ಅಣ್ಣಾಮಲೈ ಅಣಕಿಸಿದ ಲಾಯರ್‌ ಜಗದೀಶ್‌; ಚಾಟಿ ಏಟು ರೀ ಕ್ರಿಯೇಟ್‌ ಮಾಡಿದ ಬಿಗ್‌ಬಾಸ್‌ 11 ಮಾಜಿ ಸ್ಪರ್ಧಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಣ್ಣಾಮಲೈ ಅಣಕಿಸಿದ ಲಾಯರ್‌ ಜಗದೀಶ್‌; ಚಾಟಿ ಏಟು ರೀ ಕ್ರಿಯೇಟ್‌ ಮಾಡಿದ ಬಿಗ್‌ಬಾಸ್‌ 11 ಮಾಜಿ ಸ್ಪರ್ಧಿ

ಅಣ್ಣಾಮಲೈ ಅಣಕಿಸಿದ ಲಾಯರ್‌ ಜಗದೀಶ್‌; ಚಾಟಿ ಏಟು ರೀ ಕ್ರಿಯೇಟ್‌ ಮಾಡಿದ ಬಿಗ್‌ಬಾಸ್‌ 11 ಮಾಜಿ ಸ್ಪರ್ಧಿ

Dec 30, 2024 07:35 PM IST Rakshitha Sowmya
twitter
Dec 30, 2024 07:35 PM IST

ಕಳೆದ 3 ದಿನಗಳಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಭಾರೀ ಸುದ್ದಿಯಲ್ಲಿದ್ದಾರೆ. ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದರೆ ನ್ಯಾಯಕ್ಕಾಗಿ ಆಗ್ರಹಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದರು. ಚಾಟಿಯಿಂದ ತಾವೇ ಹೊಡೆದುಕೊಂಡಿದ್ದರು. ಅಣ್ಣಾಮಲೈ ಹೊಡೆದುಕೊಳ್ಳುವಾಗ ಬೆಂಬಲಿಗರು ಬಂದು ಅವರನ್ನು ತಡೆದಿದ್ದರು, ಈ ವಿಡಿಯೋ ಭಾರೀ ವೈರಲ್‌ ಆಗಿತ್ತು. ಇದೀಗ ಬಿಗ್‌ಬಾಸ್‌ ಮಾಜಿಸ್ಪರ್ಧಿ ಲಾಯರ್‌ ಜಗದೀಶ್‌, ಅಣ್ಣಾಮಲೈ ಅವರನ್ನು ಅಪಹಾಸ್ಯ ಮಾಡಿದ್ದಾರೆ. ನಾನು ಸೊಣ್ಣಾಮಲೈ ಗುಜರಾತಿ ಸೇಟುಗಳು ನನ್ನನ್ನ ಸಿಎಂ ಮಾಡ್ತೀನಿ ಅಂತಾ ಪೊಲೀಸ್ ಕೆಲಸದಿಂದ ಬಿಡಿಸಿಬಿಟ್ರು ಎಂದು ಅಣಕಿಸಿಕೊಂಡು, ಬಟ್ಟೆಯಿಂದ ಚಾಟಿಯಂತೆ ಮಾಡಿ ಅದರಿಂದ ಹೊಡೆದುಕೊಂಡಿದ್ದಾರೆ. ಜಗದೀಶ್‌ ಅವರ ವಿಡಿಯೋ ಕೂಡಾ ವೈರಲ್‌ ಆಗುತ್ತಿದೆ.

More