karnataka-wild-life News, karnataka-wild-life News in kannada, karnataka-wild-life ಕನ್ನಡದಲ್ಲಿ ಸುದ್ದಿ, karnataka-wild-life Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka wild life

Latest karnataka wild life Photos

ತಿರುಮಲ ತಿರುಪತಿ ಬೆಟ್ಟದ ಆಸುಪಾಸಿನಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದಿದೆ. ಈ ಬಾರಿ ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿಯೇ ಚಿರತೆ ಕಾಣಸಿಕ್ಕಿರುವುದು ಭಕ್ತರಲ್ಲಿ ಕಳವಳ ಮೂಡಿಸಿದೆ. ಇದರ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಭಕ್ತರು ಮಾಹಿತಿ ನೀಡಿದ್ದು, ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಶುರುವಾಗಿದೆ.

ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

Sunday, September 29, 2024

ಕಾಡಿನಲ್ಲಾದರೆ ಸ್ನಾನದ ಗೊಡವೆಯಿಲ್ಲ. ಕಾಡಿಗೆ ಬಿಟ್ಟಾಗ ನೀರಿನಲ್ಲಿ ಈಜಾಡಿಕೊಂಡು ಬಂದರೆ ಮುಗಿಯಿತು. ಸಮಯ ಸಿಕ್ಕಾಗ ಸ್ನಾನ ಮಾಡಿಸಲಾಗುತ್ತದೆ. ಆದರೆ ಮೈಸೂರು ದಸರಾಗೆ ಬಂದಾಗ ಹಾಗಲ್ಲ. ಇಲ್ಲಿ ನಿತ್ಯ ಮಜ್ಜನ.

Mysore Dasara 2024: ಮೈಸೂರು ದಸರಾ ಆನೆಗಳ ನಿತ್ಯದ ಸ್ನಾನ ಹೇಗಿರುತ್ತದೆ: ಅರಮನೆ ಅಂಗಳದ ಸ್ನಾನದ ತೊಟ್ಟಿಯಲ್ಲಿ ಮಜ್ಜನದ ನೋಟ ಹೀಗಿದೆ photos

Tuesday, September 10, 2024

ಜೆ.ಎಸ್​ ವಸಂತ ಕರ್ನಾಟಕ ಹಾಗೂ ಹೊರ ರಾಜ್ಯಗಳ 100ಕ್ಕೂ ಹೆಚ್ಚು ಕಾಡಾನೆ ಹಾಗೂ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಹೋಗಿ ಅಲ್ಲಿಯ ಆನೆಗಳಿಗೆ ಕೂಡ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯದಲ್ಲಿ ಹಾಗೂ ಶಿಬಿರಗಳಲ್ಲಿ ನೀಡುವ ತರಬೇತಿಯನ್ನು ನೀಡಿರುವುದು ವಿಶೇಷ.

Mysore Dasara: ದಸರಾ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಮಾವುತಗೆ ಸಿಎಂ ಪದಕ: ಎಕೆ 47 ಆನೆ ನಿಯಂತ್ರಿಸುವುದು ಅಷ್ಟು ಸುಲಭನಾ photos

Thursday, September 5, 2024

ಕಾಡಿಗೆ ಹೋದರೆ ಹುಲಿ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ಫ್ರೇಮಿಗೆ ನಾಲ್ಕು ಹುಲಿ ಸಿಗುವುದು ಎಂದರೆ.. ಅದು ಮಧ್ಯಪ್ರದೇಶದ ಪೆಂಚ್‌ನಲ್ಲಿ(pench tiger reserve) ಹೀಗೆ ಒಟ್ಟೊಟ್ಟಿಗೆ ಸಿಕ್ಕರೆ, ಅನಿಲ್‌ ಕುಂಬ್ಳೆ ಅವರಿಗೆ ದಶಕದ ಹಿಂದೆ ಸಿಕ್ಕ ನೋಟ.

Anil Kumble photography: ಕ್ರಿಕೆಟಿಗ ಅನಿಲ್‌ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕರೂ ಹೌದು, ಕುಂಬ್ಳೆ ಕ್ಲಿಕ್ಕಿಸಿದ ಫೋಟೋ ಝಲಕ್‌ ನೋಡಿ photos

Thursday, August 29, 2024

ಮೈಸೂರು ರಾಜವಂಶಸ್ಥೆ ಶೃತಿಕೀರ್ತಿ ದೇವಿ ಅವರು ಬುಧವಾರ (ಆಗಸ್ಟ್ 28) ದಸರಾ ಗಜಪಡೆಯ ಲಾಲನೆಪಾಲನೆ ನಡೆಸಿದರು. ವಿಶೇಷವಾಗಿ ರೋಹಿತ್ ಆನೆ ಬಳಿ ಹೋಗಿ ಅದರ ಕುಶಲೋಪರಿ ವಿಚಾರಿಸಿದರು. ಆನೆ ಬಂದಾಗಿನಿಂದ ಇದು ಅವರ ನಿತ್ಯದ ಕೆಲಸವೆಂಬಂತಾಗಿದೆ. ಏನಿದು ಬಾಂಧವ್ಯ ಎಂಬ ಕುತೂಹಲ ಸಹಜ. ಅದಕ್ಕೂ ಮೊದಲು ಶೃತಿಕೀರ್ತಿ ದೇವಿ ಯಾರು ಎಂಬುದನ್ನು ತಿಳಿಯೋಣ.

ಮೈಸೂರು ದಸರಾ ಆನೆ ರೋಹಿತ್‌ಗೂ ರಾಜವಂಶಕ್ಕೂ ಇದೆ ಒಂದು ನಂಟು, ರಾಜವಂಶಸ್ಥೆ ಶೃತಿಕೀರ್ತಿದೇವಿ ಅವರನ್ನು ಕಂಡರೆ ಆನೆಗೂ ಅಕ್ಕರೆ- ಚಿತ್ರನೋಟ

Wednesday, August 28, 2024

ಕ್ಷಣಕೊಂದು ಬಣ್ಣ ಬದಲಿಸುವ ವ್ಯಕ್ತಿಗಳಿಗೆ 'ಊಸರವಳ್ಳಿ' ಪದವನ್ನು ನುಡಿಗಟ್ಟಿನ ರೂಪದ ಬಿರುದಾಗಿ ದಯಪಾಲಿಸಲಾಗುತ್ತದೆ. ಅಕ್ಷರಶಃ ತಾನು ನಡದ ದಾರಿಯ ಬಣ್ಣಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿದುವ ಊರಸವಳ್ಳಿ/ ಗೋಸುಂಬಿಗಳು ಸೃಷ್ಟಿಯ ದೊಡ್ಡ ವೈಚಿತ್ರಗಳಲ್ಲಿ ಒಂದಾಗಿವೆ. ಇನ್ನು ತೇಜಸ್ವಿಯವರ ಐಕಾನಿಕ್ ಕಾದಂಬರಿಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುವ ಕರ್ವಾಲೋ ಕಾದಂಬರಿಯ ಹೀರೋ 'ಹಾರುವ ಓತಿ'ಗಳನ್ನು ಕನ್ನಡಿಗರು ಮರೆಯಲು ಸಾಧ್ಯವೆ?

World Lizard day: ಕರ್ನಾಟಕದಲ್ಲಿವೆ ಪ್ರಮುಖ ಜಾತಿಯ ಉಡಗಳು, ಅವುಗಳ ವಿಶೇಷ ಏನು, ಹೇಗಿದೆ ಬದುಕಿನ ಕ್ರಮ photos

Thursday, August 15, 2024

ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತ ಮೊದಲ ಆನೆ 'ಜಯಮಾರ್ತಾಂಡ'. ಜಯಮಾರ್ತಾಂಡ ಆನೆ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತಿತ್ತು. ಸುಮಾರು 45 ವರ್ಷ ಈ ಕಾರ್ಯ ನಿಭಾಯಿಸಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಹೀಗಾಗಿಯೇ, ಅರಮನೆಯ ಮುಖ್ಯದ್ವಾರಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ. ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಹಿರಿಮೆ ಜಯಮಾರ್ತಾಂಡ ಆನೆಗೆ. ಈಗಲೂ ಈ ಆನೆಯ ದಾಖಲೆ ಇತಿಹಾಸವಾಗಿದೆ. ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲ ಬಾರಿ ಅಂಬಾರಿಯನ್ನು ಹೊತ್ತಿತ್ತು. ಒಡೆಯರ್ ಕಾಲದಲ್ಲಿ ಆರಂಭವಾದ ವಿಜಯದಶಮಿಯಿಂದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಈ ರೀತಿ ಆನೆಯೊಂದಕ್ಕೆ ಗೌರವ ಸಿಕ್ಕಿದ್ದು ವಿಶೇಷವೂ ಹೌದು.

Elephant Day 2024: ಮೈಸೂರು ಅರಮನೆ ದ್ವಾರಗಳಿಗೂ ಆನೆಗಳ ಹೆಸರು, ಏನಿದರ ಮಹತ್ವ photos

Monday, August 12, 2024

ತುಮಕೂರು ತಾಲೂಕು ಉರುಡಗೆರೆ ಹೋಬಳಿ, ಮೈದಾಳ ಗ್ರಾಮ ಪಂಚಾಯಿತಿಯ ಅಯ್ಯನಪಾಳ್ಯ ಗ್ರಾಮದ ರಾಮಚಂದ್ರಯ್ಯ ಅವರ ಮನೆ ಸಮೀಪ 13 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಪುಟ್ಟಯ್ಯ ಅವರು ಹುಲ್ಲು ಕೊಯ್ಯಲು ಹೋದಾಗ ಹೆಬ್ಬಾವು ಅವರಿಗೆ ಕಾಣಸಿಕ್ಕಿತ್ತು. ಕೂಡಲೇ ಅವರು ತುಮಕೂರಿನ ವರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಹೆಬ್ಬಾವು ಇರುವುದರ ಬಗ್ಗೆ ತಿಳಿಸಿದ್ದರು.

ತುಮಕೂರು ಅಯ್ಯನಪಾಳ್ಯದಲ್ಲಿತ್ತು 13 ಅಡಿ ಉದ್ದದ ಹೆಬ್ಬಾವು; ವರಂಗಲ್‌ ಫೌಂಡೇಶನ್‌ ತಂಡದ ನೆರವಿನೊಂದಿಗೆ ಸುರಕ್ಷಿತಾರಣ್ಯಕ್ಕೆ-ಚಿತ್ರನೋಟ

Saturday, July 27, 2024

ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿಯುವ ಕಪಿಲಾ ನದಿ ಕಬಿನಿ ಜಲಾಶಯದ ಭಾಗವಾಗಿ ರೂಪಿಸಿರುವ ಹಿನ್ನೀರು ಪ್ರವಾಸಿ ತಾಣ. ಅಲ್ಲಿ ಆನೆಗಳು ಸೇರಿ ಬಹುತೇಕ ವನ್ಯಜೀವಿಗಳ ಪ್ರಿಯ ತಾಣವೂ ಹೌದು. ಆನೆಗಳು ವಿಹರಿಸುವ ಸನ್ನಿವೇಶವೂ ಖುಷಿ ನೀಡುತ್ತದೆ.

Kabini Backwaters: ಕಬಿನಿಯಲ್ಲಿ ಜಲರಾಶಿ, ಜೀವ ಸಂಕುಲವೂ ನಿರಾಳ, ಹಿನ್ನೀರ ಪ್ರವಾಸದ ಖುಷಿ photos

Wednesday, July 24, 2024

ಅದನ್ನು ತೆಗೆದುಕೊಂಡು ಹೋಗುವಾಗ ಜನರ ಅಬ್ಬರಕ್ಕೆ ಹೆದರಿತು. ಈ ವೇಳೆ ಬೋನಿನಿಂದ ಜಿಗಿದು ಚಿರತೆ ಓಡತೊಡಗಿತು. ಕೊನೆಗೆ ಎರಡನೇ ಬಾರಿಗೆ ಚಿರತೆಯನ್ನು ಸೆರೆ ಹಿಡಿಯಲಾಯಿತು. ಈ ವೇಳೆ ಜನ ಕೋಲುಗಳಿಂದ ಅದರ ಬಾಯಿಗೆ ತಿವಿದು ಹಿಡಿದಿದ್ದು ಕಂಡು ಬಂದಿತು.

Mudhol News: ಸೆರೆ ಹಿಡಿದ ಚಿರತೆಯ ಬೋನ್‌ ಮೇಲೆ ಕುಳಿತರು, ಓಡಿದ ಚಿರತೆ ಮತ್ತೆ ಸೆರೆ ಹಿಡಿದರು, ಬಾಗಲಕೋಟೆ ಜಿಲ್ಲೆಯಲ್ಲಿ ಹರಸಾಹಸ photos

Monday, July 22, 2024

ಈಗಲೂ ಆಂಧ್ರಪ್ರದೇಶ ಅರಣ್ಯ ಇಲಾಖೆ ಒಂಬತ್ತು ಆನೆಗಳಿಗೆ ಬೇಡಿಕೆಯನ್ನು ಇಟ್ಟಿದೆ. ಕರ್ನಾಟಕ ಇಲಾಖೆಯು ಸಚಿವರ ಒಪ್ಪಿಗೆಯೊಂದಿಗೆ ಆನೆ ನೀಡಲು ಮುಂದಾಗಿದೆ. ಇದಕ್ಕಾಗಿ ಒಂಬತ್ತು ಆನೆ ಆಯ್ಕೆ ಪ್ರಕ್ರಿಯೆಯೂ ಆರಂಭವಾಗಲಿದೆ.

Forest News: ಕರುನಾಡ ಆನೆಗಳಿಗೆ ಹೊರ ನಾಡಿನಲ್ಲಿ ಭಾರೀ ಬೇಡಿಕೆ, ಆಂಧ್ರಪ್ರದೇಶಕ್ಕೆ ಬೇಕಿದೆ 9 ಆನೆ

Tuesday, July 9, 2024

ಮೈಸೂರು ಸುತ್ತಮುತ್ತ ಹುಲಿ ಸಂಚಾರ ಕೆಲವು ದಿನಗಳಿಂದ ಇದೆ. ಜಯಪುರ ಸಮೀಪದ ಚಿಕ್ಕನಹಳ್ಳಿ ಮೀಸಲು ಅರಣ್ಯದಿಂದ ಹುಲಿ ಮೈಸೂರು-ಶ್ರೀರಂಗಪಟ್ಟಣ-ಬನ್ನೂರು ಭಾಗದಲ್ಲಿ ಸಂಚರಿಸುತ್ತಿದೆ.

Tiger Near Mysore: ಸಿಎಂ ಸಿದ್ದರಾಮಯ್ಯರ ಸ್ವಗ್ರಾಮದ ಸಮೀಪಕ್ಕೆ ಬಂದ ಹುಲಿರಾಯ, ಅರಣ್ಯ ಇಲಾಖೆ ಅಲರ್ಟ್‌

Sunday, June 30, 2024

ಹುಲಿಯೊಂದು ಹಂದಿಯನ್ನು ಅಟ್ಟಿಸುತ್ತಿರುವ ಚಿತ್ರಕ್ಕೆ ಎಪಿಜೆ ಕಂಚಿನ ಪದಕ ಬಂದಿದೆ. ಇದು ಮಾತ್ರವಲ್ಲದೆ ವಿವಿಧ ಚಿತ್ರಗಳಿಗೆ ವಿವಿಧ ಸಂಸ್ಥೆಗಳಿಂದ 3 ಹಾನರೆಬಲ್ ಮೆನ್ಶನ್ ಲಭಿಸಿದೆ.

ಜಾತ್ರೆಯಲ್ಲಿ ಕಂಡ ಜನಸ್ತೋಮ, ತಾಯಿ ಹಕ್ಕಿ ಮಮತೆ, ಛಾಯಾಗ್ರಾಹಕ ಅನುರಾಗ್‌ ಬಸವರಾಜ್‌ ಚಿತ್ರಗಳಿಗೆ ಅಂತರಾಷ್ಟ್ರೀಯ ಮನ್ನಣೆ photos

Tuesday, June 18, 2024

ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಂಡೀಪುರ ದೇಶದ ಪ್ರಮುಖ ಹುಲಿಧಾಮ. ಇಲ್ಲಿ ಯಥೇಚ್ಛ ವನ್ಯಜೀವಿಗಳಿವೆ. ನಾಲ್ಕೈದು ತಿಂಗಳಿನಿಂದ ಮಳೆಯಿಲ್ಲದೇ ಬಳಲಿದ್ದ ವನ್ಯಜೀವಿಗಳೂ ಈಗ ನಿರಾಳ. ಜಿಂಕೆಗಳ ಹಿಂಡು ಕಂಡಿದ್ದು ಹೀಗೆ.

Green Bandipura: ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ಹೀಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಛಾಯಾಗ್ರಾಹಕ ರಘು ಕ್ಲಿಕ್ಕಿಸಿದ ಕ್ಷಣಗಳು

Sunday, June 16, 2024

ಚಾಮರಾಜನಗರ ಜಿಲ್ಲೆಯ ಬಿಆರ್‌ ಟಿ( BRT )ಯ ಯಳಂದೂರು ವನ್ಯಜೀವಿ ವಲಯದಲ್ಲಿ ನಿತ್ರಾಣಗೊಂಡಿದ್ದ ಆನೆ ಮರಿಯೊಂದು ಸಾಯುವ ಹಂತಕ್ಕೆ ತಲುಪಿತ್ತು.ಇದನ್ನು ತಾಯಿ ಕಾಯುತ್ತಲೇ ಇತ್ತು.

ನಿತ್ರಾಣಗೊಂಡಿದ್ದ ಆನೆ ಮರಿಗೆ ಮರುಜೀವ, ತಾಯಿ ಜತೆ ಸೇರ್ಪಡೆ; ಬಿಆರ್‌ಟಿ ಅರಣ್ಯ ಸಿಬ್ಬಂದಿ ಶ್ಲಾಘನೀಯ ಸೇವೆ photos

Thursday, June 13, 2024

ಭಾರತವು ಆನೆಗಳ ಗಮನಾರ್ಹ ಜನಸಂಖ್ಯೆಗೆ ನೆಲೆಯಾಗಿದೆ. ಈ ಭವ್ಯ ಜೀವಿಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ಸಂರಕ್ಷಿಸಲು, ದೇಶವು ಅಖಿಲ ಭಾರತ ಏಕಕಾಲದ ಆನೆಗಳ ಅಂದಾಜು ವಿಧಾನವನ್ನು ನಿಯಮಿತ ಮಧ್ಯಂತರದಲ್ಲಿ ನಡೆಸುತ್ತದೆ, ಸಾಮಾನ್ಯವಾಗಿ  ನಾಲ್ಕು ವರ್ಷಗಳಿಗೊಮ್ಮೆ. ಈ ಬಾರಿಯೂ ಹಲವು ರಾಜ್ಯಗಳಲ್ಲಿ ಆನೆ ಗಣತಿ ಶುರುವಾಗಿದ್ದು ಕರ್ನಾಟಕದ ನಾಗರಹೊಳೆಯಲ್ಲೂ ಗಣತಿ ಆರಂಭಗೊಂಡಿತು

Elephant Census2024: ಕಾಡಿನಲ್ಲಿ ಬೆಳ್ಳಂಬೆಳಗ್ಗೆ ಗಜಪಡೆ ದರ್ಶನ, ಕರ್ನಾಟಕದಲ್ಲಿ ಶುರುವಾಯ್ತು ಆನೆಗಣತಿ. ಹೀಗಿತ್ತು ನೋಟ

Thursday, May 23, 2024

ಮೂರನೇ ದಿನ ವಾಟರ್ ಹೋಲ್ ಡೈರೆಕ್ಟ್ ಕೌಂಟ್ (ಛಾಯಾಚಿತ್ರ ಪುರಾವೆಗಳೊಂದಿಗೆ) (ದಿನ 3) (25 ನೇ ಮೇ 2024)
ಆನೆಗಳ ಗರಿಷ್ಠ ಬಳಸುವ ನೀರಿನ ಹೊಂಡಗಳು / ಸಾಲ್ಟ್ ಲಿಕ್ಸ್ / ತೆರೆದ ಪ್ರದೇಶಗಳನ್ನು ಗುರುತಿಸಲಾಗುತ್ತದೆ. ಈ ಆಯ್ದ ಸ್ಥಳಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಆನೆಗಳಿಗೆ ನಿಗದಿತ ತಾಣ ವೀಕ್ಷಣೆಯನ್ನು ಕೈಗೊಳ್ಳಲಾಗುತ್ತದೆ. ಹಿಂಡಿನ ಗಾತ್ರ, ಆನೆಯ ವಯಸ್ಸು ಮತ್ತು ಲಿಂಗವನ್ನು ವೈಯಕ್ತಿಕವಾಗಿ ಅಥವಾ ಗುಂಪುಗಳ ಛಾಯಾಚಿತ್ರಗಳೊಂದಿಗೆ ದಾಖಲಿಸಲಾಗುತ್ತದೆ. ಆನೆಗಳ ಸಂಖ್ಯೆಯ ವಯಸ್ಸು ಮತ್ತು ಲಿಂಗ ಹಂಚಿಕೆಯನ್ನು (ಗಣತಿಸಂಖ್ಯಾಶಾಸ್ತ್ರ) ನಿರ್ಣಯಿಸಲು ಈ ದತ್ತಾಂಶವನ್ನು ಬಳಸಲಾಗುತ್ತದೆ.
ಉತ್ಪತ್ತಿಯಾದ ದತ್ತಾಂಶವನ್ನು ಸಂಗ್ರಹಿಸಬೇಕು ಮತ್ತು ಐಐಎಸ್ಸಿ ಬೆಂಗಳೂರಿನ ವಿಜ್ಞಾನಿಗಳ ಸಹಾಯದಿಂದ, ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಬಳಸಿಕೊಂಡು ವಿಶ್ಲೇಷಿಸಬೇಕು. ವಿಶ್ಲೇಷಣೆಯ ನಂತರ, ಎಲ್ಲಾ 4 ರಾಜ್ಯಗಳಿಗೆ, ಪ್ರತಿ ರಾಜ್ಯದ ಗಡಿಯಲ್ಲಿ ಬರುವ ಪ್ರದೇಶಗಳಿಗೆ ಜನಸಂಖ್ಯೆಯ ಅಂದಾಜು ಪಡೆಯಲಾಗುತ್ತದೆ.

Elephant Census 2024: ಕರ್ನಾಟಕದಲ್ಲಿ ಗಜಗಣತಿ ಮತ್ತೆ ಶುರು, ಹೇಗಿರುತ್ತದೆ ಕಾಡಲ್ಲಿ ಆನೆಗಳ ಲೆಕ್ಕ ಹಾಕುವ ಚಟುವಟಿಕೆ photos

Wednesday, May 22, 2024

ಇದು ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ಆಸುಪಾಸಿನಲ್ಲಿ ನೆಲೆಸಿರುವ ಕಾಡಾನೆ. ಇದರ ದಂತ ಮಿತಿ ಮೀರಿ ಬೆಳೆದಿತ್ತು. ದಂತದ ಸಮಸ್ಯೆಯಿಂದ ಸರಿಯಾಗಿ ಆಹಾರ ಸೇವಿಸಲು ಆಗದೇ ಬೆಳೆಯನ್ನೇ ನಾಶ ಮಾಡುತ್ತಿತ್ತು. ಇದರಿಂದ ಕೆರಳಿದ ಗುಂಡ್ಲುಪೇಟೆ ಭಾಗದ ರೈತರು ಅರಣ್ಯ ಇಲಾಖೆಗೆ ದೂರು ನೀಡಿ ಆನೆ ಉಪಟಳ ತಪ್ಪಿಸುವಂತೆ ಸೂಚಿಸಿದ್ದರು.

Forest News: ಕಾಡಾನೆ ದಂತಕ್ಕೆ ಕತ್ತರಿ, ಬಂಡೀಪುರದಲ್ಲಿ ಪ್ರಯೋಗ, ಹೇಗಿದ್ದ ಆನೆ ಹೇಗಾಯ್ತು ಗೊತ್ತಾ?

Tuesday, May 21, 2024

ಹುಲಿಯನ್ನು ಹತ್ತಿರದಿಂದಲೇ ಕಂಡ ಸಚಿವ ಈಶ್ವರ ಖಂಡ್ರೆ ಕೆಲ ಕ್ಷಣ ಖುಷಿಯೂ ಆದರು.

ನಾಗರಹೊಳೆ ಕಬಿನಿ ಕಾಡಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಿಂಬಾಲಿಸಿದ ಹುಲಿರಾಯ !

Monday, May 13, 2024

ಭಾರೀ ಗಾತ್ರದ ಪುಂಡಾನೆಯನ್ನು ಸೆರೆ ಹಿಡಿದ ನಂತರ ಕ್ರೇನ್‌ ಬಳಸಿ ಅದನ್ನು ಲಾರಿಗೆ ಹತ್ತಿಸಲಾಯಿತು.

Bandipur: ಬಂಡೀಪುರ ಅರಣ್ಯದಂಚಿನಲ್ಲಿ ಸೆರೆ ಸಿಕ್ಕ ಪುಂಡಾನೆ, ಹೇಗಿದೆ ನೋಡಿ photos

Wednesday, May 8, 2024