ಸ್ಟ್ಯಾಂಡಿ ಬಚ್ಚಿಟ್ಟು ಕಳ್ಳಾಟ, ಕನ್ನಡದ ನಾ ನಿನ್ನ ಬಿಡಲಾರೆ ಚಿತ್ರಕ್ಕೆ ಮಲ್ಟಿಫ್ಲೆಕ್ಸ್‌ಗಳಿಂದ ಅನ್ಯಾಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸ್ಟ್ಯಾಂಡಿ ಬಚ್ಚಿಟ್ಟು ಕಳ್ಳಾಟ, ಕನ್ನಡದ ನಾ ನಿನ್ನ ಬಿಡಲಾರೆ ಚಿತ್ರಕ್ಕೆ ಮಲ್ಟಿಫ್ಲೆಕ್ಸ್‌ಗಳಿಂದ ಅನ್ಯಾಯ

ಸ್ಟ್ಯಾಂಡಿ ಬಚ್ಚಿಟ್ಟು ಕಳ್ಳಾಟ, ಕನ್ನಡದ ನಾ ನಿನ್ನ ಬಿಡಲಾರೆ ಚಿತ್ರಕ್ಕೆ ಮಲ್ಟಿಫ್ಲೆಕ್ಸ್‌ಗಳಿಂದ ಅನ್ಯಾಯ

Published Dec 01, 2024 10:58 AM IST Manjunath B Kotagunasi
twitter
Published Dec 01, 2024 10:58 AM IST

  • ‘ನಾ ನಿನ್ನ ಬಿಡಲಾರೆ’ ಚಿತ್ರವು ಶುಕ್ರವಾರ (ನ.29) ಬಿಡುಗಡೆಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಚಿತ್ರಕ್ಕೆ ಮಲ್ಟಿಫ್ಲೆಕ್ಸ್‌ಗಳಿಂದ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗುತ್ತಿದೆ ಎಂದು ನಾಯಕಿ ಮತ್ತು ಕಾರ್ಯಕಾರಿ ನಿರ್ಮಾಪಕಿ ಭಾರತಿ ಅಂಬಾಲಿ ಸಿಡಿದೆದ್ದಿದ್ದಾರೆ. ಶನಿವಾರ ಚಿತ್ರತಂಡದವರು ಕೆಲವು ಮೈಸೂರು ಮತ್ತು ಬೆಂಗಳೂರಿನ ಕೆಲವು ಮಲ್ಟಿಫ್ಲೆಕ್ಸ್‌ಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರಕ್ಕೆಂದು ಕಳಿಸಿಕೊಟ್ಟ ಸ್ಟಾಂಡಿಗಳು ಪತ್ತೆಯೇ ಇಲ್ಲ. ಮುಂದಿನ ವಾರ ಬಿಡುಗಡೆಯಾಗುತ್ತಿರುವ ತೆಲುಗು ಚಿತ್ರ ‘ಪುಷ್ಪ 2’ದ ಸ್ಟಾಂಡಿಗಳನ್ನು ಮುಂದಿಟ್ಟು ಪ್ರಚಾರಕ್ಕೆ ಅನುವು ಮಾಡಿಕೊಟ್ಟರೆ, ಕನ್ನಡ ಚಿತ್ರಗಳ ಪ್ರಚಾರವೇ ಆಗುತ್ತಿಲ್ಲ. ಇದರಿಂದ ಚಿತ್ರದ ಬಗ್ಗೆ ಮಾಹಿತಿ ಇಲ್ಲದವರು, ಬೇರೆ ಚಿತ್ರಗಳಿಗೆ ಟಿಕೆಟ್‍ ಖರೀದಿಸಿ ನೋಡಿದ್ದಾರಂತೆ. ಇದರಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಭಾರತಿ ಅಂಬಾಲಿ ಆರೋಪಿಸಿದ್ದಾರೆ.

More