ಬೆಂಗಳೂರಲ್ಲಿರುವ ಎಚ್‌ಎಂಟಿಯಂತಹ ಕಾರ್ಖಾನೆಯ ಇಂದಿನ ಸ್ಥಿತಿಗೆ ದುಃಖ ಇಲ್ವ, ಸ್ವಾಭಿಮಾನ ಇಲ್ವ, ಸರ್ಕಾರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ತರಾಟೆ
ಬೆಂಗಳೂರು: ಕರ್ನಾಟಕದ, ಕನ್ನಡಿಗರ ಅಸ್ಮಿತೆಯಾಗಿದ್ದ ಎಚ್‌ಎಂಟಿ ಸಂಸ್ಥೆಈ ಸ್ಥಿತಿಗೆ ಬಂದಿದೆ ಎಂಬುದು ದುಃಖದ ವಿಚಾರ ಅಲ್ವ, ಅದರ ಪುನಶ್ಚೇತನಕ್ಕೆ ಪ್ರಯತ್ನಿಸುವಷ್ಟು ಸ್ವಾಭಿಮಾನ ಇಲ್ಲದಾಯಿತೇ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರದ ಬೆಂಬಲವಿಲ್ಲದೆ, ಸರಿಯಾದ ನಿರ್ವಹಣೆ ಇಲ್ಲದೆ ಇದ್ದುದೇ ಎಚ್‌ಎಂಟಿಯ ಇಂದಿನ ದುಸ್ಥಿತಿಗೆ ಕಾರಣ. ಕೈಗಾರಿಕಾ ಸಚಿವನಾಗಿ ಇದರ ಪುನಶ್ಚೇತನ ತನ್ನ ಹೊಣೆಗಾರಿಕೆ. ರಾಜ್ಯ ಸರ್ಕಾರ ಇನ್ನಾದರೂ ದ್ವೇಷದ ರಾಜಕಾರಣ ಬಿಟ್ಟು ರಾಜ್ಯದ ಪ್ರಗತಿ, ಅಭಿವೃದ್ಧಿಗೆ ಗಮನಹರಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.