ಹನುಮಂತು- ಧನರಾಜ್ ನಿಮಗೆ ಇದು ಬೇಕಿತ್ತಾ? ಇಣುಕಿ ನೋಡಿ ಸಿಕ್ಕಿ ಬಿದ್ದ ಕಿಲಾಡಿ ಜೋಡಿಯ ಕಾಲೆಳೆದ ಕಿಚ್ಚ ಸುದೀಪ್
- ಬಿಗ್ ಬಾಸ್ ಕನ್ನಡ 11 ಸದ್ಯ ಕೊನೇ ಹಂತದತ್ತ ದಾಪುಗಾಲಿಡುತ್ತಿದೆ. ಈಗಾಗಲೇ 17 ಸ್ಪರ್ಧಿಗಳಿದ್ದ ಮನೆಯಲ್ಲೀಗ ಕೇವಲ 9 ಮಂದಿ ಉಳಿದಿದ್ದಾರೆ. ಮುಂದಿನ ಮೂರು ವಾರಗಳಲ್ಲಿ ಫಿನಾಲೆಯೇ ಬರಲಿದೆ. ಅಲ್ಲಿಗೆ ಸೀಸನ್ 11ರ ವಿಜೇತರು ಯಾರು ಎಂಬ ಕೌತುಕಕ್ಕೂ ಉತ್ತರ ಸಿಗಲಿದೆ. ಇದೀಗ ಭಾನುವಾರದ ಸೂಪರ್ ಸಂಡೇ ವಿಥ್ ಬಾದ್ಶಾ ಸುದೀಪ್ ಶೋನಲ್ಲಿ ಕಾಮಿಡಿ ಕಚಗುಳಿ ನೀಡಿದ್ದಾರೆ ಕಿಚ್ಚ. ಟ್ರೋಲ್ ಆಗುತ್ತಿರುವ ಕೆಲ ವಿಡಿಯೋಗಳನ್ನು ತೋರಿಸಿದ್ದಾರೆ. ಅದರಲ್ಲಿ ಗೌತಮಿ ಮತ್ತವರ ಪತಿ ಅಭಿಷೇಕ್ ಕಾಸರಗೋಡು ಏಕಾಂತದಲ್ಲಿದ್ದಾಗ, ಧನರಾಜ್ ಮತ್ತು ಹನುಮಂತು ಕದ್ದು ನೋಡಿದ್ದಾರೆ. ಇಡೀ ಮನೆ ಮಂದಿಯೂ ನಗುವಿನಲ್ಲಿ ಮಿಂದೆದ್ದಿದೆ.