ಕ್ಯಾನ್‌ನಲ್ಲಿದ್ದ ಪೆಟ್ರೋಲ್ ಲೀಕ್; ವಿಚಾರ ಗೊತ್ತಿಲ್ಲದೆ ಬೀಡಿಗೆ ಬೆಂಕಿ ಕಡ್ಡಿ ಗೀರಿ ಎಸೆದಾಗ ಅನಾಹುತ! VIDEO
- ಆಂಧ್ರ ಪ್ರದೇಶದ ಅನಂತಪುರದಲ್ಲಿ ಆಕಸ್ಮಿಕವಾಗಿ ತಲುಗಿದ ಬೆಂಕಿಗೆ ದ್ವಿಚಕ್ರವಾಹನಗಳು ಹಾಗೂ ಅಂಗಡಿ ಭಸ್ಮವಾಗಿವೆ. ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಪೆಟ್ರೋಲ್ ಖರೀದಿಸಿ ಕ್ಯಾನ್ ನಲ್ಲಿ ಇಟ್ಟುಕೊಂಡು ಸ್ಕೂಟರ್ ನಲ್ಲಿ ಸಾಗಿಸಿದ್ದಾರೆ. ಆದರೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಪೆಟ್ರೋಲ್ ಸೋರಿ ರಸ್ತೆಗೆ ಚೆಲ್ಲಿದೆ. ಇದರ ಅಪಾಯದ ಅರಿವಿಲ್ಲದೆ, ಇನ್ನೊಬ್ಬ ವ್ಯಕ್ತಿ ಬೀಡಿ ಹಚ್ಚಿ ಬೆಂಕಿಕಡ್ಡಿಯನ್ನು ಪೆಟ್ರೋಲ್ ಮೇಲೆ ಎಸೆದಿದ್ದಾನೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ರಸ್ತೆ ಬದಿಯ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ತಗುಲಿದೆ