ಅಸ್ಸಾಂ ದಿಮಾ ಹಸಾವೊ ಗಣಿ ದುರಂತ; ಕಾರ್ಮಿಕರನ್ನು ರಕ್ಷಿಸಲು ಮುಂದುವರೆದ ಕಾರ್ಯಾಚರಣೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಸ್ಸಾಂ ದಿಮಾ ಹಸಾವೊ ಗಣಿ ದುರಂತ; ಕಾರ್ಮಿಕರನ್ನು ರಕ್ಷಿಸಲು ಮುಂದುವರೆದ ಕಾರ್ಯಾಚರಣೆ

ಅಸ್ಸಾಂ ದಿಮಾ ಹಸಾವೊ ಗಣಿ ದುರಂತ; ಕಾರ್ಮಿಕರನ್ನು ರಕ್ಷಿಸಲು ಮುಂದುವರೆದ ಕಾರ್ಯಾಚರಣೆ

Jan 10, 2025 01:53 PM IST Rakshitha Sowmya
twitter
Jan 10, 2025 01:53 PM IST

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯ ಮುಂದುವರೆದಿದೆ. ಕಲ್ಲಿದ್ದಲು ಕ್ವಾರಿಯಲ್ಲಿ ಸೋಮವಾರ ಹಠಾತ್ ನೀರು ಹರಿದ ಪರಿಣಾಮ, ಕಾರ್ಮಿಕರು ಹೊರ ಬರಲಾರದೆ ಒಳಗೇ ಸಿಲುಕಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ನೌಕಾಪಡೆ, ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. 9 ಕಾರ್ಮಿಕರ ಪೈಕಿ, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ನೇಪಾಳದ ಉದಯಪುರ ಜಿಲ್ಲೆಯ ಗಂಗಾ ಬಹದ್ದೂರ್ ಶ್ರೇಷ್ಟೋ ಎಂಬ ಕಾರ್ಮಿಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿತ್ತು. ಉಳಿದ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.

More