Ayodhya Ram Mandir: ಮಗನನ್ನು ಇಡೀ ದೇಶವೇ ತಿರುಗಿ ನೋಡುತ್ತಿದೆ; ಸಂತಸ ಹಂಚಿಕೊಂಡ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ತಾಯಿ
Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ದೇವಸ್ಥಾನ ಸಂಪೂರ್ಣವಾಗುವ ಮುನ್ನ ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ದತೆಗಳೂ ಆರಂಭವಾಗಿದೆ. ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಮೈಸೂರಿನ ಅರುಣ್ ಯೋಗಿ ರಾಜ್ ಕೆತ್ತಿದ ಮೂರ್ತಿ ಫೈನಲ್ ಆಗಿರುವ ಬಗ್ಗೆ ಇಡೀ ರಾಜ್ಯಕ್ಕೆ ಸಂತೋಷವಿದೆ. ಇದೇ ವಿಚಾರವಾಗಿ ಅವರ ಕುಟುಂಬದವರೂ ಸಂತೋಷ ವ್ಯಕಪಡಿಸಿದ್ದಾರೆ. ಅರುಣ್ ಅವರ ತಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಗನ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ನನ್ನ ಮಗನನ್ನು ಇಂದು ಇಡೀ ದೇಶವೇ ತಿರುಗಿ ನೋಡುತ್ತಿದೆ. ವಿಗ್ರಹ ದರ್ಶನಕ್ಕೆ ಅಯೋಧ್ಯೆಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ, ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.