ಹೆಚ್‌ಎಂಪಿ ಮಾರಣಾಂತಿಕ ವೈರಸ್‌ ಅಲ್ಲ ಭಯ ಬೇಡ, ಆದರೆ ಜಾಗರೂಕರಾಗಿರಿ: ಸಚಿವ ದಿನೇಶ್‌ ಗುಂಡೂರಾವ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹೆಚ್‌ಎಂಪಿ ಮಾರಣಾಂತಿಕ ವೈರಸ್‌ ಅಲ್ಲ ಭಯ ಬೇಡ, ಆದರೆ ಜಾಗರೂಕರಾಗಿರಿ: ಸಚಿವ ದಿನೇಶ್‌ ಗುಂಡೂರಾವ್‌

ಹೆಚ್‌ಎಂಪಿ ಮಾರಣಾಂತಿಕ ವೈರಸ್‌ ಅಲ್ಲ ಭಯ ಬೇಡ, ಆದರೆ ಜಾಗರೂಕರಾಗಿರಿ: ಸಚಿವ ದಿನೇಶ್‌ ಗುಂಡೂರಾವ್‌

Jan 06, 2025 08:51 PM IST Rakshitha Sowmya
twitter
Jan 06, 2025 08:51 PM IST

HMPV: ಚೀನಾದಲ್ಲಿ ಹೊಸ ವೈರಸ್‌ ಪತ್ತೆ ಆಗಿರುವ ವಿಚಾರ ಸುದ್ದಿಯಾಗುತ್ತಿದೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೂ ವೈರಸ್‌ ದೃಢವಾಗಿದ್ದು ಮತ್ತೆ ಕೊರೋನಾ ರೀತಿಯ ಭೀತಿ ಸೃಷ್ಟಿಯಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಈ ವಿಚಾರವಾಗಿ ಸಭೆ ನಡೆಸಿ ಮಾಹಿತಿ ನೀಡಿ, ಯಾರೂ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ. ನಮ್ಮ ದೇಶದಲ್ಲಿ ಹೆಚ್‌ಎಂಪಿ ಈಗ ಪತ್ತೆಯಾಗಿದೆ ಎನ್ನುವ ವರದಿ ಸರಿ ಇಲ್ಲ, ಏಕೆಂದರೆ ಹೆಚ್‌ಎಂಪಿ ನಮ್ಮ ದೇಶದಲ್ಲಿ ಸಹಜವಾಗಿ ಇರುವಂಥದ್ದು, ಉಸಿರಾಟಕ್ಕೆ ಸಂಬಂಧಿಸಿದ ವೈರಸ್‌ಗಳಲ್ಲಿ ಹೆಚ್‌ಎಂಪಿ ಕೂಡಾ ಒಂದು. ಇದು ಹೊಸ ವೈರಸ್‌ ಅಲ್ಲ, ಹಾನಿಕಾರಕ ವೈರಸ್‌ ಕೂಡಾ ಅಲ್ಲ, ಮಾರಣಾಂತಿಕ ಎಂದು ಹೇಳಲೂ ಸಾಧ್ಯವಿಲ್ಲ. ಮೊದಲ ಬಾರಿಗೆ 2001ರಲ್ಲಿ ನೆದರ್ಲೆಂಡ್‌ನಲ್ಲಿ ಪತ್ತೆ ಹಚ್ಚಲಾಗಿತ್ತು. ಆದ್ದರಿಂದ ಭಯಪಡುವ ಅಗತ್ಯವಿಲ್ಲ, ಕೇಂದ್ರ ಸರ್ಕಾರವೂ ನಮ್ಮೊಂದಿಗೆ ಸಂಪರ್ಕದಲ್ಲಿದೆ, ಎಚ್ಚರಿಕೆಯಿಂದ ಇರಬೇಕೇ ಹೊರತು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

More