Nepal Bus Tragedy: ನೇಪಾಳದ ಕಠ್ಮಂಡು ಬಳಿ ನದಿಗೆ ಉರುಳಿದ ಭಾರತಕ್ಕೆ ಸೇರಿದ ಬಸ್; ಹಲವು ಪ್ರಯಾಣಿಕರ ಸಾವು VIDEO
- ನೇಪಾಳದಲ್ಲಿ ಭೀಕರ ಬಸ್ ದುರಂತ ಸಂಭವಿಸಿದ್ದು, 14ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಠ್ಮಂಡುವಿನಿಂದ ಪೋಖ್ರಾ ಕಡೆಗೆ ಸಾಗುತ್ತಿದ್ದ ಉತ್ತರ ಪ್ರದೇಶ ನೋಂದಣಿಯ ಬಸ್ ನಿಯಂತ್ರಣ ತಪ್ಪಿ ಕಮರಿಗುರುಳಿದೆ. ಬಸ್ ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಇದ್ದರೆನ್ನಲಾಗಿದ್ದು, ಈಗಾಗಲೇ ಕೆಲವು ಮೃತದೇಹಗಳು ಪತ್ತೆಯಾಗಿವೆ. ಬಸ್ ಬಿದ್ದಿರುವ ಮರ್ಸ್ಯಾಂಗ್ಡಿ ನದಿ ರಭಸವಾಗಿರುವುದರಿಂದ ಕಾರ್ಯಾಚರಣೆಗೆ ಅಡಚಣೆಯುಂಟಾಗಿದೆ.