆ'ಯನ್ನು ನಂಬಲು ಭಯಪಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಇಂತಹ ವಿಚಾರಗಳಲ್ಲಿ ಜಾಗೃತರಾಗಿರಿ. ಯಾರನ್ನೂ ನಂಬುವ ಪರಿಸ್ಥಿತಿ ಇಲ್ಲ. ಈ ವ್ಯವಸ್ಥೆಯು ಭಯಪಡುವಂತೆ ಮಾಡಿದೆ. ವ್ಯವಸ್ಥೆಯನ್ನು ಹೇಗೆ ನಂಬಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಶ್ವ ನಂಬರ್​ 1 ಆಟಗಾರ್ತಿ ಹೇಳಿದ್ದಾರೆ.

ಜೆಸ್ಸಿಕಾ ಪೆಗುಲಾ ಆಕ್ರೋಶ

ಅಮೆರಿಕದ ಜೆಸ್ಸಿಕಾ ಪೆಗುಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ಈ ಪ್ರಕ್ರಿಯೆಯು ಅಸ್ಪಷ್ಟ ಮತ್ತು ಅಸಮಂಜಸ' ಎಂದು ಸೂಚಿಸಿದ್ದಾರೆ. ನೀವು ಶುದ್ಧರಾಗಿದ್ದರೂ ಅಥವಾ ಇಲ್ಲದಿದ್ದರೂ, ಪ್ರಕ್ರಿಯೆಯು ಸಂಪೂರ್ಣವಾಗಿ ಅಸ್ಪಷ್ಟ. ವಾಡಾ ವೃತ್ತಿಜೀವನ ಹಾಳುಮಾಡುವಷ್ಟು ಶಕ್ತಿ ಹೊಂದಿದೆ ಎಂದು ನನಗನಿಸುತ್ತದೆ. ಯಾವುದೇ ಆಟಗಾರರು ಈಗ ಈ ಪ್ರಕ್ರಿಯೆ ನಂಬುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಶೂನ್ಯ. ಇದು ಕ್ರೀಡೆಗೆ ಭಯಾನಕ ನೋಟವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತಮಗೆ ಇಷ್ಟ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿರುವಂತೆ ತೋರುತ್ತಿದೆ ಎಂದಿದ್ದಾರೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.