ಕನ್ನಡ ಸುದ್ದಿ  /  Sports  /  Wpl 2023 Live Streaming When And Where To Watch On Television And Online Live

WPL 2023 live streaming: ವಿಮೆನ್ಸ್ ಪ್ರೀಮಿಯರ್ ಲೀಗ್‌ಗೆ ಕ್ಷಣಗಣನೆ; ಇಲ್ಲಿದೆ ನೇರಪ್ರಸಾರದ ವಿವರ

ಉದ್ಘಾಟನಾ ಕಾರ್ಯಕ್ರಮವು ಶನಿವಾರ ಸಂಜೆ 4.30ಕ್ಕೆ ಪ್ರಾರಂಭವಾಗಲಿದೆ. ಆ ಬಳಿಕ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಟಾಸ್ 7.00 ಗಂಟೆಗೆ ನಡೆಯಲಿದೆ.

ಶನಿವಾರದಿಂದ ವಿಮೆನ್ಸ್ ಪ್ರೀಮಿಯರ್ ಲೀಗ್‌ ಆರಂಭ
ಶನಿವಾರದಿಂದ ವಿಮೆನ್ಸ್ ಪ್ರೀಮಿಯರ್ ಲೀಗ್‌ ಆರಂಭ

ಚೊಚ್ಚಲ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (Women's Premier League) ಸೀಸನ್‌ಗೆ ಕ್ಷಣಗಣನೆ ಆರಂಭವಾಗಿದೆ. ಭಾರತ ಸೇರಿದಂತೆ ಜಾಗತಿಕ ಮಹಿಳಾ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ವನಿತೆಯರ ಕ್ರಿಕೆಟ್‌ ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ(ಶನಿವಾರ) ಸಂಜೆ ಮುಂಬೈನಲ್ಲಿ ಡಬ್ಲ್ಯೂಪಿಲ್‌ ಚೊಚ್ಚಲ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯ ಕೂಡಾ ನಾಳೆಯೇ ನಡೆಯಲಿದೆ.

ಉದ್ಘಾಟನಾ ಸಮಾರಂಭವು ಮುಂಬೈನ ಡಾ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಬಾಲಿವುಡ್ ತಾರೆಗಳಾದ ಕೃತಿ ಸನೋನ್ ಮತ್ತು ಕಿಯಾರಾ ಅಡ್ವಾಣಿ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಅವರಲ್ಲದೆ ಖ್ಯಾತ ಗಾಯಕರು ಕಾರ್ಯಕ್ರಮದ ಅದ್ಧೂರಿತನಕ್ಕೆ ಸಾಕ್ಷಿಯಾಗಲಿದ್ದಾರೆ.

ಉದ್ಘಾಟನಾ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳ ನಡುವೆ 22 ಪಂದ್ಯಗಳು ನಡೆಯಲಿವೆ. ಲೀಗ್ ಹಂತ ಮುಗಿದ ನಂತರ, ಒಂದು ಎಲಿಮಿನೇಟರ್ ನಡೆಯಲಿದೆ. ಬಳಿಕ ಮಾರ್ಚ್‌ 26ರಂದು ಫೈನಲ್ ಪಂದ್ಯ ನಡೆಯಲಿದೆ. ಗುಂಪು ಹಂತದ ಬಳಿಕ, ಅಂಕಪಟ್ಟಿಯಲ್ಲಿರುವ ಅಗ್ರ ಮೂರು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲ್‌ನಲ್ಲಿ ಪ್ರವೇಶಿಸಿದರೆ, ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಚೊಚ್ಚಲ ಸೀಸನ್‌ನ ಎಲ್ಲಾ ಪಂದ್ಯಗಳು ವಾಣಿಜ್ಯ ನಗರಿ ಮುಂಬೈನಲ್ಲಿ ಮಾತ್ರ ನಡೆಯುತ್ತಿವೆ. ಪಂದ್ಯಗಳು ಬ್ರಬೋರ್ನ್ ಸ್ಟೇಡಿಯಂ ಮತ್ತು ಡಾ.ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಲಿದೆ.

ನೇರಪ್ರಸಾರ ಯಾವುದರಲ್ಲಿ?

ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ನ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಮೊಬೈಲ್‌ ಮೂಲಕ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ (Jio Cinema) ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಉದ್ಘಾಟನಾ ಸಮಾರಂಭವು ನಾಳೆ ಸಂಜೆ 4.30ಕ್ಕೆ ಪ್ರಾರಂಭವಾಗಲಿದೆ. ಆ ಬಳಿಕ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಟಾಸ್ 7.00 ಗಂಟೆಗೆ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಕೌರ್‌ ನಾಯಕತ್ವದ ಮುಂಬೈ ಇಂಡಿಯನ್ಸ್‌ ಹಾಗೂ ಬೆತ್‌ ಮೂನಿ ನಾಯಕತ್ವದ ಗುಜರಾತ್‌ ಜೈಂಟ್ಸ್‌ ಕಣಕ್ಕಿಳಿಯಲಿದೆ. ಉಭಯ ತಂಡಗಳಲ್ಲಿ ಬಲಿಷ್ಠ ಹಾಗೂ ಅನುಭವಿ ಆಟಗಾರ್ತಿಯರಿದ್ದಾರೆ. ಚೊಚ್ಚಲ ಪಂದ್ಯವಾಗಿರುವುದರಿಂದ ಪಂದ್ಯವು ಕುತೂಹಲಕಾರಿಯಾಗಿ ಸಾಗುವ ನಿರೀಕ್ಷೆಯಿದೆ.

ಮುಂಬೈ ಇಂಡಿಯನ್ಸ್‌ ಸಂಭಾವ್ಯ ಆಡುವ ಬಳಗ

ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್‌), ಹೇಲಿ ಮ್ಯಾಥ್ಯೂಸ್, ಧಾರಾ ಗುಜ್ಜರ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಜಿಂತಿಮಣಿ ಕಲಿತಾ, ಇಸ್ಸಿ ವಾಂಗ್, ಸೋನಮ್ ಯಾದವ್/ಸೈಕಾ ಇಶಾಕ್

ಬೆಂಚ್: ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ನೀಲಂ ಬಿಶ್ತ್

ಗುಜರಾತ್‌ ಜೈಂಟ್ಸ್‌ ಸಂಭಾವ್ಯ ಆಡುವ ಬಳಗ

ಬೆತ್ ಮೂನಿ (ನಾಯಕಿ ಹಾಗೂ ವಿಕೆಟ್‌ ಕೀಪರ್), ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಆಶ್ ಗಾರ್ಡ್ನರ್, ಡಿ ಹೇಮಲತಾ, ಡಿಯಾಂಡ್ರಾ ಡಾಟಿನ್, ಅನ್ನಾಬೆಲ್ ಸದರ್ಲ್ಯಾಂಡ್, ಸ್ನೇಹ ರಾಣಾ, ಹರ್ಲಿ ಗಾಲಾ/ಅಶ್ವನಿ ಕುಮಾರಿ, ಮಾನ್ಸಿ ಜೋಶಿ/ಮೋನಿಕಾ ಪಟೇಲ್, ತನುಜಾ ಕನ್ವರ್

ಬೆಂಚ್: ಸೋಫಿಯಾ ಡಂಕ್ಲಿ, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ, ಪರುನಿಕಾ ಸಿಸೋಡಿಯಾ, ಶಬ್ನಮ್ ಶಕಿಲ್

ವಿಭಾಗ