ಕನ್ನಡ ಸುದ್ದಿ  /  Sports  /  'You're A Harsh Man Sunny Hayden To Gavaskar On Live Tv After His 'Stinger To Shubman Gill India Legend Replies

IND vs AUS TEST: ಗಿಲ್​ ವಿರುದ್ಧ ಗವಾಸ್ಕರ್​​ ಕೆಂಡಾಮಂಡಲ, ನೀವೆಷ್ಟು ಕಠೋರ ಎಂದ ಹೇಡನ್​.! ಯಾಕೆ? ಏನಾಯ್ತು.?

IND vs AUS TEST: ಕೆ.ಎಲ್​.ರಾಹುಲ್ (KL Rahul)​​ ಜಾಗದಲ್ಲಿ ಸ್ಥಾನ ಪಡೆದು ನಿರೀಕ್ಷೆ ಸೃಷ್ಟಿಸಿದ್ದ ಶುಭ್​ಮನ್​ ಗಿಲ್ ಭಾರೀ ನಿರಾಸೆ ಮೂಡಿಸಿದ್ದಾರೆ. ಆದರೆ ಗಿಲ್​​ ಬ್ಯಾಟಿಂಗ್​ ನಡೆಸುತ್ತಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಲೆಜೆಂಡರಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​​ (Sunil Gavaskar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಭ್​ಮನ್ ಗಿಲ್​ ಮತ್ತು ಸುನಿಲ್​ ಗವಾಸ್ಕರ್​
ಶುಭ್​ಮನ್ ಗಿಲ್​ ಮತ್ತು ಸುನಿಲ್​ ಗವಾಸ್ಕರ್​

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ (IND vs AUS 3rd TEST) ಟೀಮ್​ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡಿದೆ. ಬ್ಯಾಟಿಂಗ್​​ ಸ್ಟಾರ್​ಗಳೇ ಪೆವಿಲಿಯನ್​ ಪರೇಡ್​ ನಡೆಸಿದರು. ಆಸಿಸ್​ ಮಾರಕ ಸ್ಪಿನ್​​ ದಾಳಿಗೆ ನಡುಗಿದ ಭಾರತ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ಅದರಲ್ಲೂ ಕೆ.ಎಲ್​.ರಾಹುಲ್ (KL Rahul)​​ ಜಾಗದಲ್ಲಿ ಸ್ಥಾನ ಪಡೆದು ನಿರೀಕ್ಷೆ ಸೃಷ್ಟಿಸಿದ್ದ ಶುಭ್​ಮನ್​ ಗಿಲ್ (Shubman Gill)​​​, ಭಾರೀ ನಿರಾಸೆ ಮೂಡಿಸಿದ್ದಾರೆ. ಆದರೆ ಗಿಲ್​​ ಬ್ಯಾಟಿಂಗ್​ ನಡೆಸುತ್ತಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಲೆಜೆಂಡರಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​​ (Sunil Gavaskar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿಲ್​ ವಿರುದ್ಧ ಸುನಿಲ್​ ಗವಾಸ್ಕರ್​​ ಅವರು ಸಿಟ್ಟಿಗೆದ್ದಿದ್ದನ್ನು ನೋಡಿ ಕಾಮೆಂಟರಿ ಮಾಡುತ್ತಿದ್ದ ಆಸಿಸ್​ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್​​ ಶಾಕ್​​ ಆಗಿದ್ದಾರೆ. ನೀವಿಷ್ಟು ಕಠೋರ ವ್ಯಕ್ತಿ ಎಂದು ನನಗೆ ತಿಳಿದೇ ಇರಲಿಲ್ಲ ಎಂದು ಗವಾಸ್ಕರ್​​​ ಅವರೊಂದಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಮೊದಲ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ನಡೆದ ಘಟನೆ. ರೋಹಿತ್​ ಶರ್ಮಾ ಮೊದಲ ವಿಕೆಟ್​ 27 ರನ್​ ಕಲೆ ಹಾಕಿ, ಮ್ಯಾಥ್ಯೂ ಕುಹ್ನೆಮನ್​ ಬೌಲಿಂಗ್​​ನಲ್ಲಿ ಸ್ಟಂಪ್​​ಔಟ್​ ಆಗಿ ಹೊರ ನಡೆದರು.

ಹೊಸ ಬ್ಯಾಟರ್ ಚೇತೇಶ್ವರ ಪೂಜಾರ (Cheteshwar Pujara) ಕ್ರಿಸ್​ಗೆ ಬಂದ ನಂತರ ಗಿಲ್​​​​ ಮಿಚೆಲ್​​ ಸ್ಟಾರ್ಕ್​​​​ ಬೌಲಿಂಗ್​ ಎದುರಿಸುತ್ತಿದ್ದರು. ಆಗ ಸಿಂಗಲ್​​ಗಾಗಿ ತ್ವರಿತವಾಗಿ ಓಡಿದರು. ಆಗ ಸಮಯಕ್ಕೆ ಸರಿಯಾಗಿ ಕ್ರೀಸ್​​ ಮುಟ್ಟಲು ಸಾಧ್ಯವಾಗದ ಕಾರಣ, ಗಿಲ್​ ಡೈವ್​ ಮಾಡಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಗಿಲ್​​​​​​​​ ತನ್ನ ಹೊಟ್ಟೆಗೆ ಪೆಟ್ಟಾದಂತೆ ಕಂಡು ಬಂತು. ಜೊತೆಗೆ ಗಾಯವಾದಂತೆಯೂ ಕಂಡು ಬಂತು. ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೇ ಗಿಲ್​​​​​​​​​ ಫಿಸಿಯೋ ಕರೆದರು. ಆದರೆ ಈ ಘಟನೆ ಗವಾಸ್ಕರ್​ ಪಿತ್ತ ನೆತ್ತಿಗೇರುವಂತೆ ಮಾಡಿತು.

ಶುಭ್​ಮನ್​​ ಗಿಲ್​​ಗೆ ಸ್ವಲ್ಪ ರಿಪೇರಿ ಕೆಲಸ ಮಾಡುವುದನ್ನು ನೋಡುತ್ತಿದ್ದೇವೆ. ಅವರು ತಮ್ಮ ಕ್ರೀಸ್​ಗೆ ಮರಲು ಡೈವ್​ ಮಾಡಿದರು. ಆದರೆ ನಿಮಗೆ ಏನು ಹೇಳುತ್ತೇನೆ ಅಂದರೆ ಫಿಸಿಯೋರನ್ನು ಅಷ್ಟು ಬೇಗ ಕರೆಯುವ ಅವಶ್ಯಕತೆ ಏನಿತ್ತು.? ಸ್ವಲ್ಪ ಹೊತ್ತು ಕಾಯಬಹುದಿತ್ತು. ಓವರ್​​ ಕೊನೇವರೆಗೂ ಕಾಯದಿರುವಷ್ಟು ಆತುರವೇ.? ಮಿಚೆಲ್​​​ ಸ್ಟಾರ್ಕ್​​ ಒಬ್ಬ ವೇಗದ ಬೌಲರ್​​.. ಓವರ್​​​ನಲ್ಲಿ 4 ಬಾಲ್​ಗಳನ್ನು ಎಸೆದಿದ್ದಾರೆ. ಅದರಲ್ಲೂ ಸುಡು ಬಿಸಿಲು ಬೇರೆ. ಇದು ಬೌಲರ್​​​ಗೆ ತುಂಬಾ ನೋವು ತರಿಸುತ್ತದೆ. ಜೊತೆಗೆ ನಾನ್​ ಸ್ಟ್ರೈಕರ್​​ನಲ್ಲಿದ್ದ ಓವರ್​ ಮುಗಿಸಿಯೇ ಫಿಸಿಯೋ ಕರೆಸಬಹುದಿತ್ತು. ಹೌದು ನಿಮಗೆ ನೋವಾಗಿದೆ. ಹಾಗಂತ ಕೊನೆಯ 2 ಎಸೆತಗಳಿಗೆ ಕಾಯಲು ಆಗಲಿಲ್ಲವೇ.? ಇಂತಹ ಸರಳವಾದ ವಿಷಯಗಳಿಂದ ಸಮಯ ಹಾಳು ಮಾಡಬೇಡಿ ಎಂದು ಖಡಕ್​ ಆಗಿ ಕಾಮೆಂಟರಿ ಮಾಡುತ್ತಿದ್ದಾಗ ಹೇಳಿದ್ದಾರೆ.

ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಗವಾಸ್ಕರ್ ಜೊತೆಯಲ್ಲಿ ಕುಳಿತಿದ್ದ ಮ್ಯಾಥ್ಯೂ ಹೇಡನ್ (Matthew Hayden) ಈ ಕೋಪ ನೋಡಿ ಗಾಬರಿಗೊಂಡಿದ್ದಾರೆ. ನೀವಿಷ್ಟು ಕಠೋರ ವ್ಯಕ್ತಿ ಎಂದು ಗೊತ್ತೇ ಇರಲಿಲ್ಲ. ಬಳಿಕ ಇದಕ್ಕೆ ಉತ್ತರಿಸಿದ ಗವಾಸ್ಕರ್​​, ನೀವು ದೇಶಕ್ಕಾಗಿ ಆಡುತ್ತೀರಿ ಎಂದರೆ ಎಲ್ಲವನ್ನೂ ತಿಳಿಯಬೇಕು ಎಂದು ತಿಳಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ಅರಿಯಬೇಕು. ಒಂದು ಕ್ಷಣವೂ ಕಾಯದೇ ಇದ್ದರೆ ಹೇಗೆ ಎಂದು ಲೆಜೆಂಡರಿ ಕ್ರಿಕೆಟರ್​ ಪ್ರಶ್ನೆ ಮಾಡಿದರು. ಇನ್ನೂ ಈ ಪಂದ್ಯದಲ್ಲಿ ಶುಭ್​​ಮನ್​ ಗಿಲ್​​​ 21 ರನ್​ಗಳಿಗೆ ಆಟ ಮುಗಿಸಿದ್ದಾರೆ. ಆಸ್ಟ್ರೇಲಿಯಾ ಸ್ಪಿನ್​ ದಾಳಿಗೆ ನಲುಗಿದ ಟೀಮ್​ ಇಂಡಿಯಾ 109 ರನ್​ಗೆ ಆಲ್​​ಔಟ್​ ಆಗಿದೆ. ಆದರೆ ಆಸ್ಟ್ರೇಲಿಯಾ ಉತ್ತಮ ಮುನ್ನಡೆಯತ್ತ ಹೆಜ್ಜೆ ಹಾಕಿದೆ.