ಬಿಕೆ ಹರಿಪ್ರಸಾದ್ ನಮ್ಮ ನಾಯಕ, ಭೇಟಿ ಸಹಜ; ರಾಜಕೀಯ ಊಹಾಪೋಹಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
- ವಕ್ಫ್ ನೀತಿಯನ್ನ ತಿದ್ದುಪಡಿಗೊಳಿಸಿ ನೂತನ ಮಸೂದೆಯನ್ನ ಮಂಡಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರಕ್ಕೆ ಅಲ್ಪಸಂಖ್ಯಾತರನ್ನ ಕಂಡರೆ ಆಗೋದಿಲ್ಲ, ಎನ್‌ಡಿಎ ಒಕ್ಕೂಟ ಇರೋದೇ ಹಾಗೆ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರನ್ನ ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಅವರೂ ಕೂಡ ನಮ್ಮ ಪಾರ್ಟಿಯವರೇ ಅಲ್ವಾ ಎಂದು ಸಿಎಂ ಪ್ರಶ್ನಿಸಿದ್ದಾರೆ.