Parenting News, Parenting News in kannada, Parenting ಕನ್ನಡದಲ್ಲಿ ಸುದ್ದಿ, Parenting Kannada News – HT Kannada

Latest Parenting Photos

ಪೋಷಕರಾಗುವುದು ಎಂದರೆ ವಿವರಿಸಲಾಗದ ಆನಂದ. ಅದರಲ್ಲೂ ಕಂದಮ್ಮ ಭೂಮಿಗೆ ಬಂದ ಮೇಲೆ ತಂದೆ–ತಾಯಿಗಳನ್ನು ಹಿಡಿಯುವವರೇ ಇರುವುದಿಲ್ಲ. ಇತ್ತೀಚೆಗೆ ಫೋಟೊಶೂಟ್ ಟ್ರೆಂಡ್ ಹೆಚ್ಚಾಗಿದ್ದು, ಪ್ರಿವೆಡ್ಡಿಂಗ್ ಶೂಟ್‌ನಂತೆ ಬೇಬಿ ಫೋಟೊಶೂಟ್ ಕೂಡ ಸಾಮಾನ್ಯ ಎಂಬಂತಾಗಿದೆ. ಪುಟ್ಟ ಕಂದಮ್ಮಗಳಿಗೆ ಬೇರೆ ಬೇರೆ ರೀತಿ ಡ್ರೆಸ್‌ ಹಾಕಿಸಿ, ಬೇರೆ ಬೇರೆ ಬ್ಯಾಕ್‌ಗ್ರೌಂಡ್‌ನಲ್ಲಿ ಫೋಟೊ ತೆಗೆಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಖುಷಿ ಪಡುತ್ತಾರೆ ಅಮ್ಮ–ಅಮ್ಮ. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳುತ್ತದೆ.

ಮಗು ಹುಟ್ಟಿದ ಖುಷಿಯಲ್ಲಿ ಫೋಟೊ ತೆಗೆಸಬೇಕು ಅಂತಿದ್ದೀರಾ, ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ

Thursday, November 28, 2024

ಮಗುವಿನೊಂದಿಗೆ ಬಂಧ ಗಟ್ಟಿಗೊಳಿಸುವ ವಿಷಯಗಳಿವು: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಎಲ್ಲ ಪಾಲಕರ ಆದ್ಯ ಹೊಣೆಗಾರಿಕೆ. ಅದನ್ನು ಪೂರೈಸಲು, ಪಾಲಕರು ತಮ್ಮ ಜೀವನದುದ್ದಕ್ಕೂ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಇದರ ಹೊರತಾಗಿಯೂ, ಅನೇಕ ಬಾರಿ ಕೆಲವು ತಪ್ಪುಗಳು ಅಥವಾ ನಿರ್ಲಕ್ಷ್ಯವು ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಮಕ್ಕಳು ಅವರ ಪಾಲಕರಿಂದ ಭಾವನಾತ್ಮಕವಾಗಿ ದೂರವಾಗುತ್ತಾರೆ. ಇಂತಹ ಸನ್ನಿವೇಶ ಬಾರದಂತೆ ಮಗುವಿನೊಂದಿಗೆ ನಿಮ್ಮ ಬಂಧವನ್ನು ಬಲಗೊಳಿಸಲು ಪ್ರಯತ್ನಿಸಿ. ಅದಕ್ಕಾಗಿ ಮಗು ಕೇಳಲು ಬಯಸುವ ಈ 5 ವಿಷಯಗಳ ಕಡೆಗೆ ಗಮನಕೊಡಿ. ಇದನ್ನು ನೀವು ಖಂಡಿತವಾಗಿಯೂ ನಿಮ್ಮ ಮಗುವಿಗೆ ಹೇಳಬೇಕು.

ನಿಮ್ಮ ಮಗು ಏನೋ ಹೇಳಿಕೊಂಡು ಬಂದಾಗ ನೀವು ಒರಟಾಗಿ ವರ್ತಿಸುತ್ತೀರಾ, ಹಾಗಾದರೆ ಈ 5 ವಿಷಯ ನೆನಪಿಟ್ಟುಕೊಳ್ಳಿ

Monday, September 23, 2024

ಪ್ರವಾಸ ಹೋಗುವುದಕ್ಕಾಗಿ ಎಷ್ಟೋ ಮಕ್ಕಳು ದಸರಾ ರಜೆ ಎದುರು ನೋಡುತ್ತಿರುತ್ತಾರೆ. ಹೌದು ಫ್ಯಾಮಿಲಿ ಫ್ರೆಂಡ್ಸ್‌ ಜತೆಗೆ ಪ್ರವಾಸ ಹೋಗುವ ಖುಷಿಯೇ ಬೇರೆ. ಈ ಸಲ ಮಕ್ಕಳನ್ನು ಕರ್ಕೊಂಡು ಮೈಸೂರಿಗೆ ಹೊರಟ್ರಾ? ಹಾಗಾದ್ರೆ ಮುಂಚಿತವಾಗಿಯೇ ಪ್ಲಾನ್ ಮಾಡ್ಕೊಳ್ಳಿ. ಪುಟಾಣಿಗಳು ಎಂಜಾಯ್ ಮಾಡೋ ಈ 10 ಪ್ಲೇಸ್‌ಗಳಿಗೆ ಮಿಸ್ ಮಾಡದೇ ಅವರನ್ನು ಕರ್ಕೊಂಡು ಹೋಗಿ ಖುಷಿ ನೋಡಿ.

ದಸರಾ ರಜೆಗೆ ಮಕ್ಕಳನ್ನು ಕರ್ಕೊಂಡು ಮೈಸೂರಿಗೆ ಹೊರಟ್ರಾ, ಪುಟಾಣಿಗಳು ಎಂಜಾಯ್ ಮಾಡೋ ಈ 10 ಪ್ಲೇಸ್ ಮಿಸ್‌ ಮಾಡ್ಬೇಡಿ

Sunday, September 22, 2024

ಪ್ರತಿದಿನ ಬೆಳಗಾದರೆ ಸಾಕು ಅಮ್ಮಂದಿರಿಗೆ ಕಾಡುವುದು ಒಂದೇ ಪ್ರಶ್ನೆ. ಇವತ್ತು ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತ. ಪ್ರತಿದಿನ ಒಂದೇ ರೀತಿಯ ತಿಂಡಿ ಕಳಿಸಿದರೆ ಮಕ್ಕಳು ತಿನ್ನುವುದಿಲ್ಲ. ಕಳಿಸಿದ ತಿಂಡಿ ಹಿಂದಕ್ಕೆ ಬರುತ್ತದೆ. ಅದಕ್ಕಾಗಿ ಮಕ್ಕಳ ಲಂಚ್‌ ಬಾಕ್ಸ್‌ನಲ್ಲಿ ಹೊಸತನವಿರುವಂತೆ ನೋಡಿಕೊಳ್ಳಬೇಕಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ರೀತಿ ಐಡಿಯಾ ಮಾಡ್ಕೊಂಡ್ರೆ ನೀವೂ ಮತ್ತು ನಿಮ್ಮ ಮಕ್ಕಳು ಇಬ್ಬರೂ ಖುಷಿಯಿಂದಿರಬಹುದು. ನಿಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಈ 5 ವಿಭಿನ್ನ ಟಿಫಿನ್‌ ಐಡಿಯಾಗಳಿವೆ.

ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತಾ ತಲೆಬಿಸಿ ಮಾಡ್ಕೋಬೇಡಿ: ಸೋಮವಾರದಿಂದ ಶುಕ್ರವಾರಕ್ಕೆ ಇಲ್ಲಿದೆ ಐಡಿಯಾ

Saturday, September 21, 2024

ಮನೆಯಲ್ಲಿ ಪುಟ್ಟ ಪಾಪು ಇದ್ದರೆ ನೀವು ಗಮನಿಸಿರಬಹುದು, ಹಸಿವಾದಾಗ ಮಾತ್ರವಲ್ಲ ಹೊಟ್ಟೆ ಗ್ಯಾಸ್ ತುಂಬಿದರೆ ಅದರ ನೋವಿಗೆ ಅಳಲಾರಂಭಿಸುತ್ತದೆ. ಕೂಡಲೇ ಅಮ್ಮನೋ, ಅಜ್ಜಿಯೋ ಮಗುವನ್ನು ಹೆಗಲಿಗೆ ಹಾಕಿಕೊಂಡು ಹೊಟ್ಟೆ ಗ್ಯಾಸ್ ತೆಗೆಯಲಯ ಪ್ರಯತ್ನಿಸುವುದನ್ನು ಗಮನಿಸಿರಬಹುದು.ಇದಕ್ಕೆ ಸಂಬಂಧಿಸಿದಂತೆ,  ಡಾ.ಅರ್ಪಿತ್ ಗುಪ್ತಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವು ವ್ಯಾಯಾಮಗಳ ಸಹಾಯದಿಂದ ನೀವು ಮಕ್ಕಳ ಹೊಟ್ಟೆಯ ಗ್ಯಾಸ್ ಅನ್ನು ಹೇಗೆ ಹೊರಹಾಕಬಹುದು ಎಂಬ ಮಾಹಿತಿ ನೀಡಿದ್ದಾರೆ.

ಪುಟ್ಟ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿದೆಯೇ? ಪಾಪುವಿನ ಹೊಟ್ಟೆ ನೋವು ಕಡಿಮೆ ಮಾಡೋಕೆ 6 ಸಿಂಪಲ್ ಟ್ರಿಕ್ಸ್‌

Wednesday, September 18, 2024

ಮಕ್ಕಳ ಶಾಲೆಯ ಊಟದ ಡಬ್ಬಿಯಾಗಲಿ, ಮಾರುಕಟ್ಟೆಯಿಂದ ಖರೀದಿಸಿದ ನೀರಿನ ಬಾಟಲಿಗಳಾಗಲಿ ನಮ್ಮ ಜೀವನದಲ್ಲಿ ಹಲವು ಅಂಶಗಳಲ್ಲಿ ಪ್ಲಾಸ್ಟಿಕ್ ಇರುತ್ತದೆ. ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಪೋಷಕರು ಪ್ಲಾಸ್ಟಿಕ್ ಬಾಕ್ಸ್‌ ಅಥವಾ ಬಾಟಲಿಗಳ ಬಳಕೆಯ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸುವುದಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ವರ್ಣರಂಜಿತ ಪ್ಲಾಸ್ಟಿಕ್ ಊಟದ ಪೆಟ್ಟಿಗೆಗಳು ಮತ್ತು ಕಂಟೈನರ್‌ಗಳು ನೋಟದಲ್ಲಿ ಸುಂದರವಾಗಿರುವುದಲ್ಲದೆ ಬೆಲೆಯಲ್ಲಿಯೂ ಸಹ ಅಗ್ಗವಾಗಿವೆ. ಪ್ಲಾಸ್ಟಿಕ್ ಪಾತ್ರೆಗಳ ಸೌಂದರ್ಯ ಮತ್ತು ಕಡಿಮೆ ಬೆಲೆ ಹೆಚ್ಚಾಗಿ ಜನರನ್ನು ಆಕರ್ಷಿಸುತ್ತದೆ. ಮಕ್ಕಳು ಕೂಡ ಇಂತಹ ಡಬ್ಬಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ರೀತಿಯ ರಂಗು-ರಂಗಿನ ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಹಾಕಿದೆ ಊಟ, ತಿಂಡಿಯನ್ನು ತಿನ್ನುವುದರಿಂದ ಎಷ್ಟೆಲ್ಲಾ ಅನುಕೂಲವಿದೆ ನೋಡಿ.

ಶಾಲೆಗೆ ಹೋಗುವ ಮಗುವಿಗೆ ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಊಟ, ತಿಂಡಿ ಕೊಡುವ ಅಭ್ಯಾಸ ನಿಮಗೂ ಇದ್ಯಾ, ಹಾಗಿದ್ರೆ ಈ ವಿಚಾರ ತಿಳಿದಿರಲೇಬೇಕು

Saturday, August 10, 2024

ಮಕ್ಕಳು ಪೋಷಕರು ಅಥವಾ ಮನೆಯವರು ಮಾಡಿದ್ದನ್ನೇ ಕಲಿಯುತ್ತಾರೆ ಎಂಬ ಮಾತಿದೆ. ಪೋಷಕರು ಎಂದಿಗೂ ತಮ್ಮ ಮಕ್ಕಳೆದುರು ಕೆಲವು ವರ್ತನೆಗಳನ್ನು ತೋರಬಾರದು. ಇದರಿಂದ ಮಕ್ಕಳಿಗೆ ಪೋಷಕರಲ್ಲಿ ನಂಬಿಕೆ ಕುಸಿಯುತ್ತದೆ, ಅಲ್ಲದೇ ಸಂಬಂಧ ದುರ್ಬಲವಾಗುತ್ತದೆ. ಪೋಷಕರು ಮಕ್ಕಳ ಮುಂದೆ ಎಂದಿಗೂ ಮಾಡಬಾರದಂತಹ 5 ತಪ್ಪುಗಳಿವು.

Parenting Tips: ಪೋಷಕರು ಮಕ್ಕಳ ವಿಚಾರದಲ್ಲಿ ಈ 5 ತಪ್ಪುಗಳನ್ನ ಎಂದಿಗೂ ಮಾಡಬಾರದು, ಇದು ಅವರ ಭವಿಷ್ಯಕ್ಕೆ ಮಾರಕ

Saturday, August 10, 2024

ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.

Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

Sunday, April 28, 2024

ಯಶಸ್ವಿ ಪೋಷಕರು ಮಗುವಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ತುಂಬುತ್ತಾರೆ. ಇದೇ ವೇಳೆ ಅವರಲ್ಲಿ ಒತ್ತಡ  ಹಾಗೂ ಹೊರೆಯಾಗದಂತೆ ಎಚ್ಚರವಾಗಿರುತ್ತಾರೆ. ಮಗುವಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಕ್ರಿಯಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಾರೆ.

ಯಶಸ್ವಿ ಮಕ್ಕಳ ಪೋಷಕರಲ್ಲಿ ಕಾಣಿಸುವ 7 ಸಾಮಾನ್ಯ ಸಂಗತಿಗಳಿವು; ನಿಮಗೂ ಈ ಟಿಪ್ಸ್ ಸಹಾಯವಾಗುತ್ತೆ

Sunday, April 28, 2024

ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸುವುದು ಮುಖ್ಯ. ಇದು ಆರೋಗ್ಯಕರ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

Parenting: ಮಕ್ಕಳ ಭಾವನೆಗಳನ್ನು ನಿಭಾಯಿಸುವುದು ಹೇಗೆ; ಪೋಷಕರಿಗೆ ಅಗತ್ಯ ಸಲಹೆಗಳು ಇಲ್ಲಿದೆ

Saturday, April 20, 2024

ನಿರ್ಲಕ್ಷ್ಯ: ಮಕ್ಕಳಿಗೆ ಆಹಾರ, ವಸತಿ ಸೇರಿದಂತೆ ಭಾವನಾತ್ಮಕ ಬೆಂಬಲದಂಥ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ಪೋಷಕರು ವಿಫಲವಾದರೆ, ಅಂಥಾ ಮಕ್ಕಳಲ್ಲಿ ನಿರ್ಲಕ್ಷ್ಯದ ಭಾವನೆಗಳು ಉಂಟಾಗಬಹುದು.

ಬಾಲ್ಯದಲ್ಲಿ ಮಕ್ಕಳು ಆಘಾತಕ್ಕೊಳಗಾಗಲು ಪೋಷಕರ ಈ ನಡೆಯೇ ಕಾರಣ; ಹೆತ್ತವರೇ, ಮಕ್ಕಳೊಂದಿಗೆ ನಾಜೂಕಾಗಿರಿ

Wednesday, February 14, 2024

ಮಕ್ಕಳ ಬಾಲ್ಯ ಚೆನ್ನಾಗಿ ಇರುವಲ್ಲಿ ಪೋಷಕರ ಪಾತ್ರ ತುಂಬಾನೇ ಮುಖ್ಯವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಬೇಕು ಎನ್ನುವ ಒಂದೇ ಯೋಚನೆಯಲ್ಲಿ ನಾವು ಕೆಲವೊಂದು ಸೂಕ್ಷ್ಮ ವಿಚಾರಗಳನ್ನೇ ಮರೆತುಬಿಡುತ್ತೇವೆ. ಪೋಷಕರಾಗಿ ನಮ್ಮ ಕೆಲವು ತಪ್ಪುಗಳಿಂದ ಮಕ್ಕಳ ನಡುವಿನ ಆರೋಗ್ಯಕರ ಸಂಬಂಧವೇ ಹಾಳಾಗಿಬಿಡಬಹುದು. ಹೀಗಾಗಿ ಮಕ್ಕಳೊಂದಿಗೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

Parenting Tips: ಮಕ್ಕಳೊಂದಿಗೆ ಬಲವಾದ ಬಂಧ ಬೆಸೆದುಕೊಳ್ಳಲು ಇಲ್ಲಿದೆ ಬಹು ಮುಖ್ಯ​ ಸಲಹೆಗಳು

Friday, February 2, 2024

ಪೋಷಕರು ಮಕ್ಕಳಲ್ಲಿ ಭಾವಾನಾತ್ಮಕವಾಗಿ ಹಾಗೂ ಮಾನಸಿಕವಾಗಿ ಸುರಕ್ಷಿತ ಸಂಪರ್ಕವನ್ನು ಹೊಂದುವುದು ಮುಖ್ಯವಾಗುತ್ತದೆ. ನಿಮ್ಮ ಪೀಳಿಗೆಗೂ ಇಂದಿನ ಮಕ್ಕಳ ಮನೋಭಾವಕ್ಕೂ ವ್ಯತ್ಯಾಸವಿದೆ ಎಂಬುದನ್ನು ಪೋಷಕರು ಅರಿಯಬೇಕು. ಇಂದಿನ ಪೀಳಿಗೆಗೆ ತಕ್ಕಂತೆ ಪೋಷಕರ ಮನೋಭಾವವೂ ಬದಲಾಗಬೇಕು. ಆಗ ಮಾತ್ರ ಮಕ್ಕಳು ಪೋಷಕರೊಂದಿಗೆ ಸುರಕ್ಷಿತ ಸಂಬಂಧ ಬೆಳೆಸಲು ಇಷ್ಟಪಡುತ್ತಾರೆ ಎನ್ನುತ್ತಾರೆ ತಜ್ಞರಾದ ಎಲಿ ಹಾರ್ವುಡ್‌.

Parenting Tips: ಪೋಷಕರು ಮಕ್ಕಳಿಗೆ ತಪ್ಪದೇ ಕಲಿಸಬೇಕಾದ 5 ಗುಣಗಳಿವು, ಮಕ್ಕಳಲ್ಲಿ ಧೈರ್ಯ ಮೂಡಲು ಇವು ಸಹಕಾರಿ

Thursday, February 1, 2024

ಮೊದಲ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಾಗ ಸಂತಸದ ಜೊತೆಯಲ್ಲಿ ಜವಾಬ್ದಾರಿಗಳ ಮೂಟೆಯೇ ಹೆಗಲ ಮೇಲೇರಿ ಬಿಡುತ್ತದೆ . ಈಗಂತೂ ಚಳಿಗಾಲದ ಸಮಯವಾಗಿರೋದ್ರಿಂದ ಪುಟ್ಟ ಕಂದಮ್ಮಗಳ ಆರೋಗ್ಯದ ಕಡೆಗೆ ಎಷ್ಟು ಜಾಗರೂಕತೆ ವಹಿಸಿದರೂ ಸಹ ಅದು ಕಡಿಮೆ ಎಂದೇ ಎನಿಸುತ್ತದೆ. ಚಳಿಗಾಲದ ಹವಾಮಾನಕ್ಕೆ ಹೊಂದಿಕೊಳ್ಳಲು ಅಗ ತಾನೆ ಜನಿಸಿದ ಮಕ್ಕಳಿಗೆ ತುಸು ಕಷ್ಟವಾಗುತ್ತದೆ. ಆದರೆ ಪೋಷಕರಾಗಿ ನೀವು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಸರಿಯಾದ ಸಮಯಕ್ಕೆ ಕೈಗೊಂಡಲ್ಲಿ ಚಳಿಗಾಲದಲ್ಲಿಯೂ ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯುಂಟಾಗದಂತೆ ನೋಡಿಕೊಳ್ಳಬಹುದಾಗಿದೆ.

ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ.? ಪೋಷಕರಿಗೆ ಇಲ್ಲಿದೆ ಮಹತ್ವದ ಕಿವಿಮಾತು

Wednesday, December 13, 2023

ಗ್ರೀಟಿಂಗ್​ ಕಾರ್ಡ್​: ನಿಮ್ಮ ಬಳಿ ಹಣ ಇಲ್ಲ, ನೀವಿನ್ನೂ ಚಿಕ್ಕವರು, ಆದ್ರೆ ಪೋಷಕರಿಗೆ ಈ ದಿನ ಏನಾದ್ರು ಉಡುಗೊರೆ ನೀಡಬೇಕು ಎಂದು ಬಯಸುತ್ತಿದ್ದೀರಿ ಅಲ್ಲವೇ? ಚಿಂತೆಬಿಡಿ, ನೀವೇ ಒಂದು ಗ್ರೀಟಿಂಗ್​ ಕಾರ್ಡ್​ ತಯಾರಿಸಿ ಅದರಲ್ಲಿ ಅವರಿಗೆ ವಿಶ್​ ನೋಟ್​​ ಬರೆದು ಅಥವಾ ಭಾವನಾತ್ಮಕ ಸಂದೇಶ ಬರೆದು ಅವರಿಗೆ ನೀಡಿ.

Parents Day Gift: ಪೋಷಕರ ದಿನದಂದು ನಿಮ್ಮ ತಂದೆ-ತಾಯಿಗೆ ಉಡುಗೊರೆ ನೀಡಲು ಬಯಸಿದ್ದೀರಾ? ಇಲ್ಲವೆ 7 ಗಿಫ್ಟ್ ಐಡಿಯಾಗಳು

Saturday, July 22, 2023

ಮಕ್ಕಳು ಪೋಷಕರ ಮಾತು ಕೇಳದೇ ಇರುವುದು ಇತ್ತೀಚೆಗೆ ಸಾಮಾನ್ಯ. ಹಲವು ಮನೆಗಳಲ್ಲಿ ಮಕ್ಕಳು ಮಾತು ಕೇಳುತ್ತಿಲ್ಲ ಎಂದು ದೂರುವ ಪೋಷಕರನ್ನು ನೋಡಿದ್ದೇವೆ. ಅವರು ನಿಮ್ಮ ಮೇಲೆ ಸಿಟ್ಟಾಗುವುದು, ಅವರು ಹೇಳಿದ್ದನ್ನು ಕೇಳದೇ ಇದ್ದಾಗ ಅವರದ್ದೇ ಮಾರ್ಗದಲ್ಲಿ ಹೋಗಿ ಅದನ್ನು ಪಡೆಯಲು ಯತ್ನಿಸುವುದು ಇದೆಲ್ಲವೂ ಸಹಜ. ಆದರೆ ಮಕ್ಕಳ ಈ ವರ್ತನೆಯಿಂದ ಕೆಲವೊಮ್ಮೆ ನಾವು ತಾಳ್ಮೆ ಕಳೆದುಕೊಳ್ಳುತ್ತೇವೆ. ಅವರಿಗೆ ಹೊಡೆಯುವುದು ಬಡಿಯುವುದು ಮಾಡುತ್ತೇವೆ. ಆದರೆ ಈ ವರ್ತನೆ ಸಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞ ಜಾಜ್ಮಿನ್‌ ಮೆಕಾಯ್‌. ಈ ಬಗ್ಗೆ ಪೋಷಕರಿಗೆ ಸಲಹೆ ನೀಡುವ ಅವರು ʼಹಟವಾದಿ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರೊಂದಿಗೆ ಆರೋಗ್ಯಕರ ಗಡಿ ಹೊಂದಿಸಲು ಪ್ರಯತ್ನಿಸಬೇಕು. ಇದರಿಂದ ಅವರು ಅರ್ಥ ಮಾಡಿಕೊಳ್ಳಬಹುದು. ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬಹುದುʼ ಹಾಗಾದರೆ ಹಟವಾದಿ ಮಕ್ಕಳೊಂದಿಗೆ ನಿಮ್ಮ ವರ್ತನೆ ಹೇಗಿರಬೇಕು, ನೋಡಿ.

Parenting Tips: ಮಕ್ಕಳು ಮಾತು ಕೇಳುತ್ತಿಲ್ಲವೇ; ಹಟವಾದಿ ಮಕ್ಕಳೊಂದಿಗೆ ಹೀಗಿರಲಿ ಪೋಷಕರ ವರ್ತನೆ

Wednesday, July 5, 2023

ಅಂಗಡಿಯಿಂದ ದುಬಾರಿ ಗಿಫ್ಟ್ ತಂದು ತಂದೆಗೆ ಕೊಟ್ಟು ಅವರನ್ನು ಖುಷಿಪಡಿಸುವ ಹೊರತಾಗಿ ಅಪ್ಪನ ಮೊಗದಲ್ಲಿ ತರಿಸಲು ನಿಮಗೆ ಸಾಧ್ಯವಾಗುವ ಈ ಮೇಲಿನ ಐಡಿಯಾಗಳನ್ನು ಬಳಸಿ.

Fathers Day 2023: ದುಬಾರಿ ವಸ್ತುಗಳನ್ನ ಗಿಫ್ಟ್ ನೀಡುವ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು? ಇಲ್ಲಿದೆ ಐಡಿಯಾಗಳು

Saturday, June 17, 2023

ಪೋಷಕರು ತಮ್ಮ ಕೈಲಾದಷ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಪೋಷಕರು ಮಕ್ಕಳ ವಿಷಯದಲ್ಲಿ ತಪ್ಪು ಮಾಡಬಹುದು. ಮಕ್ಕಳ ಬಯಕೆಗಳನ್ನು ಪೂರೈಸುವುದು ಮಾತ್ರವಲ್ಲ, ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದುವುದು ಬಹಳ ಮುಖ್ಯವಾಗುತ್ತದೆ. ಭಾವಾನಾತ್ಮಕವಾಗಿ ಮಕ್ಕಳೊಂದಿಗೆ ಸಂಬಂಧ ಹೊಂದುವುದರಿಂದ ಮಕ್ಕಳ ಬೆಳವಣಿಗೆಗೆ ಹಲವು ರೀತಿಯಲ್ಲಿ ಸಹಾಯವಾಗುತ್ತವೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ವಿಷಯದಲ್ಲಿ ಪೋಷಕರು ಮಾಡುವ ಸಾಮಾನ್ಯ ತಪ್ಪುಗಳು ಹೀಗಿವೆ.

Parenting: ಮಕ್ಕಳೊಂದಿಗೆ ಪೋಷಕರಿಗಿರಲಿ ಉತ್ತಮ ಬಾಂಧವ್ಯ; ಈ ತಪ್ಪುಗಳಿಗೆ ಎಂದಿಗೂ ಅವಕಾಶ ನೀಡದಿರಿ

Tuesday, June 6, 2023

ಪಾಸಿಟಿವ್‌ ಪೇರೆಂಟಿಂಗ್‌ ಅಥವಾ ಧನಾತ್ಮಕ ಪೇರೆಂಟಿಂಗ್‌ ಎನ್ನುವುದು ಮಕ್ಕಳ ಸಾಮಾಜಿಕ, ಭಾವನಾತ್ಮಕ ಹಾಗೂ ಅರಿವಿನ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಗುವಿನ ಭವಿಷ್ಯದ ಏಳಿಗೆಗೆ ಪೋಷಕರು ಮಾಡಬಹುದಾದ ಸಕಾರಾತ್ಮಕ ಸಲಹೆಗಳು ಇಲ್ಲಿವೆ.

Parenting: ಮಕ್ಕಳಿಗೆ ಪ್ರೀತಿಯೊಂದಿಗೆ ಶಿಸ್ತನ್ನೂ ಕಲಿಸಿ; ಸುಭದ್ರ ಭವಿಷ್ಯಕ್ಕೆ ಇದೇ ಬುನಾದಿ

Monday, June 5, 2023

ನಿಮ್ಮ ಮಕ್ಕಳು ಮೇಲಿನ ಎಲ್ಲಾ ರೋಗಲಕ್ಷಣಗಳನ್ನು ಹೊಂದಿದ್ದರೆ ಹೆದರುವುದು, ಚಿಂತಿಸುವುದು ಬೇಡ. ಎಲ್ಲಾ ಸಮಸ್ಯೆಗೂ ಏನಾದರೂ ಪರಿಹಾರ ಇದ್ದೇ ಇರುತ್ತದೆ. ಆದ್ದರಿಂದ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ಸೂಕ್ತ ವೈದ್ಯರ ಬಳಿ ಹೋಗಿ.  ಇದು ಭವಿಷ್ಯದಲ್ಲಿ ಮಕ್ಕಳಿಗೆ ಇನ್ನಷ್ಟು ಆರೋಗ್ಯ ಸಮಸ್ಯೆ ಕಾಡುವುದನ್ನು ತಪ್ಪಿಸುತ್ತದೆ.

Thyroid in Children: ಮಕ್ಕಳಿಗೂ ಕಾಡುತ್ತೆ ಥೈರಾಯ್ಡ್‌ ಸಮಸ್ಯೆ..ಈ ಲಕ್ಷಣಗಳು ಕಂಡುಬಂದರೆ ತಪ್ಪದೆ ವೈದ್ಯರ ಬಳಿ ಕರೆದೊಯ್ಯಿರಿ

Tuesday, January 10, 2023