Shirur landslide: ಶಿರೂರು ಗುಡ್ಡ ಕುಸಿತದಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯದ ಬಗ್ಗೆ ರೊಚ್ಚಿಗೆದ್ದ ಹೆಚ್ ಡಿ ದೇವೇಗೌಡ
- Shirur landslide: ಶಿರೂರು ಗುಡ್ಡ ಕುಸಿತ ಮತ್ತು ಕರ್ನಾಟಕದ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ ವಹಿಸಿದೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭೆ ಸದಸ್ಯ ಹೆಚ್‍ಡಿ ದೇವೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿದ ಹೆಚ್ ಡಿ ದೇವೇಗೌಡ, ಕೇಂದ್ರ ಮಂತ್ರಿಯಾಗಿ ಎಚ್‍ಡಿ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಘಟನೆ ನಡೆದ ಆರು ದಿನಗಳ ಬಳಿಕ ಕರ್ನಾಟಕದ ಪ್ರತಿನಿಧಿಗಳು ಅಲ್ಲಿ ಭೇಟಿ ಕೊಟ್ಟಿದ್ದಾರೆ. ಗುಡ್ಡ ಕುಸಿತದ ತೆರವು ಕಾರ್ಯಾಚರಣೆಯನ್ನ ನಿರ್ವಹಿಸುವ ಬಗ್ಗೆ ಕೂಡ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸಕಾಲದಲ್ಲಿ ಸ್ಪಂದಿಸಿ ತುರ್ತು ಅಗತ್ಯತೆಗಳನ್ನು ಪೂರೈಸಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳನ್ನು ಹೆಚ್ ಡಿ ದೇವೇಗೌಡರು ಸಲ್ಲಿಸಿದ್ದಾರೆ.