ತಿರುಪತಿ ಲಡ್ಡು ಪ್ರಸಾದ ವಿವಾದ; ತಿರುಮಲ ದೇಗುಲದಲ್ಲಿ ಶುರುವಾಗಿದೆ ಮಹಾ ಶಾಂತಿ ಹೋಮ, ಶುದ್ಧೀಕರಣ ಪ್ರಕ್ರಿಯೆ- ವಿಡಿಯೋ
ತಿರುಮಲ: ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದಕ್ಕೆ ಗೋಮಾಂಸದ ಕೊಬ್ಬು ಹಾಗೂ ಮೀನಿನೆಣ್ಣೆ ಬಳಸಿದ ಬಗ್ಗೆ ವಿವಾದ ಭುಗಿಲೆದ್ದ ಬೆನ್ನಲ್ಲೇ, ಇದೀಗ ದೇವಾಲಯದ ಆಡಳಿತ ಮಂಡಳಿಯಿಂದ ಶುದ್ಧೀಕರಣ ಕಾರ್ಯ ಶುರುವಾಗಿದೆ. ಪ್ರಾಯಶ್ಚಿತ್ತ ಹೋಮವೂ ನಡೆಯುತ್ತಿದೆ. ಟಿಟಿಡಿ ಟ್ರಸ್ಟ್ ನ ಮೂಲಕ ಮಹಾಶಾಂತಿ ಹೋಮವನ್ನ ಕೈಗೊಳ್ಳಲಾಗಿದ್ದು, ಆಗಮಿಕರ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾಜಿ ಸಿಎಂ ಜಗಮೋಹನ್ ರೆಡ್ಡಿ ಅಧಿಕಾರ ಅವಧಿಯಲ್ಲಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಸೇರಿಸಿದ ತುಪ್ಪ ಬಳಿಸಿದ ಆರೋಪ ವ್ಯಕ್ತವಾಗಿದ್ದು, ಲ್ಯಾಬ್ ವರದಿ ಕೂಡ ಅದನ್ನು ದೃಢೀಕರಿಸಿದ್ದರಿಂದ ರಾಜಕೀಯ ಸಂಚಲನ ಸೃಷ್ಟಿಯಾಗಿದೆ.