ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಚಿತ್ರದ ಟೀಸರ್‌ ಬಿಡುಗಡೆ; ಇಲ್ಲಿದೆ ಆಕ್ಷನ್‌ ಪ್ಯಾಕ್ಡ್‌ ಝಲಕ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಚಿತ್ರದ ಟೀಸರ್‌ ಬಿಡುಗಡೆ; ಇಲ್ಲಿದೆ ಆಕ್ಷನ್‌ ಪ್ಯಾಕ್ಡ್‌ ಝಲಕ್‌

ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಚಿತ್ರದ ಟೀಸರ್‌ ಬಿಡುಗಡೆ; ಇಲ್ಲಿದೆ ಆಕ್ಷನ್‌ ಪ್ಯಾಕ್ಡ್‌ ಝಲಕ್‌

Dec 28, 2024 08:54 PM IST Manjunath B Kotagunasi
twitter
Dec 28, 2024 08:54 PM IST

  • ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಬಹು ನಿರೀಕ್ಷಿತ ಸಿಕಂದರ್‌ ಸಿನಿಮಾದ ಟೀಸರ್‌ ಕೊನೆಗೂ ಬಿಡುಗಡೆ ಆಗಿದೆ. 2023ರಲ್ಲಿ ಟೈಗರ್‌ 3 ಸಿನಿಮಾ ಮೂಲಕ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಸಲ್ಮಾನ್‌ ಖಾನ್‌, ಈ ವರ್ಷ ಚಿತ್ರಮಂದಿರಗಳಲ್ಲಿ ದರ್ಶನ ತೋರಿಸಲಿಲ್ಲ. ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಪೂರ್ಣ ಪ್ರಮಾಣದ ನಾಯಕನಾಗಿ ಎದುರಾಗಿಲ್ಲ. ಇದೀಗ ಸಿಕಂದರ್‌ ಮೂಲಕ ಅವರ ಆಗಮನವಾಗಿದೆ. ಚಿತ್ರದ ಸಣ್ಣ ಝಲಕ್‌ ಎಂಬಂತೆ ಟೀಸರ್‌ ಹೊರಬಂದಿದೆ. ತಮಿಳಿನ ಖ್ಯಾತ ನಿರ್ದೇಶಕ ಎಆರ್‌ ಮುರುಗದಾಸ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಸಿಕಂದರ್‌ ಸಿನಿಮಾವನ್ನು ಸಾಜಿದ್‌ ನಾಡಿಯಾಡ್‌ವಾಲಾ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ.

More