Abhishek Ambareesh : ಕಾವೇರಿ ಹೋರಾಟದಲ್ಲಿ ಸದಾ ರೈತರೊಂದಿಗಿರುವೆ ; ಅಭಿಷೇಕ್ ಅಂಬರೀಶ್
ಕಾವೇರಿ ನೀರಿಗಾಗಿ ರೈತರು ಹಾಗೂ ಮಂಡ್ಯ ಜನರು ನಡೆಸುತ್ತಿರುವ ಹೋರಾಟಕ್ಕೆ ಅಭಿಷೇಕ್ ಅಂಬರೀಶ್ ಧ್ವನಿಯಾಗಿದ್ದಾರೆ. ಕಾವೇರಿ ನೀರನ್ನ ನಂಬಿ ನಾವೆಲ್ಲಾ ಇದ್ದೇವೆ. ನನ್ನಮ್ಮ ಸಂಸದೆ, ನನ್ನಪ್ಪ ಸೂಪರ್ ಸ್ಟಾರ್ ಅಂತ ನಾನು ಇಲ್ಲಿಗೆ ಬಂದಿಲ್ಲ.. ಕಾವೇರಿ ನೀರನ್ನ ಕುಡಿದು ಬೆಳೆದ ನಾವು ಅದನ್ನ ಕಾಪಾಡಿಕೊಳ್ಳಬೇಕು. ಸಮಸ್ಯೆ ಬಗೆಹರಿಯುವವರೆಗೂ ನಾನೂ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದು ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.