ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ; ಭಕ್ತಿಯಲ್ಲಿ ಮಿಂದೆದ್ದ ಭಕ್ತರು
- ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಆಗಸ್ಟ್ 18ರಿಂದ ಆರಂಭವಾದ ಆರಾಧನಾ ಮಹೋತ್ಸವ ಆಗಸ್ಟ್ 24ರವರೆಗೆ ನಡೆಯಲಿದೆ. ಮಂತ್ರಾಲಯದಲ್ಲಿ ಸತತ 7 ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವವನ್ನ ಸಾವಿರಾರು ಭಕ್ತರು ಕಣ್ದುಂಬಿಕೊಂಡಿದ್ದಾರೆ.