ರೀಲ್ಸ್‌ಗೆ ಬಳಸಿದ್ದ ಅಸಲಿ ಮಚ್ಚಿಗೆ ಬದಲಾಗಿ ನಕಲಿ ಮಚ್ಚು ನೀಡಿದ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್, ವಿನಯ್ ಗೌಡ
- ಬಿಗ್ ಬಾಸ್ ಖ್ಯಾತಿಯ ವಿನಯ್ ಮತ್ತು ರಜತ್ ಗೆ ತೀವ್ರ ಸಂಕಷ್ಟ ಎದುರಾಗಿದೆ. ರೀಲ್ಸ್ ನಲ್ಲಿ ಮಚ್ಚು ಬಳಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ವಿನಯ್ ಮತ್ತು ರಜತ್ ಪೊಲೀಸರಿಗೆ ನಕಲು ಮಚ್ಚನ್ನು ನೀಡಿ ಯಾಮಾರಿಸಲು ಯತ್ನಿಸಿದ್ದರು. ತನಿಖೆಯ ವೇಳೆ ಅದು ರೀಲ್ಸ್ ನಲ್ಲಿ ಬಳಸಿದ್ದ ಮಚ್ಚು ಅಲ್ಲ ಎಂದು ತಿಳಿದ ಕೂಡಲೇ ಪೊಲೀಸರು ಮತ್ತೆ ಅವರಿಬ್ಬರನ್ನ ವಶಕ್ಕೆ ಪಡೆದಿದ್ದರು. ಇದೀಗ ಅಸಲಿ ಮಚ್ಚು ಅಕ್ಷಯ್ ಸ್ಟುಡಿಯೋದಲ್ಲಿ ಇದೆ ಎಂಬ ಮಾಹಿತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದು, ಸ್ಥಳ ಮಹಜರು ನಡೆಸಿ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.