ಕನ್ನಡ ಸುದ್ದಿ  /  Sports  /  Wpl 2023 Down And Out Rcb Meets Up Warriorz In Must Win Clash

RCB vs UPW: ಇಂದು ಗೆದ್ದರಷ್ಟೇ ಆರ್​​ಸಿಬಿಗೆ ಉಳಿಗಾಲ.. ಸೋತರೆ ಟೂರ್ನಿಯಿಂದಲೇ ಹೊರಕ್ಕೆ.!

RCB VS UPW: ಇಂದು ಆರ್​ಸಿಬಿ ಪಾಲಿಗೆ ಡು ಆರ್​ ಡೈ ಪಂದ್ಯ. ಗೆದ್ದರಷ್ಟೇ ಪ್ರಶಸ್ತಿ ಗೆಲುವಿನ ಕನಸು ಜೀವಂತವಾಗಿರಲಿದೆ. ತನ್ನ 6ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ವಿರುದ್ದ ಸೆಣಸಾಟ ನಡೆಸಲಿರುವ ರೆಡ್​ ಆರ್ಮಿ ಆಟಗಾರ್ತಿಯರು, ಭಾರೀ ಸಿದ್ಧತೆ ನಡೆಸಿದ್ದಾರೆ. ಡಿ ವೈ ಪಾಟೀಲ್​ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ಸ್ಮೃತಿ ಮಂಧಾನ, ಅಲಿಸಾ ಹೀಲಿ
ಸ್ಮೃತಿ ಮಂಧಾನ, ಅಲಿಸಾ ಹೀಲಿ (Twitter)

ಬೆಂಗಳೂರಿಗರ ನೆಚ್ಚಿನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಹಿಳಾ ತಂಡ (Royal Challengers Bangalore Women) ಎದುರಿಸಿದ 5 ಪಂದ್ಯಗಳಲ್ಲೂ ಸೋಲೊಪ್ಪಿಕೊಂಡಿದೆ. ಆದರೀಗ 6ನೇ ಬಾರಿಗೆ ಯುಪಿ ವಾರಿಯರ್ಸ್ (UP Warriorz)​​​​ ವಿರುದ್ಧ ಮೈದಾನಕ್ಕಿಳಿಯಲಿದೆ. ಈ ಬಾರಿ ಸ್ಮೃತಿ ಮಂಧಾನ ನಾಯಕತ್ವದ ಪಡೆ ಗೆಲುವುದು ಖಚಿತ ಎಂಬುದು ಅಭಿಮಾನಗಳ ನಿರೀಕ್ಷೆ ಹುಟ್ಟಿಸಿದೆ.

ಆರ್​ಸಿಬಿ ಕನ್ನಡಿಗರ ನೆಚ್ಚಿನ ತಂಡ. ಅದಕ್ಕೆ ದೂಸ್ರಾ ಮಾತೇ ಇಲ್ಲ. ರೆಡ್​ ಆರ್ಮಿ ಪುರುಷರ ತಂಡವೂ ಹೀಗೆಯೇ ಹೀನಾಯ ಸೋಲು ಕಾಣುತ್ತಾ ಬಂದಿದೆ. ಆದರೂ ಅಭಿಮಾನಿಗಳು ಎಂದೂ ಕೈಬಿಟ್ಟವರಲ್ಲ. ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಆದರೆ ಈ ವರ್ಷದಿಂದ ಮಹಿಳಾ ಆರ್​ಸಿಬಿ​ ಮೈದಾನಕ್ಕಿಳಿದರೂ ಎದುರಿಸಿದ 5 ಪಂದ್ಯದಲ್ಲಿ ಎಡವಿದ್ದಾರೆ. 6ನೇ ಪಂದ್ಯ ಇಂದು ಜರುಗಲಿದ್ದು, ಯುಪಿ ವಾರಿಯರ್ಸ್​ ವಿರುದ್ಧ ಹೋರಾಡಲಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಇಂದು ಗೆಲುವು ಬಹುತೇಕ ಸಾಧ್ಯ.

ಯುಪಿಗೂ ಗೆಲುವಿನ ಅನಿವಾರ್ಯ.!

ಯುಪಿ ವಾರಿಯರ್ಸ್​​​ ತಂಡವು ಎದುರಿಸಿದ 4 ಪಂದ್ಯದಲ್ಲಿ 2ರಲ್ಲಿ ಸೋಲು, 2ರಲ್ಲಿ ಗೆಲುವು ದಾಖಲಿಸಿದೆ. ಹಾಗಾಗಿ ಇಂದು ಆರ್​ಸಿಬಿಯ ಜೊತೆಗೆ ತನ್ನ 5ನೇ ಪಂದ್ಯ ಎದುರಿಸಲಿದೆ. ಆದರೆ ಯುಪಿ ತಂಡ ಇಂದು ಆರ್​ಸಿಬಿ ಎದುರು ಬಹುತೇಕ ನೆಲಕಚ್ಚಲಿದೆ. ಯಾಕಂದರೆ ಆರ್​​ಸಿಬಿ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಕಳೆದ ಪಂದ್ಯದಲ್ಲಿ ಸೋತರೂ ತಂಡ ನೀಡಿದ ಪ್ರದರ್ಶನವೇ ಸಾಕ್ಷಿ. ಪ್ಲೇ ಆಫ್​ ಟಿಕೆಟ್​ ಕನ್ಫರ್ಮ್​ ಮಾಡಿಕೊಳ್ಳಲು ಅಲಿಸಾ ಹೀಲಿ ತಂಡಕ್ಕೂ ಗೆಲುವು ಅನಿವಾರ್ಯ.

ಪ್ಲೇ ಆಫ್​ ದೃಷ್ಟಿಯಿಂದ ಉಭಯ ತಂಡಗಳಿಗೂ ಗೆಲುವು ಅನಿವಾರ್ಯ. ಬೆಂಗಳೂರು ತಂಡ ಆಡಿದ 5ರಲ್ಲೂ ಸೋತು ಸುಣ್ಣವಾಗಿದೆ. ಹೀಗಾಗಿ ಉಳಿದ 3 ಪಂದ್ಯಗಳಲ್ಲೂ ಗೆದ್ದು ಪ್ಲೇ ಆಫ್​ ಕನಸನ್ನು ಜೀವಂತ ಮಾಡಿಕೊಳ್ಳಬೇಕಿದೆ. ರೆಡ್​ ಆರ್ಮಿ ಗೆದ್ದ ತಕ್ಷಣ ಪ್ಲೇಆಫ್​ಗೆ ಪ್ರವೇಶ ನೀಡುವುದಿಲ್ಲ. ಇದರ ಜೊತೆಗೆ ಯುಪಿ ವಾರಿಯರ್ಸ್​ ತಂಡವು, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಸೋಲಬೇಕು. ಇದರ ಜೊತೆಗೆ ಗುಜರಾತ್ ಜೈಂಟ್ಸ್ ತಂಡವು ಕನಿಷ್ಠ 2 ಸೋಲು ಕಾಣಬೇಕು. ಆಗ ಮಾತ್ರ RCB ನೆಟ್​ ರನ್​ ರೇಟ್ ಆಧಾರದಲ್ಲಿ​ ಎಲಿಮಿನೇಟರ್​​ಗೆ ಎಂಟ್ರಿ ನೀಡಲು ಸಾಧ್ಯ.

ಸೋತರೆ ಲೀಗ್​ನಿಂದ ಹೊರಕ್ಕೆ

ಇಂದು ಯುಪಿ ವಾರಿಯರ್ಸ್​ ವಿರುದ್ಧ ಸೆಣದಾಟ ನಡೆಸುವ ಆರ್​ಸಿಬಿ, ಒಂದು ವೇಳೆ ಸೋತರೆ ಟೂರ್ನಿಯಿಂದಲೇ ಹೊರ ಬೀಳಲಿದೆ. ಆ ಮೂಲಕ ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಹೊರ ಬೀಳುವ ಮೊದಲ ತಂಡ ಎನಿಸಲಿದೆ. ಹಾಗಾಗಿ ತುಂಬಾ ಕೇರ್​ಫುಲ್​ ಆಗಿ ಆಡಬೇಕು.

ಸ್ಮೃತಿ, ರೇಣುಕಾ ಮಿಂಚಬೇಕು.!

ಸತತ 5 ಸೋಲುಗಳು ಅಭಿಮಾನಿಗಳಿಗೆ ನುಂಗಲಾರದಂತಾಗಿದೆ. ಇದೀಗ 6ನೇ ಪಂದ್ಯದಲ್ಲಾದರೂ ಸ್ಮೃತಿ ಮಂಧಾನ ಮೇಲೆ ನಿರೀಕ್ಷೆ ಮತ್ತು ಒತ್ತಡ ಹೆಚ್ಚಿಸಿದೆ. ಅಷ್ಟೇ ಅಲ್ಲ, ರೇಣುಕಾ ಸಿಂಗ್​ ಕೂಡ ಒಂದು ಪಂದ್ಯದಲ್ಲೂ ಬೌಲಿಂಗ್​​ನಲ್ಲಿ ಧಮಾಕ ತೋರಿಸಲಿಲ್ಲ.ಇಬ್ಬರೂ ಸಹ ಬ್ಯಾಟಿಂಗ್​​ - ಬೌಲಿಂಗ್​ನಲ್ಲಿ ಗೆಲುವಿನ ಪ್ರದರ್ಶನ ನೀಡಲೇ ಇಲ್ಲ. ಇದು ಟೀಮ್​ ಮ್ಯಾನೇಜ್​ಮೆಂಟ್​ಗೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ಎಲಿಸ್​ ಪೆರ್ರಿಯೊಬ್ಬರೇ ತಂಡದ ಆಧಾರ ಸ್ಥಂಭವಾಗಿದ್ದಾರೆ. ಸೋಫಿ ಡಿವೈನ್​ ಕೆಲಹೊತ್ತು ಅಬ್ಬರಿಸಿ ಸುಮ್ಮನಾಗುತ್ತಾರೆ. ಹೀದರ್​ ನೈಟ್​, ರಿಚಾ ಘೋಷ್​​ ಬ್ಯಾಟಿಂಗ್​​ನಲ್ಲಿ ಬಲ ತುಂಬಬೇಕಿದೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡಿದರಷ್ಟೇ ಅಮೋಘ ಗೆಲುವು ಸಾಧಿಸಲು ಸಾಧ್ಯ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಕನಿಕಾ ಅಹುಜಾ, ಹೀದರ್ ನೈಟ್, ಶ್ರೇಯಾಂಕಾ ಪಾಟೀಲ್, ಎರಿನ್ ಬರ್ನ್ಸ್, ಕೋಮಲ್ ಝಂಝಾದ್, ರೇಣುಕಾ ಠಾಕೂರ್ ಸಿಂಗ್, ಸಹನಾ ಪವಾರ್, ಪೂನಮ್ ಖೇಮ್ನಾರ್, ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಇಂದ್ರಾಣಿ ರಾಯ್, ಆಶಾ ಶೋಭನಾ.