ಬಿಗ್‌ಬಾಸ್‌ ಕನ್ನಡ 11: ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸೋಪು ಹಚ್ಚಿ ಸ್ನಾನ ಮಾಡಲು ಹೊರಟ ಹನುಮಂತನನ್ನು ತಡೆದ ಮೋಕ್ಷಿತಾ ಪೈ, ಉಗ್ರಂ ಮಂಜು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸೋಪು ಹಚ್ಚಿ ಸ್ನಾನ ಮಾಡಲು ಹೊರಟ ಹನುಮಂತನನ್ನು ತಡೆದ ಮೋಕ್ಷಿತಾ ಪೈ, ಉಗ್ರಂ ಮಂಜು

ಬಿಗ್‌ಬಾಸ್‌ ಕನ್ನಡ 11: ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸೋಪು ಹಚ್ಚಿ ಸ್ನಾನ ಮಾಡಲು ಹೊರಟ ಹನುಮಂತನನ್ನು ತಡೆದ ಮೋಕ್ಷಿತಾ ಪೈ, ಉಗ್ರಂ ಮಂಜು

Published Oct 22, 2024 02:42 PM IST Rakshitha Sowmya
twitter
Published Oct 22, 2024 02:42 PM IST

ಬಿಗ್‌ಬಾಸ್‌ ಸೀಸನ್‌ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮನೆಯಿಂದ ಮೂವರು ಸ್ಪರ್ಧಿಗಳು ಹೊರ ಹೋಗಿದ್ದಾರೆ. ಮನೆಗೆ ಹೊಸ ಸದಸ್ಯನ ಎಂಟ್ರಿ ಆಗಿದೆ. ಸರಿಗಮಪ ಖ್ಯಾತಿಯ ಗಾಯಕ ಹನುಮಂತ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಹನುಮಂತ, ಸ್ಪರ್ಧಿಯಾಗಿ ಬಂದಿದ್ದಾರೋ, ಅತಿಥಿಯಾಗಿ ಬಂದಿದ್ದಾರೋ ಕನ್ಫರ್ಮ್‌ ಆಗಿಲ್ಲ. ಸದ್ಯಕ್ಕೆ ಹೊಸ ಸದಸ್ಯ ಹನುಮಂತನೇ ಮನೆಗೆ ಕ್ಯಾಪ್ಟನ್‌ ಆಗಿದ್ದಾರೆ. ಸ್ನಾನ ಮಾಡಲು ಸ್ವಿಮ್ಮಿಂಗ್‌ ಪೂಲ್‌ ಬಳಿ ಬರುವ ಹನುಮಂತ, ಅಲ್ಲೇ ಕೂತಿದ್ದ ಮೋಕ್ಷಿತಾ ಹಾಗೂ ಗೌತಮಿ ಇಬ್ಬರನ್ನೂ ಅಕ್ಕಾರೆ, ಒಳಗೆ ಹೋಗಿ, ನಾ ಜಳಕ ಮಾಡಕತ್ತೀನಿ ಎನ್ನುತ್ತಾರೆ. ಪರವಾಗಿಲ್ಲ ನಾವು ನೋಡುವುದಿಲ್ಲ ನಿಮ್ಮ ಪಾಡಿಗೆ ಮಾಡಿ ಎಂದು ಮೋಕ್ಷಿತಾ ಹೇಳುತ್ತಾರೆ. ಇಲ್ಲಿ ಸೋಪು, ಶಾಂಪೂ ಬಳಸಿ ಸ್ನಾನ ಮಾಡುವಂತಿಲ್ಲ. ಸ್ವಲ್ಪ ಸಮಯ ಇಲ್ಲಿ ನೀರಿನಲ್ಲಿ ಆಟವಾಡಿ ನಂತರ ಒಳಗೆ ಹೋಗಿ ಸ್ನಾನ ಮಾಡಿ ಎಂದು ಉಗ್ರಂ ಮಂಜು ಹನುಮಂತನಿಗೆ ಸಲಹೆ ನೀಡುತ್ತಾರೆ.

More