ಕನ್ನಡ ಸುದ್ದಿ  /  Sports  /  Wpl 2023 Schedule Bcci Announces Schedule For Womens Premier League 2023

WPL 2023 schedule: ವಿಮೆನ್ಸ್ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ ಹೀಗಿದೆ; ಆರ್‌ಸಿಬಿ ಪಂದ್ಯಗಳು ಯಾವಾಗ?

ಮಾರ್ಚ್ 5ರಂದು (ಭಾನುವಾರ) ಅಭಿಮಾನಿಗಳಿಗೆ ಡಬಲ್ ಮನರಂಜನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ರಬೋರ್ನ್ ಸ್ಟೇಡಿಯಂನಲ್ಲಿ ಎದುರಿಸಲಿದೆ.

ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಚಾರ್ಲೆಟ್ ಎಡ್ವರ್ಡ್ಸ್ ಮತ್ತು ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಜೂಲನ್ ಗೋಸ್ವಾಮಿ ಅವರೊಂದಿಗೆ ನೀತಾ ಅಂಬಾನಿ
ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಚಾರ್ಲೆಟ್ ಎಡ್ವರ್ಡ್ಸ್ ಮತ್ತು ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಜೂಲನ್ ಗೋಸ್ವಾಮಿ ಅವರೊಂದಿಗೆ ನೀತಾ ಅಂಬಾನಿ (ANI )

ಮುಂಬೈನಲ್ಲಿ ವಿಮೆನ್ಸ್‌ ಪ್ರೀಮಿಯರ್ ಲೀಗ್‌(Women's Premier League 2023)ನ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ಲೀಗ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳು ಕಪ್‌ಗಾಗಿ ಹೋರಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಒಟ್ಟು 87 ಆಟಗಾರ್ತಿಯರನ್ನು ಖರೀದಿಸಿದ್ದು, ಅವರಲ್ಲಿ 30 ವಿದೇಶಿ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಡಬ್ಲ್ಯೂಪಿಎಲ್‌ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು ಎರಡು ಪ್ಲೇಆಫ್ ಪಂದ್ಯಗಳು ಇರಲಿವೆ. ಒಟ್ಟು 23 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಭಾರತದ ಚೊಚ್ಚಲ ವನಿತೆಯರ ಟಿ20 ಲೀಗ್ ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ.

ಮಾರ್ಚ್ 5ರಂದು (ಭಾನುವಾರ) ಅಭಿಮಾನಿಗಳಿಗೆ ಡಬಲ್ ಮನರಂಜನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ರಬೋರ್ನ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಇದೇ ದಿನದ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ತಮ್ಮ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆಡಲಿದೆ.

ಮೊದಲ ಪಂದ್ಯವು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ ನಡೆಯಲಿರುವ ಎಲ್ಲಾ ಪಂದ್ಯಗಳು 7:30ಕ್ಕೆ ಪ್ರಾರಂಭವಾಗಲಿವೆ. ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ ತಲಾ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಮಾರ್ಚ್ 21ರಂದು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಯುಪಿ ವಾರಿಯರ್ಜ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದ ಅಂತಿಮ ಪಂದ್ಯವನ್ನು ಆಡಲಿವೆ. ಎಲಿಮಿನೇಟರ್ ಪಂದ್ಯವು ಮಾರ್ಚ್ 24ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಚೊಚ್ಚಲ ವಿಮೆನ್ಸ್‌ ಪ್ರೀಮಿಯರ್ ಲೀಗ್‌ನ ಫೈನಲ್‌ ಪಂದ್ಯವು ಮಾರ್ಚ್ 26ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಂಪೂರ್ಣ ವೇಳಾಪಟ್ಟಿ

  • ಮಾರ್ಚ್ 4, ಸಂಜೆ 7:30 : ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ - ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 5, ಮಧ್ಯಾಹ್ನ 3:30: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ -ಬ್ರಬೋರ್ನ್ ಸ್ಟೇಡಿಯಂ
  • ಮಾರ್ಚ್ 5, ಸಂಜೆ 7:30: ಯುಪಿ ವಾರಿಯರ್ಜ್ vs ಗುಜರಾತ್ ಜೈಂಟ್ಸ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 6, ಸಂಜೆ 7:30: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಬ್ರಬೋರ್ನ್
  • ಮಾರ್ಚ್ 7, ಸಂಜೆ 7:30: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಜ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 8, ಸಂಜೆ 7:30; ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಬ್ರಬೋರ್ನ್
  • ಮಾರ್ಚ್ 9, ಸಂಜೆ 7:30; ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 10, ಸಂಜೆ 7:30; ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಜ್ -ಬ್ರಬೋರ್ನ್
  • ಮಾರ್ಚ್ 11, ಸಂಜೆ 7:30; ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 12, ಸಂಜೆ 7:30; ಯುಪಿ ವಾರಿಯರ್ಜ್ vs ಮುಂಬೈ ಇಂಡಿಯನ್ಸ್ -ಬ್ರಬೋರ್ನ್
  • ಮಾರ್ಚ್ 13, ಸಂಜೆ 7:30; ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 14, ಸಂಜೆ 7:30; ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ -ಬ್ರಬೋರ್ನ್
  • ಮಾರ್ಚ್ 15, ಸಂಜೆ 7:30; ಯುಪಿ ವಾರಿಯರ್ಜ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 16, ಸಂಜೆ 7:30; ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ -ಬ್ರಬೋರ್ನ್
  • ಮಾರ್ಚ್ 18, ಮಧ್ಯಾಹ್ನ 3:30; ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಜ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 18, ಸಂಜೆ 7:30; ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ -ಬ್ರಬೋರ್ನ್
  • ಮಾರ್ಚ್ 20, ಸಂಜೆ 3:30; ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಜ್ -ಬ್ರಬೋರ್ನ್
  • ಮಾರ್ಚ್ 20, ಸಂಜೆ 7:30; ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 21, ಮಧ್ಯಾಹ್ನ 3:30; ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 21, ಸಂಜೆ 7:30; ಯುಪಿ ವಾರಿಯರ್ಜ್ vs ಡೆಲ್ಲಿ ಕ್ಯಾಪಿಟಲ್ಸ್ -ಬ್ರಬೋರ್ನ್
  • ಮಾರ್ಚ್ 24, ಸಂಜೆ 7:30; ಎಲಿಮಿನೇಟರ್ -ಡಿವೈ ಪಾಟೀಲ್ ಸ್ಟೇಡಿಯಂ
  • ಮಾರ್ಚ್ 26, ಸಂಜೆ 7:30; ಫೈನಲ್ -ಬ್ರಬೋರ್ನ್ ಸ್ಟೇಡಿಯಂ