Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲು ಕಾಯುತ್ತಿದೆ ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ವಿಗ್ರಹ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲು ಕಾಯುತ್ತಿದೆ ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ವಿಗ್ರಹ

Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲು ಕಾಯುತ್ತಿದೆ ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ವಿಗ್ರಹ

Published Jan 19, 2024 01:11 PM IST HT Kannada Desk
twitter
Published Jan 19, 2024 01:11 PM IST

Ayodhya Ram Mandir: ಒಂದೆಡೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂಭ್ರಮ ಕಳೆಗಟ್ಟಿದ್ದರೆ ಇತ್ತ ಮೈಸೂರಿನ ಜನತೆ ಕೂಡಾ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಮೈಸೂರು ಶಿಲ್ಪಿ ಅರುಣ್‌ ಯೋಗಿರಾಜ್‌. ಅವರು ಕೆತ್ತಿರುವ ಬಾಲರಾಮನ ವಿಗ್ರಹ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲು ಆಯ್ಕೆಯಾಗಿದೆ. ರಾಮಮಂದಿರ ಸಮಿತಿ ಈ ವಿಗ್ರಹವನ್ನು ಆಯ್ಕೆ ಮಾಡಿದೆ. ಅರುಣ್‌ ಯೋಗಿರಾಜ್‌ ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ವ್ಯಕ್ತಿ. ಅರುಣ್‌ ಮನೆಯನ್ನು ಹೊಕ್ಕಿದರೆ ಅಲ್ಲಿ ಕೆತ್ತನೆಗೆ ನಿಂತಿರುವ ಕಲ್ಲುಗಳು, ಸುಂದರವಾದ ಮೂರ್ತಿಗಳು, ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಅನೇಕ ವಿಗ್ರಹಗಳು ಕಾಣಸಿಗುತ್ತವೆ.

More