Anshu Malik: ಕುಸ್ತಿಪಟು ಅಂಶು ಮಲಿಕ್ ಆಕ್ಷೇಪಾರ್ಹ ನಕಲಿ ವಿಡಿಯೊ ವೈರಲ್ ಪ್ರಕರಣ; ಒಬ್ಬ ಆರೋಪಿ ಬಂಧನ
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಅಂಶು ಮಲಿಕ್ ಅವರ ಕುರಿತ ಆಕ್ಷೇಪಾರ್ಹ ವಿಡಿಯೊ ವೈರಲ್ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಮುಂಬೈ: ಅಂತಾರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಅಂಶು ಮಲಿಕ್ (Anshu Malik) ಅವರದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೊವನ್ನು (Objectionable Video) ವೈರಲ್ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಅಂಶು ಮಲಿಕ್ ಅವರು ವಿಡಿಯೊ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಶ್ಲೀಲ ವೀಡಿಯೊದ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಈ ವೈರಲ್ ವಿಡಿಯೊಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಆಕೆಯ ಮೇಲೆ ಕೊಳಕು ಕಾಮೆಂಟ್‌ಗಳು ನಡೆಯುತ್ತಲೇ ಇವೆ. ಇದರಿಂದ ಅಂಶು ಹಾಗೂ ಅವರ ಕುಟುಂಬ ಮಾನಸಿಕವಾಗಿ ನೊಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ದಂಪತಿ ಇರುವ ಅಶ್ಲೀಲ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಅಂಶು ಮಲಿಕ್ ಇದ್ದಾರೆ ಎಂದು ಹೇಳಲಾಗಿದೆ.
ಇದರ ನಂತರ, ನೆಟಿಜನ್‌ಗಳು ಅಂಶು ಮಲಿಕ್ ಅವರನ್ನು ಟ್ರೋಲ್ ಮಾಡಲು ಶುರುಮಾಡಿದ್ದರು. ಆದರೆ, ಈ ವಿಡಿಯೊ ನಕಲಿ ಎಂದು ಅಂಶು ಹೇಳಿದ್ದಾರೆ. ವೈರಲ್ ಆಗಿರುವ ಎಂಎಂಎಸ್‌ನಲ್ಲಿನ ಫೋಟೋಗಳನ್ನು ತಿದ್ದುವ ಮೂಲಕ ತನ್ನ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ ಎಂದು ಅಂಶು ಹೇಳಿದ್ದಾರೆ.
ಅಂಶು ಮಲಿಕ್ ಹೇಳಿದ್ದೇನು?
ವೈರಲ್ ಆಗಿರುವ ಆಕ್ಷೇಪಾರ್ಹ ನಕಲಿ ವಿಡಿಯೊ ಬಗ್ಗೆ 2023ರ ಸೆಪ್ಟೆಂಬರ್ 16 ರಂದು ನನ್ನ ಗಮನಕ್ಕೆ ಬಂತು. ಕೂಡಲೇ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ವಿಡಿಯೊವನ್ನು ವೈರಲ್ ಆಡಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಂಶು ಮಲಿಕ್, ವಿಡಿಯೊದಲ್ಲಿರುವ ಇಬ್ಬರು ವ್ಯಕ್ತಿಗಳನ್ನು ನನ್ನ ಜೀವನದಲ್ಲೇ ಇದುವರೆಗೆ ನೋಡಿಲ್. ಅದಕ್ಕಿಂತ ಮುಖ್ಯವಾಗಿ ಸಮಾಜದ ಜನರು ನನ್ನ ಬಗ್ಗೆ ಯೋಚಿಸದೆ ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡುತ್ತಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಮೊಣಕಾಲಿನ ನೋವಿನಿಂದಾಗಿ ಅಂಶ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ಅಂಶು ಮಲಿಕ್ ಪ್ರಸ್ತುತ ಮೊಣಕಾಲಿನ ಗಾಯದ ಚಿಕಿತ್ಸೆಗಾಗಿ ಚೆನ್ನೈನಲ್ಲಿದ್ದಾರೆ. 2021ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಅಂಶು 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇಂತಹ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು.
2021ರಲ್ಲಿ ನಾರ್ವೆಯ ಓಸ್ಲೋದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಅಂಶು ಮಲಿಕ್ ಅವರು ಉಕ್ರೇನ್‌ನ ಸೊಲೊಮಿಯಾ ವಿನ್ನಿಕ್ ಅವರನ್ನು ಮಣಿಸುವ ಮೂಲಕ ಮಹಿಳೆಯ 57 ಕೆಜಿ ವಿಭಾಗದ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.