ಪತಿ ವೆಂಕಟ ದತ್ತ ಸಾಯಿ ಜೊತೆ ತಿರುಪತಿಗೆ ತೆರಳಿ ಶ್ರೀನಿವಾಸನ ದರ್ಶನ ಪಡೆದ ಬ್ಯಾಡ್ಮೆಂಟರ್‌ ತಾರೆ ಪಿವಿ ಸಿಂಧು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪತಿ ವೆಂಕಟ ದತ್ತ ಸಾಯಿ ಜೊತೆ ತಿರುಪತಿಗೆ ತೆರಳಿ ಶ್ರೀನಿವಾಸನ ದರ್ಶನ ಪಡೆದ ಬ್ಯಾಡ್ಮೆಂಟರ್‌ ತಾರೆ ಪಿವಿ ಸಿಂಧು

ಪತಿ ವೆಂಕಟ ದತ್ತ ಸಾಯಿ ಜೊತೆ ತಿರುಪತಿಗೆ ತೆರಳಿ ಶ್ರೀನಿವಾಸನ ದರ್ಶನ ಪಡೆದ ಬ್ಯಾಡ್ಮೆಂಟರ್‌ ತಾರೆ ಪಿವಿ ಸಿಂಧು

Dec 27, 2024 04:38 PM IST Rakshitha Sowmya
twitter
Dec 27, 2024 04:38 PM IST

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು, ಪತಿ ಜೊತೆ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ವೆಂಕಟ್ ದತ್ತ ಸಾಯಿ ಅವರನ್ನು, ಸಿಂಧು ಪ್ರೀತಿಸಿ ಮದುವೆ ಆಗಿದ್ದಾರೆ. ಮದುವೆ ಫಿಕ್ಸ್‌ ಆಗುತ್ತಿದ್ದಂತೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸಿಂಧು ತಮ್ಮ ಲವ್‌ ಸ್ಟೋರಿ ಬಗ್ಗೆ ಮಾತನಾಡಿದ್ದರು. ವೆಂಕಟ್‌ ದತ್ತ, ಕೂಡಾ ಹೈದರಾಬಾದ್‌ನವರಾಗಿದ್ದು ಸದ್ಯಕ್ಕೆ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್‌ 22 ರಂದು ಸಿಂಧು ಹಾಗೂ ವೆಂಕಟ್‌ ದತ್ತ ಉದಯಪುರದಲ್ಲಿ ಮದುವೆ ಆಗಿದ್ದರು. 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆದಿತ್ತು. ಶುಕ್ರವಾರ, ನವ ದಂಪತಿ ತಿರುಪತಿಗೆ ತೆರಳಿ ಶ್ರೀನಿವಾಸನ ದರ್ಶನ ಪಡೆದಿದ್ದಾರೆ. ಪ್ರತಿ ವರ್ಷವೂ ನಾನು ಇಲ್ಲಿಗೆ ಬರುತ್ತಿದ್ದೆ, ಆದರೆ ಈ ಬಾರಿ ಪತಿಯೊಂದಿಗೆ ಬಂದಿರುವುದು ವಿಶೇಷ ಎಂದು ಸಿಂಧು ಹೇಳಿದ್ದಾರೆ.

More