BJP Rath Yatre : ಬಿಜೆಪಿಯ ರಥ ಯಾತ್ರೆಯ ಹೈಟೆಕ್ ಬಸ್ ; ಇದರೊಳಗೆ ಟಿವಿ, ಫ್ರಿಡ್ಜ್, ಮೀಟೀಂಗ್ ಸೆಟ್, ಟಾಯ್ಲೆಟ್..!
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳನ್ನ ಜೆಡಿಎಸ್ ಜೊತೆಗೂಡಿ ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ರಾಜ್ಯದ ಉದ್ದಗಲಕ್ಕೂ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದು ಇದಕ್ಕಾಗಿ ಕಳೆದ ವಿಧಾನಸಭೆ ಚುನಾವಣೆಯಂತೆ ರಥಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಥಯಾತ್ರೆಯ ಈ ವಿಶೇಷ ಬಸ್ ಹೈಟೆಕ್ ವ್ಯವಸ್ಥೆಗಳನ್ನ ಹೊಂದಿದ್ದು, ಐಷಾರಾಮಿ ಹೊಟೇಲ್ ನ ಅನುಭವ ನೀಡುತ್ತದೆ. ಈ ಬಸ್ ಒಳಗಡೆ 7 ಕುಷನ್ ಸೀಟುಗಳಿವೆ. ಫ್ರಿಡ್ಜ್, ಹೋಂ ಥಿಯೇಟರ್, 32 ಇಂಚಿನ ಟಿವಿ, ಚಾಲಕನ ಜತೆ ಮಾತನಾಡಲು ಇಂಟರ್‌ಕಾಮ್ ವ್ಯವಸ್ಥೆ ಇದೆ. ಬಸ್ ನಲ್ಲ ಜನರೇಟರ್ ಇದೆ. ಜೊತೆಗೆ ಆಡಿಯೋ ಸಿಸ್ಟಂ, ಕ್ಯಾಮೆರಾ, ಹೊರಮುಖವಾಗಿ ಎಲ್‍ಇಡಿ ಡಿಸ್‍ಪ್ಲೇ ವ್ಯವಸ್ಥೆ ಇದೆ. ನಾಯಕರ ಭಾಷಣಕ್ಕೆ ಪೂರಕವಾಗಿ ಪ್ರಬಲ ಮೈಕ್ ಗಳನ್ನ ಅಳವಡಿಸಲಾಗಿದೆ.