maha-shivaratri News, maha-shivaratri News in kannada, maha-shivaratri ಕನ್ನಡದಲ್ಲಿ ಸುದ್ದಿ, maha-shivaratri Kannada News – HT Kannada

Latest maha shivaratri Photos

ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ. ಶಿವಭಕ್ತರು ಶಿವ ನಾಮಸ್ಮರಣೆ, ಜಾಗರಣೆ, ಉಪವಾಸದ ಮೂಲಕ ಶಿವನ ಆಶೀರ್ವಾದ ಬೇಡುತ್ತಿದ್ದಾರೆ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರವಾದ ಶ್ರೀ ಕ್ಷೇತ್ರ  ಧರ್ಮಸ್ಥಳದಲ್ಲಿಯೂ ಮಹಾಶಿವರಾತ್ರಿ ಕಳೆಗಟ್ಟಿದೆ. ದೀಪಾಲಂಕರದಿಂದ ಧರ್ಮಸ್ಥಳ ಜಗಮಗ ಎನ್ನುತ್ತಿದೆ.

ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಸಂಭ್ರಮ; ವಿಶೇಷ ದೀಪಾಲಂಕಾರದಿಂದ ಶ್ರೀ ಕ್ಷೇತ್ರ ಝಗಮಗ, ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Friday, March 8, 2024

ಭಾರತ ದೇಗುಲಗಳ ನಾಡು. ಇಲ್ಲಿನ ಪ್ರತಿ ಊರಿನಲ್ಲೂ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರೆ, ಉಳಿದವು ಬಹಳ ಪುರಾತನವೆಂದೂ, ಅಥವಾ ಅಪರೂಪದ ದೇವಸ್ಥಾಗಳೆಂದೂ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ಭಾರತದ ಪ್ರತಿ ಊರಿನಲ್ಲೂ ನಾವು ಶಿವ ದೇವಾಲಯಗಳನ್ನು ಕಾಣಬಹುದು. ಅಲ್ಲೆಲ್ಲಾ ಶಿವನ ದೊಡ್ಡ ಭಕ್ತವೃಂದವನ್ನು ನೋಡಬಹುದು. ಪ್ರತಿ ವರ್ಷ ಶಿವರಾತ್ರಿಯಂದು ಶಿವನ ಭಕ್ತರು ದೇವಸ್ಥಾನಗಳಿಗೆ ಹೋಗುತ್ತಾರೆ. ಶಿವನ್ನು ಪೂಜಿಸುತ್ತಾರೆ. ಕೆಲವಡೆ ಶಿವನ್ನು ಮೂರ್ತಿ ರೂಪದಲ್ಲಿ ಪೂಜಿಸಿದರೆ ಇನ್ನು ಕಲವಡೆ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಮಧ್ಯ ಭಾರತದಲ್ಲಿ ಅನೇಕ ಪ್ರಸಿದ್ಧ ಶಿವನ ದೇವಸ್ಥಾನಗಳಿವೆ. ಜ್ಯೋತಿರ್ಲಿಂಗಗಳು, ಅತ್ಯಂತ ಪುರಾತನ ದೇವಸ್ಥಾನಗಳು ಅಲ್ಲಿವೆ. ಉಜ್ಜಯನಿಯ ಮಹಾ ಕಾಳೇಶ್ವರ, ಎಲ್ಲೋರಾದ ಕೈಲಾಸ ದೇವಾಲಯ, ಪುಣೆಯ ಭೀಮಾಶಂಕರ, ನಾಸಿಕದ ತ್ರಯಂಬಕೇಶ್ವರ ಇವೆಲ್ಲವೂ ಮಧ್ಯ ಭಾರತದಲ್ಲೇ ಇವೆ.

Mahashivratri 2024: ಭಾರತದಲ್ಲಿನ 7 ಪ್ರಸಿದ್ಧ ಶಿವ ದೇಗುಲಗಳಿವು; ಮಹಾದೇವನ ಆಶೀರ್ವಾದ ಪಡೆಯಲು ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಿ

Thursday, March 7, 2024

ಹಿಂದೂ ಧರ್ಮದಲ್ಲಿ ಹಲವು ವಿಶೇಷ ಆಚರಣೆಗಳಿವೆ. ಪ್ರತಿಯೊಂದು ದೇವರನ್ನೂ ಪ್ರತ್ಯೇಕ ಹಬ್ಬ, ಆಚರಣೆಯ ಮೂಲಕ ಪೂಜಿಸಲಾಗುತ್ತದೆ. ಮಹಾಶಿವರಾತ್ರಿ ಶಿವನಿಗೆ ಅರ್ಪಿತವಾದ ಹಬ್ಬ. ಈ ದಿನ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಅಂದು ಶಿವಭಕ್ತರು ಜಾಗರಣೆ, ಉಪವಾಸ ವೃತ ಕೈಗೊಳ್ಳುತ್ತಾರೆ. ತ್ರಿಮೂರ್ತಿಗಳಲ್ಲಿ ಶಿವನನ್ನು ಲಯಕಾರಕ ಎಂದು ಕರೆದರೂ ಬ್ರಹ್ಮಾಂಡವನ್ನು ರಕ್ಷಿಸುವವನೂ ಅವನೇ ಎಂಬ ನಂಬಿಕೆಯಿದೆ. ಮಹಾ ಶಿವರಾತ್ರಿಯಂದು ಶಿವನ್ನು ಪೂಜಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ. ಈ ದಿನ ಹಲವಾರು ಶಿವ ಭಕ್ತರು ಉಪವಾಸ ಆಚರಿಸುವುದರ ಜೊತೆಗೆ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶಿವನ ಪ್ರಸಿದ್ಧ ದೇವಸ್ಥಾನಗಳಲ್ಲಿ ಅಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ಪ್ರತಿ ರಾಜ್ಯಗಳಲ್ಲೂ ಶಿವನ ದೇವಸ್ಥಾನಗಳನ್ನು ನೋಡಬಹುದಾಗಿದೆ. ಅವುಗಳಲ್ಲಿ ಕೆಲವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಲ್ಲೆಲ್ಲಾ ಶಿವನು ತನ್ನ ವಿವಿಧ ರೂಪಗಳಲ್ಲಿ ನೆಲೆನಿಂತು ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ. ಶಿವರಾತ್ರಿಯ ಶುಭ ಸಂದರ್ಭದಲ್ಲಿ ನೀವೂ ಈ ದೇವಾಲಯಗಳ ಬಗ್ಗೆ ತಿಳಿಯಿರಿ.

Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Wednesday, March 6, 2024

ಆಂಧ್ರಪ್ರದೇಶದಲ್ಲಿರುವ ಪಂಚರಾಮ ಶಿವದೇಗುಲಗಳು ಶಿವನಿಗೆ ಅರ್ಪಿತವಾಗಿರುವ ಅತ್ಯಂತ ಹಳೆಯ ದೇಗುಲಗಳಾಗಿವೆ. ಆಂಧ್ರದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಒಂದೇ ಲಿಂಗದಿಂದ 5 ಶಿವಲಿಂಗಗಳು ಹುಟ್ಟಿಕೊಂಡವು ಎಂದು ದಂತಕಥೆಗಳು ಹೇಳುತ್ತವೆ. ರಾಕ್ಷಸ ತಾರಕಾಸುರ ಶಿವನ ಮೇಲೆ ದಾಳಿ ಮಾಡಿದಾಗ ಲಿಂಗವು 5 ತುಂಡುಗಳಾಗಿ ಒಡೆಯಿತು ಎನ್ನಲಾಗುತ್ತದೆ. ಈ 5 ತುಂಡುಗಳು ಬಿದ್ದ ಜಾಗವನ್ನು ಪಂಚರಾಮ ಶಿವಕ್ಷೇತ್ರಗಳು ಎಂದು ಕರೆಯಲಾಯಿತು. ಈ ಪಂಚಲಿಂಗ ದೇಗುಲಗಳು ಯಾವುವು, ಅವು ಎಲ್ಲಿವೆ ತಿಳಿಯಿರಿ.

Maha Shivaratri 2024: ಆಂಧ್ರಪ್ರದೇಶದ ಪಂಚರಾಮ ಶಿವ ದೇಗುಲಗಳ ಪರಿಚಯ ಇಲ್ಲಿದೆ, ಮನಸಿಗೆ ಶಾಂತಿ ನೀಡುವ ಶಿವಾಲಯಗಳಿವು

Wednesday, March 6, 2024

ನಂಬಿಕೆಗಳ ಪ್ರಕಾರ ಶಿವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ವಿಶೇಷವಾಗಿ ಈ ದಿನ ಪರಮೇಶ್ವರನನ್ನು ಪೂಜಿಸುವ ಮತ್ತು ಉಪವಾಸ ಮಾಡುವ ಭಕ್ತರು ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಈ ದಿನ ಶುಭ್ರವಾದ, ಒಗೆದ ಬಿಳಿ, ಹಳದಿ ಬಟ್ಟೆಗಳನ್ನು ಧರಿಸಬೇಕು.

Maha Shivaratri 2024: ಮಹಾ ಶಿವರಾತ್ರಿ ದಿನ ಕಪ್ಪು ಬಣ್ಣ ಧರಿಸಬೇಡಿ, ಹಾಗಾದರೆ ಪೂಜೆ ಮಾಡುವಾಗ ಯಾವ ಬಣ್ಣದ ವಸ್ತ್ರ ಧರಿಸಬೇಕು?

Tuesday, March 5, 2024

ಭಗವಾನ್ ಶಿವನು ಇಷ್ಟಾರ್ಥಗಳನ್ನು ತ್ವರಿತವಾಗಿ ಪೂರೈಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಮಾರ್ಕಂಡೇಯ ಪುರಾಣ ಮತ್ತು ಶಿವಪುರಾಣದ ಪ್ರಕಾರ ಶಿವನಿಗೆ ಮರಣವನ್ನೂ ದೂರ ಮಾಡುವ ಶಕ್ತಿಯಿದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರು ಶಿವನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ರೋಗರುಜಿನಗಳು, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

Mrityunjaya Mantra: ಮೃತ್ಯುಂಜಯ ಮಂತ್ರದ ಅರ್ಥವೇನು? ಅದನ್ನು ಎಷ್ಟು ಬಾರಿ ಪಠಿಸಬೇಕು? ಇಲ್ಲಿದೆ ಉತ್ತರ

Tuesday, March 5, 2024

ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶಿವರಾತ್ರಿ ಹಬ್ಬದಂದು ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿ ಹಿಂದೂಗಳಲ್ಲಿ ಬಹಳ ವಿಶೇಷ. ಈ ಶಿವರಾತ್ರಿಯ ದಿನ ಶಿವನನ್ನು ಹೇಗೆ ಪೂಜಿಸಬೇಕು, ಮನೆಯಲ್ಲೇ ಶಿವನನ್ನು ಪೂಜಿಸಲು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನ ತಿಳಿಯಿರಿ.

Maha Shivaratri 2024: ಮನೆಯಲ್ಲಿ ಶಿವ ಪೂಜೆ ಮಾಡುವುದು ಹೇಗೆ, ಶಿವರಾತ್ರಿಯ ದಿನ ಅನುಸರಿಸಬೇಕಾದ ಕ್ರಮಗಳ ವಿವರ ಇಲ್ಲಿದೆ

Thursday, February 29, 2024

ಕರ್ನಾಟಕದ ಎರಡನೇ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಳಗಾವಿಯು ಧಾರ್ಮಿಕ ಪರಂಪರೆಯ ತಾಣವೂ ಹೌದು. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಸುವರ್ಣ ಸೌಧ ನೋಡಲು ಬೆಳಗಾವಿಗೆ ಹೋಗುವ ಯೋಚನೆ ಇದ್ದರೆ, ಇಲ್ಲಿನ ಈ ದೇವಾಲಯಗಳನ್ನೂ ನೋಡಿ ಬನ್ನಿ. ಶಿವರಾತ್ರಿ ಸಮೀಪದಲ್ಲಿದ್ದೂ ಇಲ್ಲಿನ ಪ್ರಸಿದ್ಧ ಶಿವ ದೇಗುಲಗಳ ಬಗ್ಗೆಯೂ ಇಲ್ಲಿದೆ ಪರಿಚಯ.

Temples in Belgaum: ಶಿವರಾತ್ರಿ ಸಮಯದಲ್ಲಿ ಬೆಳಗಾವಿ ಕಡೆ ಹೊಂಟಿದ್ರೆ ಈ ದೇವಸ್ಥಾನಗಳನ್ನೂ ತಪ್ಪದೇ ನೋಡಿ ಬನ್ನಿ

Tuesday, February 27, 2024

ಶಿವರಾತ್ರಿ ಸಮಯದಲ್ಲಿ ಶಿವನ ದೇಗುಲಗಳಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದೂಗಳದ್ದು. ಭಾರತದಲ್ಲಿ ಹಲವು ಪ್ರಸಿದ್ಧ ಶಿವಾಲಯಗಳಿವೆ. ಈ ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದ ಪ್ರಸಿದ್ಧ ಶಿವನ ದೇಗುಲ ಬಗ್ಗೆ ಇಲ್ಲಿದೆ ಮಾಹಿತಿ.

Maha Shivaratri 2024: ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದಲ್ಲಿನ ಪ್ರಸಿದ್ಧ ಶಿವಾಲಯಗಳ ಬಗ್ಗೆ ತಿಳಿಯಿರಿ

Monday, February 26, 2024

ಮಹಾಶಿವರಾತ್ರಿ ಹಬ್ಬ ಹತ್ತಿರದಲ್ಲೇ ಇದೆ. ಈ ವರ್ಷ ಮಾರ್ಚ್‌ 8 ರಂದು ಮಹಾರಾತ್ರಿ ಆಚರಿಸಲಾಗುತ್ತದೆ. ಈ ಹೊತ್ತಿನಲ್ಲಿ ಶಿವನಿಗೆ ಪ್ರಿಯವಾದ ರುದ್ರಾಕ್ಷಿ ಕುರಿತು ನೀವು ತಿಳಿಯಬೇಕಾದ ಒಂದಿಷ್ಟು ವಿಚಾರಗಳು ಇಲ್ಲಿವೆ.

Rudraksha: ರುದ್ರಾಕ್ಷಿ ಧರಿಸುವುದರಿಂದಾಗುವ ಪ್ರಯೋಜನಗಳೇನು, ಸಿಟ್ಟಿನ ನಿರ್ವಹಣೆಯಲ್ಲಿ ರುದ್ರಾಕ್ಷಿಯ ಪಾತ್ರವೇನು? ಇಲ್ಲಿದೆ ಮಾಹಿತಿ

Monday, February 26, 2024

ಹಬ್ಬ ಹರಿದಿನಗಳಂದು ಆತ್ಮೀಯರಿಗೆ ಶುಭ ಕೋರುವುದು ಸಾಮಾನ್ಯ. ಮಹಾಶಿವರಾತ್ರಿಯಂದು ನಿಮ್ಮ ಆತ್ಮೀಯರಿಗೆ ಈ ಪೋಸ್ಟರ್‌ಗಳನ್ನು ಕಳಿಸುವ ಮೂಲಕ ಶುಭ ಹಾರೈಸಬಹುದು.

Maha Shivratri 2024; ಓಂ ನಮ: ಶಿವಾಯ; ಮಹಾ ಶಿವರಾತ್ರಿಗೆ ನಿಮ್ಮ ಆತ್ಮೀಯರಿಗೆ ಶುಭ ಹಾರೈಸಲು ಇಲ್ಲಿದೆ ಕೆಲವೊಂದು ವಿಶಸ್‌ ಪೋಸ್ಟರ್‌ಗಳು

Thursday, February 22, 2024