ಕನ್ನಡ ಸುದ್ದಿ  /  Video Gallery  /  Bigg Boss Kannada Season 10 Fame Vinay Gowda Warned Those Who Made Bad Comments About Akka Anu Mnk

ಈ ಅಮ್ಮ, ಅಕ್ಕ ಅನ್ನೋಕೆ ನಮಗೆ ಬರಲ್ಲ ಅಂತಲ್ಲ!; ಅಕ್ಕ ಅನು ಬಗ್ಗೆ ಕೆಟ್ಟ ಕಾಮೆಂಟ್‌ ಮಾಡಿದವರ ಚಳಿ ಬಿಡಿಸಿದ ವಿನಯ್‌ ಗೌಡ VIDEO

Mar 15, 2024 02:44 PM IST Manjunath B Kotagunasi
twitter
Mar 15, 2024 02:44 PM IST
  • ಸಾಮಾಜಿಕ ಕಳಕಳಿಯ ಕೆಲಸಗಳತ್ತ ತೊಡಗಿಸಿಕೊಂಡಿರುವ ಅಕ್ಕ ಅನು ಬಗ್ಗೆಯೂ ಕೆಲವರು ನೆಗೆಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಚಾರ ವಿನಯ್‌ ಗೌಡ ಅವರ ಗಮನಕ್ಕೆ ಬರುತ್ತಿದ್ದಂತೆ, ಅಕ್ಕ ಅನು ಬೆನ್ನಿಗೆ ನಿಂತಿದ್ದಾರೆ. "ಅಕ್ಕ ಅನು ಅಪ್‌ಲೋಡ್‌ ಮಾಡಿರೋ ವಿಡಿಯೋ ನೋಡಿ ಸಿಕ್ಕಾಪಟ್ಟೆ ಬೇಜಾರಾಯ್ತು. ಅಕ್ಕ ಅನು ಒಳ್ಳೊಳ್ಳೆ ಕೆಲಸ ಮಾಡ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಬೆಳೆಸಲು ತಾವೇ ಹಣ ಹಾಕಿ ಸೇವೆ ಮಾಡ್ತಿದ್ದಾರೆ. ಅವರ ಆರೋಗ್ಯ ಸರಿಯಿಲ್ಲದಿದ್ದರೂ ನಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ ಈ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ಕಾಮೆಂಟ್‌ ಮಾಡೋದು, ಕೆಟ್ಟದಾಗಿ ಬೈಯೋದು. ಅಸಭ್ಯವಾಗಿರೋ ಪದಗಳನ್ನು ಬಳಕೆ ಮಾಡೋದು. ಇದರಿಂದ ಏನು ಸಿಗುತ್ತೆ ನಿಮಗೆ? ನಾನು ಹೇಳ್ತಿರೋದು ಈ ಫೇಕ್‌ ಪ್ರೋಫೈಲ್‌ ಇಟ್ಟುಕೊಂಡು ಕಾಮೆಂಟ್‌ ಮಾಡ್ತಾರಲ್ಲ ಅವರ ಬಗ್ಗೆ. ನೀವು ಮಾಡೋ ಈ ಕೆಲಸ ನಿಮಗೆ ನಿಜವಾಗ್ಲೂ ಇಷ್ಟ ಆಗ್ತಿದ್ರೆ, ಮನಸ್ಸು ಅನ್ನೋದಿದ್ದರೆ, ಮನುಷ್ಯತ್ವ ಅನ್ನೋದಿದ್ದರೆ, ಒಂದು ಸಲ ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮ್ಮ ಅಕ್ಕತಂಗಿಯರಿಗೆ, ಫ್ಯಾಮಿಲಿಗೆ, ತಾಯಿಗೆ ಅದೇ ಪದಗಳನ್ನು ಬಳಸಿ ನೋಡಿ ಅವರಿಂದ ಏನು ರಿಯಾಕ್ಷನ್‌ ಬರುತ್ತೆ ಅಂತ. ತಪ್ಪು ಅನ್ಸೋದಿಲ್ವಾ? ನಮ್‌ ಟ್ರೋಲ್‌ ಪೇಜ್‌ಗಳು ಮತ್ತು ಮೀಮ್‌ ಪೇಜ್‌ಗಳನ್ನು ನೋಡಿ ಕಲೀರಿ. ಹೀಗೆ ಮುಂದುವರಿದರೆ, ಸೈಬರ್‌ ಕ್ರೈಂಗೆ ಕಂಪ್ಲೇಟ್ ಹೋಗುತ್ತೆ. ಯಾರ್ಯಾರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದೀರಾ, ಅವರ ಅಡ್ರೆಸ್‌ ಸಿಗುತ್ತೆ. ಅಲ್ಲಿಯವರೆಗೂ ಹೋಗುವುದು ಬೇಡ. ಹಾಗಾಗಿ ನಿಮ್ಮ ಬಳಿ ಮನವಿ ಮಾಡ್ತಿದ್ದೇನೆ. ಈ ಅಮ್ಮ, ಅಕ್ಕ ಅನ್ನೋದಕ್ಕೆ ನಮಗೆ ಬರಲ್ಲ ಅಂತಲ್ಲ. ಅನ್ನಬಾರ್ದು ಅಂತ, ಅದೊಂದು ಗೌರವ. ಅನು ನನ್ನ ತಂಗಿ. ನಾನು ಆಕೆಯನ್ನು ತಂಗಿಯಂತೆಯೇ ಮನಸಿಂದ ನೋಡ್ತಿದ್ದೇನೆ. ಅವಳಿಗೆ ಏನೇ ಆದ್ರೂ ಅದು ನನ್ನ ಮೇಲಿಂದ ಹೋಗಬೇಕು. ದಯವಿಟ್ಟು ಅವಳಿಗೆ ತೊಂದರೆ ಕೊಡಬೇಡಿ" ಎಂದು ವಿನಯ್‌ ಗೌಡ ಸುದೀರ್ಘ ವಿಡಿಯೋ ಹಂಚಿಕೊಂಡಿದ್ದಾರೆ.
More