ಬಿಗ್‌ಬಾಸ್‌ ಕನ್ನಡ 11: ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರಿಟ್ಟ ಉಗ್ರಂ ಮಂಜು; ಸಹ ಸ್ಪರ್ಧಿಗೆ ಗೌತಮಿ ಜಾಧವ್‌ ಸಾಂತ್ವನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರಿಟ್ಟ ಉಗ್ರಂ ಮಂಜು; ಸಹ ಸ್ಪರ್ಧಿಗೆ ಗೌತಮಿ ಜಾಧವ್‌ ಸಾಂತ್ವನ

ಬಿಗ್‌ಬಾಸ್‌ ಕನ್ನಡ 11: ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರಿಟ್ಟ ಉಗ್ರಂ ಮಂಜು; ಸಹ ಸ್ಪರ್ಧಿಗೆ ಗೌತಮಿ ಜಾಧವ್‌ ಸಾಂತ್ವನ

Oct 29, 2024 10:35 PM IST Rakshitha Sowmya
twitter
Oct 29, 2024 10:35 PM IST

Bigg Boss Kannada 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಕೆಲವು ಸ್ಪರ್ಧಿಗಳ ನಡುವೆ ಗೆಳೆತನ ಹೆಚ್ಚಾದರೆ, ಕೆಲವರ ನಡುವೆ ಮನಸ್ತಾಪ ಹೆಚ್ಚುತ್ತಿದೆ. ಬಿಗ್‌ಬಾಸ್‌, ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ ನೀಡುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಮರೆಯಲಾಗದ ಬೇಸರದ ಘಟನೆಯನ್ನು ಹೇಳಿಕೊಳ್ಳುವಂತೆ ಬಿಗ್‌ಬಾಸ್‌ ಹೇಳುತ್ತಾರೆ. ಒಬ್ಬೊಬ್ಬರು ಸ್ಪರ್ಧಿಗಳು ಒಂದೊಂದು ವಿಚಾರವನ್ನು ಹೇಳಿಕೊಳ್ಳುತ್ತಾರೆ. ಬಿಗ್‌ಬಾಸ್‌ ಜೊತೆ ಹೇಳಿಕೊಂಡು ಟಾಸ್ಕ್‌ ಮುಗಿದ ನಂತರವೂ ಉಗ್ರಂ ಮಂಜು ಹಳೆಯ ದಿನಗಳನ್ನು ನೆನೆದು ಕಣ್ಣೀರಿಡುತ್ತಾರೆ. ನನ್ನ ತಾಯಿ ಮಾಡಿದ ಪುಣ್ಯ, ಆ ದೇವರ ಆಶೀರ್ವಾದದಿಂದಲೋ ಇಂದು ನಾನು ಇಲ್ಲಿ ಇದ್ದೇನೆ ಎಂದು ಮಂಜು ಅಳುತ್ತಾ ಹೇಳುತ್ತಾರೆ. ಮಂಜುಗೆ ಗೌತಮಿ ಸಾಂತ್ವನ ಮಾಡುತ್ತಾರೆ.

More