ಕನ್ನಡ ಸುದ್ದಿ  /  Sports  /  Wpl 2023 Live Streaming Rcb Vs Mi And Upw Vs Dc Cricket Match

WPL 2023: ಎರಡು ಪಂದ್ಯಗಳೊಂದಿಗೆ ಲೀಗ್ ಹಂತಕ್ಕೆ ಇಂದು ತೆರೆ; ಅಗ್ರಸ್ಥಾನದ ಮೇಲೆ ಡೆಲ್ಲಿ-ಮುಂಬೈ ಕಣ್ಣು; ಆರ್‌ಸಿಬಿ ಆಟಕ್ಕುಂಟು ಲೆಕ್ಕಕ್ಕಿಲ್ಲ

ದಿನದ ಮೊದಲನೇ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯವು ಸಂಜೆ 6.30ಕ್ಕೆ ಆರಂಭವಾಗಲಿದೆ.

ಡೆಲ್ಲಿ ಹಾಗೂ ಯಪಿ ಕಾದಾಟ
ಡೆಲ್ಲಿ ಹಾಗೂ ಯಪಿ ಕಾದಾಟ

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಲೀಗ್‌ ಹಂತದ ಕೊನೆಯ ಪಂದ್ಯಗಳು ಇಂದು ನಡೆಯಲಿದೆ. ಅಂತಿಮ ದಿನ ಎರಡು ಪಂದ್ಯಗಳು ನಡೆಯಲಿದ್ದು. ದಿನದ ಎರಡನೇ ಪಂದ್ಯದ ಮೂಲಕ ಲೀಗ್‌ ಹಂತದ ಪಂದ್ಯಗಳು ಮುಕ್ತಾಯವಾಗಲಿದೆ. ದಿನದ ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲೊಡ್ಡಲಿದೆ.

ಇಂದಿನ ಪಂದ್ಯವು ಡೆಲ್ಲಿ ಮತ್ತು ಮುಂಬೈ ತಂಡಗಳಿಗೆ ಪ್ಲೇ ಆಫ್‌ ನಿಟ್ಟಿನಲ್ಲಿ ಮುಖ್ಯವಾಗಿದೆ. ಇಂದಿನ ಪಂದ್ಯದಲ್ಲಿ ತಮ್ಮ ತಮ್ಮ ಎದುರಾಳಿಗಳೊಂದಿಗೆ ಪ್ರಬಲ ಗೆಲುವು ಸಾಧಿಸುವ ತಂಡವು ಅಂಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಲಿದೆ. ಆ ಮೂಲಕ ನೇರವಾಗಿ ಫೈನಲ್‌ ಪ್ರವೇಶಿಲಿದೆ. ಸದ್ಯ ಉಭಯ ತಂಡಗಳು ತಲಾ 10 ಅಂಕಗಳನ್ನು ಪಡೆದಿವೆ. ರನ್‌ ರೇಟ್‌ ಲೆಕ್ಕಾಚಾರದಲ್ಲಿ ಡೆಲ್ಲಿ ತಂಡವು ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯವನ್ನು ಗೆಲ್ಲುವ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಲಿದೆ. ಮತ್ತೆ ಎರಡೂ ತಂಡಗಳು ತಮ್ಮ ತಮ್ಮ ಪಾಲಿನ ಪಂದ್ಯಗಳನ್ನು ಗೆದ್ದರೆ, ಮತ್ತೆ ರನ್‌ ರೇಟ್‌ ಲೆಕ್ಕಾಚಾರದ ಮೇಲೆ ಅಗ್ರಸ್ಥಾನಿ ಯಾರೆಂಬುದು ತಿಳಿಯಲಿದೆ. ಅದರ ಆಧಾರದ ಮೇಲೆ ಒಂದು ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಮತೊಂದು ತಂಡವು ಅಂಕಪಟ್ಟಿಯ ಮೂರನೇ ಸ್ಥಾನಿ ಯುಪಿ ವಾರಿಯರ್ಸ್‌ ವಿರುದ್ಧ ಎಲಿಮನೇಟರ್‌ ಕದನದಲ್ಲಿ ಮುಖಾಮುಖಿಯಾಗಲಿದೆ.

ಆರ್‌ಸಿಬಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯ

ಇಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋತಿರುವ ಮುಂಬೈ, ಅಗ್ರಸ್ಥಾನವನ್ನು ಕಳೆದುಕೊಂಡಿತು. ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆರ್‌ಸಿಬಿ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶ ಆರ್‌ಸಿಬಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಿಲ್ಲ. ಆರಂಭದ ಐದು ಪಂದ್ಯಗಳನ್ನು ಹೀನಾಯವಾಗಿ ಸೋತ ಬಳಿಕ, ಕೊನೆಯ ಎರಡು ಪಂದ್ಯಗಳನ್ನು ತಂಡವು ಭರ್ಜರಿಯಾಗಿ ಗೆದ್ದಿದೆ. ಹೀಗಾಗಿ ಕೊನೆಯ ಪಂದ್ಯವನ್ನು ಕೂಡಾ ಗೆದ್ದು, ಸರಣಿಗೆ ಗೆಲುವಿನ ವಿದಾಯ ಹೇಳಲು ಆಟಗಾರ್ತಿಯರು ಎದುರು ನೋಡುತ್ತಿದ್ದಾರೆ.

ದಿನದ ಮೊದಲನೇ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯವು ಸಂಜೆ 6.30ಕ್ಕೆ ಆರಂಭವಾಗಲಿದೆ.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ: ಸೋಫಿ ಡಿವೈನ್, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್‌ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್‌

ಮುಂಬೈ ಸಂಭಾವ್ಯ ಆಡುವ ಬಳಗ : ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ನ್ಯಾಟ್ ಸ್ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಯುಪಿ ಸಂಭಾವ್ಯ ಆಡುವ ಬಳಗ: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಡೆಲ್ಲಿ ಸಂಭಾವ್ಯ ಆಡುವ ಬಳಗ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಾಪ್, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ಜೆಸ್ ಜೊನಾಸ್ಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್/ತಾರಾ ನಾರ್ರಿಸ್