ಕನ್ನಡ ಸುದ್ದಿ  /  Sports  /  Wpl 2023 Eliminator Sciver Brunts 72 Helps Mumbai Indians Post 182 In 20 Overs Vs Up Warriorz

MI vs UPW Eliminator: ಸೀವರ್​ ಅಬ್ಬರ, ಮುಂಬೈ ಬೃಹತ್​ ಮೊತ್ತ; ಯುಪಿ ಗೆಲುವಿಗೆ ಬೇಕು 183 ರನ್​​​

MI vs UPW Eliminator: ಎಲಿಮಿನೇಟರ್ ಪಂದ್ಯದಲ್ಲಿ ನಟಾಲಿ ಸೀವರ್​​​​​​ ಅಬ್ಬರದ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್​ 182 ರನ್​​ಗಳ ಬೃಹತ್​​​ ಮೊತ್ತ ಹಾಕಿದೆ. ಈ 183 ರನ್​ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್​ ಮಾಡಿದರೆ, ಯುಪಿ ಫೈನಲ್​ ಟಿಕೆಟ್​ಗೆ ಅಧಿಕೃತ ಮುದ್ರ ಒತ್ತಲಿದೆ.

ನಟಾಲಿ ಸೀವರ್​
ನಟಾಲಿ ಸೀವರ್​ (WPL/Twitter)

ಫೈನಲ್​ ಟಿಕೆಟ್​​ಗಾಗಿ ಸೆಣಸಾಟ ನಡೆಸುತ್ತಿರುವ ಯುಪಿ ವಾರಿಯರ್ಸ್​ ಮತ್ತು ಮುಂಬೈ ಇಂಡಿಯನ್ಸ್​​​, ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿವೆ. ನಟಾಲಿ ಸೀವರ್​​​​​​ ಅಬ್ಬರದ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್​ 182 ರನ್​​ಗಳ ಬೃಹತ್​​​ ಮೊತ್ತ ಹಾಕಿದೆ. ಈ 183 ರನ್​ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್​ ಮಾಡಿದರೆ, ಯುಪಿ ಫೈನಲ್​ ಟಿಕೆಟ್​ಗೆ ಅಧಿಕೃತ ಮುದ್ರ ಒತ್ತಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್, ಭರ್ಜರಿ ಆರಂಭ ಪಡೆಯಿತು. ಮುಂಬೈ ಪರ ಆರಂಭಿಕರಾಗಿ ಹೀಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಯಾಸ್ತಿಕಾ ಹೊಡಿಬಡಿ ಆಟವಾಡಿದರು. ಆದರೆ ತಂಡದ ರನ್​ ಗತಿ ಏರಿಸುತ್ತಿದ್ದ ಯಾಸ್ತಿಕಾ, 4 ಬೌಂಡರಿಗಳ ನೆರವಿನಿಂದ 21 ರನ್​ ಚಚ್ಚಿ, ಅಂಜಲಿ ಸರ್ವಾಣಿ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದರು.

ಅರ್ಧಶತಕ ಸಿಡಿಸಿದ ನಟಾಲಿ!

ಬಳಿಕ ಪಂದ್ಯದ ಆರಂಭದಿಂದಲೂ ತಾಳ್ಮೆಯ ಆಟವಾಡಿದ ಹೀಲಿ ಮ್ಯಾಥ್ಯೂಸ್​, ನಟಾಲಿ ಸೀವರ್​ ಜೊತೆಗೂಡಿ ನಿಧಾನವಾಗಿ ರನ್​ ತೇರು ಎಳೆಯುತ್ತಿದ್ದರು. 2 ಬೌಂಡರಿ, 1 ಸಿಕ್ಸರ್​ ಸಿಡಿಸಿದ ಹೀಲಿ, 26 ಎಸೆತಗಳಿಗೆ 26 ರನ್​ ಸಿಡಿಸಿ ಪಾರ್ಶ್ವಿ ಚೋಪ್ರಾ ಅವರ ಬೌಲಿಂಗ್​​ನಲ್ಲಿ ಔಟಾದರು. ಬಳಿಕ ನಟಾಲಿ ಸೀವರ್​​ ರೌದ್ರಾವತಾರ ತಾಳಿದರು. ನಾಯಕಿ ಹರ್ಮನ್​ ಪ್ರೀತ್​ ಕೌರ್​​​ ಅವರೊಂದಿಗೆ ಸೇರಿ ಅದ್ಭುತ ಜೊತೆಯಾಟವಾಡಿದರು.

ಯುಪಿ ಬೌಲರ್​​ಗಳ ಚಳಿ ಬಿಡಿಸಿದ ನಟಾಲಿ, ಮಹತ್ವದ ಪಂದ್ಯದಲ್ಲಿ ಸಖತ್​ ಇನ್ನಿಂಗ್ಸ್​ ಕಟ್ಟಿದರು. ಇದರ ನಡುವೆ ಹರ್ಮನ್​ ಪ್ರೀತ್​ 14 ರನ್​ಗಳಿಗೆ ಆಟ ಮುಗಿಸಿದರು. ಸೋಫಿ ಎಕ್ಲೆಸ್ಟನ್ ಬೌಲಿಂಗ್​ನಲ್ಲಿ ಕ್ಕೀನ್​ ಬೌಲ್ಡ್​ ಆದರು. ವಿಕೆಟ್​ ಪತನದ ನಡುವೆಯೂ ಅಬ್ಬರಿಸಿದ ನಟಾಲಿ ಸೀವರ್, ಅರ್ಧಶತಕ ಸಿಡಿಸಿ ಮಿಂಚಿದರು. ತಾಳ್ಮೆಯುತ ಬ್ಯಾಟಿಂಗ್​ ನಡೆಸುತ್ತಲೇ 50 ರ ಗಡಿ ದಾಟಿದರು.

ಹಾಫ್​ ಸೆಂಚುರಿ ಬಳಿಕವೂ ಅಬ್ಬರ ಮುಂದುವರೆಸಿದ ನಟಾಲಿ, ಎದುರಾಳಿ ಬೌಲರ್​​ಗಳಿಗೆ ಹಿಗ್ಗಾಮುಗ್ಗಾ ದಂಡಿಸಿದರು. ಜೊತೆಗೆ ಪಾಲುದಾರಿಕೆ ನೀಡಿದ ಅಮೆಲಿಯಾ ಕೇರ್​ ಆರ್ಭಟ ನಡೆಸಿದರು. ಕೊನೆಯ ಹಂತದಲ್ಲಿ ಬೌಂಡರಿಗಳ ಸುರಿಮಳೆಗೈದರು. ಈ ಜೋಡಿ 5ನೇ ವಿಕೆಟ್​ಗೆ 60 ರನ್​​ಗಳ ಜೊತೆಯಾಟವನ್ನೂ ಕಟ್ಟಿತು. ಆದರೆ 20 ನೇ ಓವರ್​​​​ನಲ್ಲಿ 29 ರನ್​ಗಳಿಸಿದ್ದ ಕೇರ್​, ನಿರ್ಗಮಿಸಿದರು.

ಇನ್ನು 20ನೇ ಓವರ್​ನಲ್ಲಿ ಪೂಜಾ ವಸ್ತ್ರಾಕರ್​​​​ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಎದುರಿಸಿದ ಎರಡೂ ಎಸೆತಗಳಲ್ಲಿ ಬೌಂಡರಿ-ಸಿಕ್ಸರ್​ ಸಿಡಿಸಿ ಗಮನ ಸೆಳೆದರು. ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿದ ನಟಾಲಿ ಸೀವರ್​ ಅಜೇಯರಾಗಿ ಉಳಿದರು. 38 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ ಅಜೇಯ 78 ರನ್​ ಗಳಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್​ 20 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 182 ರನ್​ಗಳಿಸಿದೆ. ಯುಪಿ ಪರ ಸೋಫಿ ಎಕ್ಲಸ್ಟನ್​​​ 2 ವಿಕೆಟ್​, ಪಾರ್ಶ್ವಿ ಚೋಪ್ರಾ, ಅಂಜಲಿ ಸರ್ವಾಣಿ ತಲಾ 1 ವಿಕೆಟ್​ ಪಡೆದರು.

ಯುಪಿ ವಾರಿಯರ್ಸ್ ಪ್ಲೇಯಿಂಗ್​ ಇಲೆವೆನ್​

ಅಲಿಸ್ಸಾ ಹೀಲಿ, ಕಿರಣ್ ಪ್ರಭು ನವಗಿರೆ, ತಹಿಲಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಶ್ವೇತಾ ಶೆರಾವತ್, ಪಾರ್ಶ್ವಿ ಚೋಪ್ರಾ, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ ಇಲೆವೆನ್​

ಹೀಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಅಮೆಲಿಯಾ ಕೆರ್, ಪೂಜಾ ವಸ್ತಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ,ಜಿಂತಿಮಣಿ ಕಲಿತಾ, ಸೈಕಾ ಇಸಾಕ್